2,418 total views
ಶುಕ್ರವಾರ ಸುರಿದ ಭಾರಿ ಮಳೆಗೆ ಇಲ್ಲಿನ ಪಟಗಾರ ಕೊಪ್ಪದ ವಸತಿ ಪ್ರದೇಶಕ್ಕೆ ಹಳ್ಳ ಕೊಳ್ಳಗಳ ನೀರು ನುಗ್ಗಿ ಸುಮಾರು 30 ಮನೆ ಜಲಾವೃತಗೊಂಡಿದ್ದು ತಕ್ಷಣ ಇವರನ್ನು ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್ ನಲ್ಲಿ ಕಾಳಜಿ ಕೇಂದ್ರ ತೆರೆದು ಶಾಲೆಗೆ ಸ್ಥಳಾಂತರಿಸಲಾಗಿದೆ. 75 ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರದಲ್ಲಿ ವಸತಿ ಪಡೆದಿದ್ದಾರೆ ಆರೋಗ್ಯ ತಪಾಸಣೆಗೆ ಒಳಪಡಿಸಿ ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಹಿರೇಗುತ್ತಿ ಅಧ್ಯಕ್ಷರಾದ ಶಾಂತಾ ಎನ್ ನಾಯಕ. ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ.ಉಪಾಧ್ಯಕ್ಷ ಶ್ರೀಕಾಂತ ನಾಯಕ. ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ. ಫಾರೆಸ್ಟರ್ ರಾಘವೇಂದ್ರ ನಾಯ್ಕ ಸಿಬ್ಬಂದಿಗಳು ಊರಿನ ಉಮೇಶ ಗಾಂವಕರ.ನೀಲಕಂಠ ನಾಯಕ. ನಾಗೇಶ ಟಿ ನಾಯಕ. ಗ್ರಾ.ಪಂ ಸದಸ್ಯ ರಮಾಕಾಂತ ಹರಿಕಂತ್ರ.ನಾಗರತ್ನ ಗಾಂವಕರ. ಆನಂದ ನಾಯಕ. ಗ್ರಾ.ಪಂ ಪಿ.ಡಿ.ಓ. ನವೀನ ನಾಯ್ಕ.ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರ. ಶಿಕ್ಷಕ ನಾಗರಾಜ ನಾಯಕ. ಗ್ರಾಮ ಆಡಳಿತಾಧಿಕಾರಿ ಬಿ ರೇವಣ್ಣ ಸಿದ್ಧೇಶ್. ದಾಮೋದರ ಶಾನಭಾಗ.ಶ್ರೀನಿವಾಸ ನಾಯ್ಕ. ವಾರ್ಡ ಸದಸ್ಯರು ಗ್ರಾ ಪಂ. ಸೆಕ್ರಟರಿ ಸಂಧ್ಯಾ ಪಡ್ತಿ. ವಿಠ್ಠಲ. ಕಮಲಾಕರ ಮತ್ತಿತರರು ಅಂಗನವಾಡಿ ಕಾರ್ಯಕರ್ತೆಯರಾದ ಕಮಲಿ ನಾಯಕ ಬೇಬಿ ನಾಯಕ ಆಶಾಕಾರ್ಯ ಕರ್ತೆ ಗೀತಾ ನಾಯ್ಕ. ನಾಗಮ್ಮ ಹಳ್ಳೇರ ಹಾಗೂ ಹೈಸ್ಕೂಲಿನ ಗೋಪಾಲಕೃಷ್ಣ ಗುನಗಾ.ಗೋವಿಂದ ನಾಯ್ಕ.ಅಡುಗೆ ಸಿಬ್ಬಂದಿಗಳು ಸ್ಥಳದಲ್ಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಿದರು.