2,385 total views
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದ ಜನಹಿತವನ್ನು ಸಂಪೂರ್ಣ ಮರೆತು ನೂರಾರು ಕೋಟಿ ಅವ್ಯವಹಾರದ “ವಾಲ್ಮೀಕಿ” ಹಗರಣ ಮತ್ತು ಸಾವಿರಾರು ಕೋಟಿ ಅವ್ಯವಹಾರದ “ಮೂಡಾ” ಹಗರಣ ಹಾಗೂ ವರ್ಗಾವಣೆ ದಂಧೆ ಸೇರಿದಂತೆ ಇನ್ನೂ ಅನೇಕ ಇಲಾಖೆಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ “ಬಿಜೆಪಿ-ಜೆಡಿಎಸ್” ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಯುತ್ತಿರುವ “ಮೈಸೂರು ಚಲೋ” ಬೃಹತ್ ಪಾದಯಾತ್ರೆಯ 6ನೇ ದಿನದ ಕಾಲ್ನಡಿಗೆಯಲ್ಲಿ “ತೂಬಿನಕೆರೆಯಿಂದ-ಶ್ರೀರಂಗಪಟ್ಟಣದ” ವರೆಗೆ ಇಂದು ಆರಂಭಗೊಂಡ ಪಾದಯಾತ್ರೆಯಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗಿ ಸೇರಿದ್ದ ಸಾವಿರಾರು ಸಂಖ್ಯೆಯ ದೈವದುರ್ಲಭ ಕಾರ್ಯಕರ್ತರೊಂದಿಗೆ ಉದ್ಘೋಷ ಮೊಳಗಿಸುತ್ತಾ ಹೆಜ್ಜೆ ಹಾಕಲಾಯಿತು.
ಈ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು, ಶಾಸಕರಾದ ಶ್ರೀ ಅಶ್ವತ್ಥ್ ನಾರಾಯಣ ಅವರು, ಶ್ರೀ ಗುರುರಾಜ್ ಗಂಟೆಹೊಳೆ ಅವರು, ಶ್ರೀ ಅರವಿಂದ್ ಬೆಲ್ಲದ ಅವರು, ಮುಖಂಡರಾದ ಶ್ರೀ ದತ್ತಾತ್ರೇಯ ಅವರು, ಶ್ರೀ ಹಾಲಪ್ಪ ಅವರು ಸೇರಿದಂತೆ ಇನ್ನೂ ಅನೇಕ ಪ್ರಮುಖರು ಜೊತೆಗಿದ್ದರು.