2,568 total views
ಸೈದಾಪುರ್ ಗ್ರಾಮದಲ್ಲಿ ಸಮೀರ್ವಾಡಿಯ ಕ್ರಾಸ್ ಚೆಕ್ ಪೋಸ್ಟ್ ಬಳಿ ಮಹಾಲಿಂಗಪುರ ಪೊಲೀಸ್ ಠಾಣೆಯ ಪ್ರಕಟಣೆಯಾಗಿದೆ, ಇಂದು ಸಾರ್ವಜನಿಕರಲ್ಲಿ ಮನವಿ, ಕಡ್ಡಾಯವಾಗಿ ವಾಹನ ಚಲಿಸುವಾಗ ಮೊಬೈಲ್ ಗಳ ಬಳಕೆ ಮತ್ತು ಹೆಲ್ಮೆಟ್ ಧರಿಸದೆ ಇರುವುದು, ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಕಾರ್ಡ್, ಮತ್ತು ಹೋಗೆಯ ಪ್ರಮಾಣ ಪತ್ರ ಇಲ್ಲದಿರುವುದು, ಮತ್ತು ಎಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಬಳಸದೆ ಓಡಾಡುತ್ತಿರುವ ವಾಹನಗಳಿಗೆ ಇನ್ನು ಮುಂದೆ ಕಾನೂನು ಸೂಕ್ತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ವಾಹನ ಚಲಿಸುವಾಗ ಮೊಬೈಲ್ ಬಳಸಿದರೆ 1500 ದಂಡವನ್ನು ವಿಧಿಸಲಾಗುವುದು, ಹೆಲ್ಮೆಟ್ ಧರಿಸದೆ ಓಡುತ್ತಿರುವವರಿಗೆ 500 ದಂಡ,ಮತ್ತು ಚಿಕ್ಕ ಮಕ್ಕಳ ಕೈಯಲ್ಲಿ ಬೈಕ್ ಕೊಟ್ಟರೆ ಸರ್ಕಾರದ ಆದೇಶದ ಪರವಾಗಿ 25000 ದಂಡ ಮತ್ತು ವಾಹನ ಮಾಲೀಕನಿಗೆ 2000 ತಂಡ ಲೈಸೆನ್ಸ್ ರದ್ದುಪಡಿಸಲಾಗುವುದು. ಇತ್ತೀಚಿಗೆ ಬಾಗಲಕೋಟನಲ್ಲಿ ಜಿಲ್ಲೆಯಲ್ಲಿ 400 ಕೇಸ್ ಗಳು ಆಕ್ಸಿಡೆಂಟ್ ಮುಖಾಂತರ ವಾಗುತ್ತಿದ್ದು, ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ, ಇನ್ನು ಮುಂದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಚ್ಚಾಗಿದ್ದು ಜನರು ಸಮಾಧಾನವಾಗಿ ವಾಹನ ಚಲಾಯಿಸಬೇಕಾಗಿದೆ. ಈ ಪ್ರಕಟಣೆಯಲ್ಲಿ ಮಾತನಾಡಿರುವ ಶ್ರೀ ಮಧು ಪ್ರವೀಣ್ ಬೀಳಗಿ( ಪಿ ಎಸ ಐ), ಎ ಸ್ಪಿ ಜೈನರ್ ( ಎ ಸ ಐ), ಮ ಬಿ ಕೋಲಾರ ( ಎ ಸ ಐ), ಡಿ ಮ ತಳವಾರ ( ಹೆಡ್ ಕಾನ್ಸ್ಟೇಬಲ್ ) ಮತ್ತು ಇನ್ನು ಹಲವರು ಹೈವೆ ಕಂಟ್ರೋಲ್ ಅಧಿಕಾರಿಗಳು ಭಾಗಿಯಾಗಿದ್ದರು.