2,558 total views
ತಮ್ಮನಿಗೆ ಕಿಡ್ನಿ ಹಾಗೂ ತನಗೆ ಬಂಗಾರ ಹಣ ನೀಡಬೇಕು ಎಂದು ಪತ್ನಿಗೆ ಕಿರುಕುಳ ನೀಡಿದ ಪೊಲೀಸ್ ಕಾನಸ್ಟೇಬಲ್ ರೇವಣಸಿದ್ಧ ಕೆಂಚಗೊಂಡ ವಿರುದ್ಧ ಆತನ ಪತ್ನಿಯಾದ ಜಗದೇವಿ (22)ಅವ್ರು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಿಸಿದ್ದಾರೆ . ಜಗದೇವಿ ವಿಜಯಪುರ ಜಿಲ್ಲೆಯ ಬಂಕಲಗಿಯ ಪೊಲೀಸಕಾನಸ್ಟೇಬಲ ರೇವಣಸಿದ್ದಪ್ಪ ಕೆಂಚಗೊಂಡ ಕಲ್ಕೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮದುವೆಯಲ್ಲಿ 10 ತೊಲೆ ಬಂಗಾರ ಎರಡು ಲಕ್ಷ ರೂಪಾಯಿ ಹಣ ಸಾಮಗ್ರಿಗಳು ಸೇರಿದಂತೆ ಒಟ್ಟು 15 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡಲಾಗಿದೆ ಇಷ್ಟು ಹಣ ಕೊಟ್ಟರು ಕಾನಿಸ್ಟೇಬಲ್ ಆದ ಪತಿರಾಯ ರೇವಣಸಿದ್ಧ ಕೆಂಚಗೊಂಡ ಇನ್ನಷ್ಟು ಹಣ ತರುವಂತೆ ಪಿಡಿಸುತ್ತಿದ್ದು ಅದೇ ರೀತಿಯಾಗಿ ತನ್ನ ತಮ್ಮನಿಗೆ ಕಿಡ್ನಿ ಫೇಲಾಗಿದ್ದು ತಮ್ಮನಿಗೆ ಕಿಡ್ನಿ ನೀಡುವಂತೆ ಕಿರುಕುಳ ನೀಡುತ್ತಿದ್ದು ಹಾಗೂ ಎರಡನೇ ಮಗುಕೂಡಾ ಹೆಣ್ಣು ಹುಟ್ಟುತ್ತೆ ಅದನ್ನು ತೆಗೆಯುವಂತೆ ವಿವಿಧ ರೀತಿಯ ಮಾನಸಿಕ ಕಿರುಕುಳ ನೀಡುತ್ತಿದ್ದು ಅಷ್ಟೇ ಅಲ್ಲದೆ ಹಣ ಬಂಗಾರ ಇನ್ನು ಕೊಡಬೇಕು ಎಂದು ಚಿತ್ರಹಿಂಸೆ ನೀಡಿ ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಅಷ್ಟೇ ಅಲ್ಲದೆ ತನ್ನ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿದ ತನ್ನ ಪತಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪತ್ನಿಯಾದ ಜಗದೇವಿ ಅವರು ದೂರು ನೀಡಿದ್ದಾರೆ ಇ ಪ್ರಕರ್ಣವನ್ನು ಗಂಬಿರವಾಗಿ ಪರಿಗಣಿಸಿದ ಠಾಣಾದಿಕಾರಿ ವಿಶ್ವನಾಥ ಮುದರೆಡ್ಡಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.