2,712 total views
ಹುನಗುಂದ :ಯಾವುದೇ ಅಹಿತಕರ ಮತ್ತು ವಿವಾದಾತ್ಮಕ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಪಿ ಎಸ್ ಐ ಚನ್ನಯ್ಯ ದೇವೂರ ಹೇಳಿದರು.ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಮೊಹರಂ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಮಾತನಾಡಿದ ಅವರು, ಹುನಗುಂದ ಪಟ್ಟಣದ ಸೇರಿದಂತೆ ಇಡೀ ತಾಲೂಕು ಶಾಂತಿ ಸೌಹಾರ್ದತೆಗೆ ವಿಶೇಷ ಹೆಸರಾಗಿದೆ. ಅದರಂತೆ ಈ ಬಾರಿಯು ತಾಲೂಕಿನಾದ್ಯಂತ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಹಾಗೂ ಶಾಂತಿಯಿಂದ ಆಚರಿಸಬೇಕು. ಇನ್ನು ಮೊಹರಂ ಹಬ್ಬದಲ್ಲಿ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿವಿಯನ್ನು ಅಳವಡಿಸಲಾಗುವುದು. ಹಬ್ಬದ ಸಂದರ್ಭದಲ್ಲಿ ಜಗಳ ಮತ್ತು ಕೋಮು ಮನೋಭಾವನೆಯನ್ನು ತೋರುವ ಮತ್ತು ವೈಯಕ್ತಿಕ ಜಗಳವನ್ನು ಮೊಹರಂ ಹಬ್ಬದಲ್ಲಿ ತಂದು ಗಲಭೆಯನ್ನು ಸೃಷ್ಠಿಸುವರ ಮೇಲೇ ನಿರ್ಧಾಕ್ಷಣ್ಯ ಕ್ರಮ ಕೈ ಕೊಳ್ಳಲಾಗುವುದು.