2,548 total views
ಹೊನ್ನಾವರ :-ನವ ಭಾರತೀಯ ಕಿಸಾನ ಸಂಘಟನೆಯ ಹೊನ್ನಾವರ ಘಟಕವನ್ನು ಪಟ್ಟಣದ ಪ್ರಭಾತನಗರದ ಚರ್ಚನ ಸಭಾಭವನದಲ್ಲಿ ಗುರುವಾರದಂದು ನಡೆಯಿತು.ಈ ಸಂಘಟನೆಯು ರೈತರ ಪರ ಸಂಘಟನೆಯಾಗಿದ್ದು, ಇದು ರಾಷ್ಟ್ರೀಯ ಸಂಘಟನೆಯಾಗಿದೆ. ಜೈ ಜವಾನ್ ಜೈ ಕಿಸಾನ್ ಘೋಷಣೆಯೊಂದಿಗೆ ದೀಪ ಬೆಳೆಗಿಸುವುದರ ಮೂಲಕ ಹೊನ್ನಾವರ ಘಟಕವನ್ನು ಉದ್ಘಾಟಿಸಿದರು.ದೀಪ ಬೆಳೆಗಿಸುವುದರ ಮೂಲಕ ಕಾರವಾರ ಚರ್ಚನ ಫಾದರ್ ನಿರ್ಮಲ್ ಕುಮಾರ್ ಮಾತನಾಡಿ ಈ ಸಂಘಟನೆ ಹೊನ್ನಾವರದಲ್ಲಿ ಪ್ರಾರಂಭಿಸಿರುವುದು ಅದು ಸಹ ಕರ್ನಾಟಕದಲ್ಲಿ ಮೊಟ್ಟಮೊದಲ ಸಂಘಟನೆ ಆಗಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ಇದರಲ್ಲಿ ಎಲ್ಲಾ ಧರ್ಮದವರು ಕೂಡಿ ಮಾಡುತ್ತಿರುವುದು ಖುಷಿಯ ವಿಷಯ. ನಾನೊಬ್ಬ ರೈತರ ಮಗನಾಗಿರುವುದು ನನಗೆ ಸಂತೋಷ ಇದೆ. ನಮ್ಮ ದೇಶ ಇರುವುದು ರೈತರಿಂದ. ಹಾಗಾಗಿ ನಾವೆಲ್ಲ ಕಿಸಾನ್ ಸಂಘಟನೆಯಲ್ಲಿ ತೊಡಗೋಣ ಎಂದು ಹೇಳಿದರು.ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಾಧ್ಯಕ್ಷ ನಿರ್ಮಲ್ ಶುಕ್ಲ ಮಾತನಾಡಿ ರೈತರ ಮೇಲೆ ಅತ್ಯಾಚಾರ ನಡೆಯುತ್ತಿದೆ. ರೈತರಿಗೆ ಸರಕಾರ ದಬ್ಬಾಳಿಕೆಯನ್ನು ಮಾಡುತ್ತಿದ್ದು, ಇದನ್ನೆಲ್ಲ ಓಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ರೈತರಿಂದ ದೇಶ, ಜೀವನ ನಡೆಸುತ್ತಿರುವುದು ತಮ್ಮೆಲ್ಲರಿಗೂ ತಿಳಿದಿರುವಂತಹ ವಿಷಯ ಹಾಗಾಗಿ ನಾವೆಲ್ಲಾ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ನಾವು ಉತ್ತರಪ್ರದೇಶ, ರಾಜಸ್ತಾನ, ದೆಹಲಿ, ಗುಜರಾತ ಮತ್ತಿತರ ರಾಜ್ಯಗಳಲ್ಲಿ ನಮ್ಮ ಸಂಘಟನೆಯು ಸಕ್ರೀಯವಾಗಿದ್ದು ಕರ್ನಾಟಕದಲ್ಲೂ ಸಹ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಸಭೆಯಲ್ಲಿನ ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ನವಭಾರತೀಯ ಮಹಾಮಂತ್ರಿ ಅನಿಷ ಪತೆಪುರಿ, ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ಕ್ಷಮಾ ಪತೆಪುರಿ, ಸೂರ್ಯಮಣಿ ಶುಕ್ಲಾ, ಪಾಸ್ಕೋಲ್ ಡಾಯಸ್, ಮೂಹಮದ್ ಸಾಬ್, ಅಬ್ದುಲ್ ಶೇಖ್, ಇರ್ಷಾದ ಶೇಖ್, ಶಂಕರ ನಾಯ್ಕ, ಸವಿತಾ ಪಾವಸ್ಕರ, ಮಹೇಶ ಮೇಸ್ತ ಹಾಜರಿದ್ದರು.ಈ ಸಂದರ್ಭದಲ್ಲಿ ಸಾಂತೋಲಿನ್ ಪಿಂಟೋ ಸ್ವಾಗತಿಸಿದರು.ವಿಲಿಯಂ ಪ್ರಾಸ್ತಾವಿಕವಾಗಿ ಸಂಘಟನೆಯ ಉದ್ದೇಶದ ಬಗ್ಗೆ ಹೇಳಿದರು,ಪೆಟ್ರಿಕ್ ವಂದಿಸಿದರು.
ವರದಿ:- ನೀಲನ ಮಿರಾoದಾ.