2,618 total views
ಹೊನ್ನಾವರ:
ಇಲ್ಲಿನ ಚಂದಾವರ ನಿವಾಸಿಗಳಾದ ರೆಮೆಂದಿ ಮತ್ತು ಸಾವೆರ್ ಫೆರ್ನಾಂಡಿಸ್ ಇವರ ಪುತ್ರ ಡೆರಿಕ್ ಫೆರ್ನಾಂಡಿಸ್ ಕಳೆದ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ’ಚಾರ್ಟರ್ಡ್ ಎಕೌಂಟಂಟ್'(ಸಿ.ಎ)ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರಾಗಿದ್ದು,ಪ್ರೌಢ ಶಿಕ್ಷಣ ಗುರು ಪ್ರಸಾದ್ ಪ್ರೌಢ ಶಾಲೆ ಮಲ್ಲಾಪುರ ಮತ್ತು ಪದವಿ ತರಗತಿಗಳು ಸರಕಾರಿ ಪದವಿಪೂರ್ವ ಕಾಲೇಜು ನೆಲ್ಲಿಕೇರಿ ಹಾಗೂ ಡಾ||ಎ.ವಿ. ಬಾಳಿಗಾ ಡಿಗ್ರಿ ಕಾಲೇಜು ಕುಮಟಾದಲ್ಲಿ ಪೂರೈಸಿದ್ದಾರೆ.ಉತ್ತಮ
ಶ್ರೇಯಾಂಕದೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡೆರಿಕ್ ಫೆರ್ನಾಂಡಿಸ್ರವರ ಸಾಧನೆಗೆ ಪಾಲಕರು,ಸಂಬಂಧಿಕರು,ಗುರುವೃಂದದವರು,ಹಿತೈಷಿಗಳು ಅಭಿನಂದಿಸಿ ಶುಭ ಕೋರಿದ್ದಾರೆ.
ವರದಿ:- ನೀಲನ ಮೀರಾಂದ,