2,533 total views
ಗದಗ್ನಲ್ಲಿ ಜುಲೈ ೬ ಮತ್ತು ೭ರಂದು ಗೋಲ್ಡನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಹಮ್ಮಿಕೊಂಡಿರುವ ಗದಗ್ ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ ೨೦೨೪ರಲ್ಲಿ ಬಳ್ಳಾರಿಯ ವೀ.ವಿ ಸಂಘದ- ಎಸ್.ಕೆ ಮೋದಿ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಡಿ. ಸೂರ್ಯ ವಿಹಾನ್ – ಕಾಟ ವಿಭಾಗದಲ್ಲಿ ಪ್ರಥಮ ಮತ್ತು ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ. ಮೋಹಿತ್ ಎಚ್.ಎಸ್- ಕಾಟ ವಿಭಾಗದಲ್ಲಿ ಪ್ರಥಮ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ. ಮನಸ್ವಿ – ಕಾಟ ವಿಭಾಗದಲ್ಲಿ ತೃತೀಯ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ. ಹರ್ಷವರ್ಧನ್ – ಕಾಟ ವಿಭಾಗದಲ್ಲಿ ಪ್ರಥಮ.ವನ್ನಶ್ರೀ- ಕಾಟ ವಿಭಾಗದಲ್ಲಿ ದ್ವಿತೀಯ ಮತ್ತು ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ವೀ. ವಿ ಸಂಘದ ಪದಾಧಿಕಾರಿಗಳು ಹಾಗೂ ಎಸ್.ಕೆ ಮೋದಿ ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ, ಪ್ರಾಂಶುಪಾಲರಾದ ಶ್ರೀಮತಿ ಸುನಂದ ಎಂ ಪಾಟೀಲ್ ಹಾಗೂ ಕರಾಟೆ ತರಬೇತಿದಾರಾದ ಕುಮಾರಸ್ವಾಮಿ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.