3,334 total views
ಸಿಂದಗಿ : ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಕುರಿತು ಸಿಂದಗಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಕೊಡಲಾಯಿತು. ಕಳೆದ ಹಲವು ತಿಂಗಳುಗಳಿಂದ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಘಟನೆಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದ ಮಮತಾ ಸರ್ಕಾರವು ಇಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ಟಿಎಂಸಿ ಗೂಂಡಾಗಳಿಂದ ಇಂತಹ ಅನೇಕ ಅತ್ಯಾಚಾರಗಳು ನಡೆದಿವೆ ಆದರೆ ಮಮತಾ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಂಗಾಳದಲ್ಲಿ ನಡೆಯುತ್ತಿರುವ ಈ ಘಟನೆಗಳು ಮಾನವೀಯತೆಗೆ ನಾಚಿಕೆಗೇಡು. ಈ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಮಮತಾ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರು ವಿಶಾಲ ನಾಯ್ಕೊಡಿ ಮಾತನಾಡಿದರು ಮತ್ತು ಹಿರಿಯಕಾರ್ಯಕರ್ತರಾದ ಶ್ರೀಧರ್ ಭಜಂತ್ರಿ. ಸುನಿಲ ರಾಠೋಡ್. ನಿಂಗರಾಜ ಪೂಜಾರಿ.ಭೀಮಾಶಂಕರ್ಹಿರೇಮಠ್. ಶ್ರಾವಣಕುಮಾರ ಹೂವಿನ್ನಳ್ಳಿ. ಮಲ್ಲಿಕಾರ್ಜುನ ವಿದ್ಯಾನಿಕೇತನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ ಯಮನಪ್ಪ ಚೌಧರಿ