2,592 total views
ಕಲಬುರಗಿ:- ಶಿಕ್ಷಣವು ಮಗುವಿಗೆ ವಿದ್ಯೆ, ಬುದ್ದಿ, ಕೌಶಲಗಳನ್ನು ನೀಡಿ, ದೇಶದ ಅಮೂಲ್ಯ ಮಾನವ ಸಂಪನ್ಮೂಲವನ್ನಾಗಿಸುವ ಮೂಲ ರಾಷ್ಟçದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಮೂಲ, ಬುನಾದಿ ಹಂತದ ಶಿಕ್ಷಣವಾದ ಪ್ರಾಥಮಿಕ ಹಂತವು ಮಕ್ಕಳಿಗೆ ಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಶಿಕ್ಷಕರು ಜವಾಬ್ದಾರಿ, ಬದ್ಧತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡುವುದು ಅಗತ್ಯವಾಗಿದೆ ಎಂದು ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಸಮೀಪವಿರುವ ಕನ್ನುನಾಯಕ ಹನುಮಾನ ನಗರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಬಾರಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನೀಲಕಂಠಯ್ಯ ಹಿರೇಮಠ ಅವರಿಗೆ ಶಾಲೆಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಹಾಗೂ ವಿವಿಧ ಸಂಘ-ಸAಸ್ಥೆಗಳ ಅಭಿನಂದನಾ ಸಮಾರಂಭವನ್ನು ಉದ್ಘಟಿಸಿ ಅವರು ಮಾತನಾಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ಆಳಂದ ಹಿರೇಮಠದ ಪೂಜ್ಯ ಸಿದ್ದಲಿಂಗ ಶಿವಾಚಾರ್ಯರು, ನೀಲಕಂಠಯ್ಯ ಹಿರೇಮಠ ಅವರು ತಮ್ಮ ಸೇವೆಯಲ್ಲಿ ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಹೊಂದಿದ್ದರು. ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ ಸಮಾಜಮುಖಿ, ಆದರ್ಶ ಶಿಕ್ಷಕರು, ಸಮಾಜ ಸೇವಕರಾಗಿದ್ದಾರೆ. ವೃತ್ತಿಯಿಂದ ನಿವೃತ್ತಿಯಾದರೂ ಕೂಡಾ ಸಮಾಜಮುಖಿ ಕಾರ್ಯಗಳು, ಧಾರ್ಮಿಕ ಆಚರಣೆಗಳು ನಿಮ್ಮಿಂದ ಜರುಗಲಿ ಎಂದು ಆಶಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ನೀಲಕಂಠಯ್ಯ ಹಿರೇಮಠ, ನಾನು ಯಾವುದೇ ಶಾಲೆಯಲ್ಲಿ ಸೇವೆ ಸಲ್ಲಿಸಲಿ, ಅದು ನನ್ನ ಶಾಲೆ, ಸ್ವಂತ ಮಕ್ಕಳು ಎಂಬ ಭಾವನೆಯಿಂದ ಸೇವೆ ಸಲ್ಲಿಸಿದ್ದೇನೆ. ‘ಪರಿಸರದ ಉಳಿವಿನಲ್ಲಿದೆ ನಮ್ಮ ಉಸಿರು’ ಎಂಬ ತತ್ವವನ್ನು ಅಳವಡಿಸಿಕೊಂಡು ನಾನು ಸೇವೆ ಸಲ್ಲಿಸಿರುವ ಶಾಲೆಗಳಲ್ಲಿ ಗಿಡಗಳನ್ನು ನೆಡುವುದು, ಅವುಗಳ ಪೋಷಣೆ ಮಾಡುವ ಪರಿಸರ ಸಂರಕ್ಷಣಾ ಕಾರ್ಯ ಮಾಡಿದ್ದೇನೆ. ಒಟ್ಟಾರೆಯಾಗಿ ನನ್ನ ಸೇವೆ ತೃಪ್ತಿ ತಂದಿದೆ ಎಂದರು.
ಮುದ್ದಡಗಾ ಹಿರೇಮಠದ ಪೂಜ್ಯ ಸಜ್ಜೋದಾತ ರೇಣುಕಾಚಾರ್ಯ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶಾಲೆಯ ಪ್ರಬಾರಿ ಮುಖ್ಯ ಶಿಕ್ಷಕ ಮಾಧವ ಬಾಲ್ಕೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ ಸಿ.ಜಾಧವ, ಇಸಿಓ ಪ್ರಕಾಶ ಕೊಟ್ರೆ, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಿಆರ್ಪಿವೀರೇಶ ಬೋಳಶೆಟ್ಟಿ ನರೋಣಾ, ಪ್ರಮುಖರಾದ ಬಸವರಾಜ ದೊಡ್ಡಮನಿ, ಶೈಲಜಾ ಪೋಮಾಜಿ, ಕೇದಾರ ಕುಲಕರ್ಣಿ, ಮಲ್ಲಿಕಾರ್ಜುನ, ಅರುಣಕುಮಾರ ಸ್ವಾಮಿ, ವಿಠಲ ಕುಂಬಾರ, ಮಲ್ಲಿಕಾರ್ಜುನ ಕಡ್ಲಾ, ಶಂಕ್ರೆಮ್ಮ ಎನ್.ಹಿರೇಮಠ, ಶ್ರೀಧರ ಎನ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವರದಿ-ಡಾ ಎಂ ಬಿ ಹಡಪದ ಸುಗೂರ ಎನ್