2,513 total views
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ಸಮುದಾಯಗಳ ಧ್ವನಿಯಾಗಿದ್ದಾರೆ ಇಂತಹ ಮಹಾನ್ ನಾಯಕನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳು ಕೇಳಿ ಬರುತ್ತಿರುವ ಕಾರಣ. ರಾಜ್ಯದ ನಿಷ್ಠಾವಂತಹ ಮುಖ್ಯಮಂತ್ರಿ ದೀನ ದಲಿತರ ಆಶಾಕಿರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಹಲವಾರು ಜನೋಪಕಾರಿ ಕಾರ್ಯಗಳನ್ನು ಮಾಡಿದ್ದಾರೆ ಇವರ ಕಾರ್ಯ ಶೈಲಿಯನ್ನು ಸಹಿಸದ ಕೆಲವು ದುಷ್ಟ ಶಕ್ತಿಗಳು ಮುಖ್ಯಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಪಿತೂರಿ ನಡೆಸಿವೆ. ಇಂತಹ ದುಷ್ಟ ಶಕ್ತಿಗಳಿಗೆ ನಾವು ಯಾವತ್ತು ಹೆದರುವುದಿಲ್ಲ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ಮತ್ತು ಅವರ ಪರವಾಗಿ ಹೋರಾಟ ಮಾಡುವುದಕ್ಕೆ ನಾವು ಯಾವತ್ತು ಸದಾ ಸಿದ್ಧ ಎಂದು ಯಡ್ರಾಮಿ ತಾಲೂಕ ಅಹಿಂದ್ ಸಂಘಟನೆಯ ತಾಲೂಕ ಅಧ್ಯಕ್ಷರಾದ ಶಿವಶಂಕರ್ ಗುಂಡುಗುರ್ತಿಯವರು ಇಲ್ಲಸಲ್ಲದ ಆರೋಪ ಹೊರೀಸುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕಿಡಿಕಾರಿದ್ದಾರೆ ಇದೇ ರೀತಿ ಮುಖ್ಯಮಂತ್ರಿಗಳ ವಿರುದ್ಧ ಅಪಪ್ರಚಾರ ರಾಜ್ಯದಲ್ಲಿ ಮುಂದುವರೆದರೆ ಇದಕ್ಕೆ ನಾವು ಕಾಲಕ್ಕೆ ತಕ್ಕ ಬುದ್ಧಿಯನ್ನು ಕಲಿಸಲಿದ್ದೇವೆ ನಮ್ಮ ಸಮುದಾಯದ ತಾಕತ್ತು ಏನು ಎಂಬುದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನೇ ಕಲಿಸುತ್ತೇವೆ ಎಂದು ತಾಲೂಕ ಅಧ್ಯಕ್ಷರಾದ ಶಿವಶಂಕರ್ ಗುಂಡಗುರ್ತಿ ಬಳಬಟ್ಟಿಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ