3,394 total views
ಕಲಬುರಗಿ*:- ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸದ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲು ಹಿಂದಿನ ಚುನಾವಣೆಯಲ್ಲಿ ಸರ್ಕಾರಿ ನೌಕರರಿಗೆ ಭರಪೂರ ಭರವಸೆಯ ಮಾತನ್ನು ನೀಡಿ ಇದೀಗ ಜಾಣ ಮರೆವು ತೋರಿಸುತ್ತ ನೌಕರರ ಜೀವನದಲ್ಲಿ ನಾಟಕವಾಡುತ್ತ ದಿಕ್ಕೊಂದು ಸುದ್ದಿ ಹರಿಬಿಟ್ಟು ಎಲ್ಲರ ದಾರಿತಪ್ಪಿಸುತ್ತಿದೆ ಎಂದು ವಿಧಾನ ಪರಿಷತ ಸದಸ್ಯ ಶಶೀಲ ಜಿ.ನಮೋಶಿ ಅವರು ಆರೋಪಿಸಿದ್ದಾರೆ.
ಇಂದು ಶಾಸಕಾಂಗ ಮತ್ತು ಕಾರ್ಯಾಂಗದ ನಡುವ ಬಹುದೊಡ್ಡ ಕಂದಕ ನಿರ್ಮಾಣವಾಗಿದ್ದು ಈ ಸರ್ಕಾರವು ತಮ್ಮ ಗ್ಯಾರೆಂಟಿ ಯೋಜನೆಗಳ ಕಾರ್ಯರೂಪಕ್ಕೆ ತರಲು ಇದೇ ಸರ್ಕಾರಿ ನೌಕರರು ಶ್ರಮಿಸಿದರೂ ಇದೆ ಯೋಜನೆಗಳಿಂದ ಸರ್ಕಾರಿ ನೌಕರರ ವೇತನವನ್ನೂ ನ್ಯಾಯಯುತವಾಗಿ ನೀಡದೆ ಮಾತನ್ನು ತಪ್ಪಿದೆ.
ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳÀು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಾಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಅಲ್ಲದೇ 7 ನೇ ವೇತನ ಆಯೋಗದ ವರಧಿ ಜಾರಿ ಮಾಡದೇ ಸರ್ಕಾರಿ ನೌಕರರ ಹಕ್ಕನ್ನು ಕಸಿಯುತ್ತಿರುವ ಸರ್ಕಾರ
ಸರ್ಕಾರಿ ನೌಕರರ ವೇತನಗಳನ್ನು ಪರಿಷ್ಕರಿಸುವ ಸಲುವಾಗಿ ಸಾಮಾನ್ಯವಾಗಿ ಪ್ರತಿ 5 ವರ್ಷಕ್ಕೊಮ್ಮೆ ಹೊಸ ಆಯೋಗವನ್ನು ರಚಿಸಿ ಅದರ ಶಿಫಾರಸ್ಸಿನಂತೆ ವೇತನ ಪರಿಷ್ಕರಿಸುವುದ ಹಿಂದಿನಿಂದಿಲೂ ನಡೆದುಬಂದಿದೆ. ಇದಕ್ಕೂ ಮುನ್ನ ನಮ್ಮ ಭಾ.ಜ.ಪ ನೇತೃತ್ವದ ರಾಜ್ಯ ಸರ್ಕಾರವು ದಿನಾಂಕ: 19-11-2022 ರಂದು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್ರಾವ್ ಇವರ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಹಿಸಲಾಯಿತು.
ಸಮಿತಿಯ ವರಧಿ ಬರುವುದ ತಡವಾಗಿದ್ದರಿಂದ ನೌಕರರ ಮನವಿಯನ್ನು ಪುರಸ್ಕರಿಸಿ ನಮ್ಮ ಭಾ.ಜ.ಪ ನೇತೃತ್ವದ ಸರ್ಕಾರವು ದಿನಾಂP À: 01-04-2023 ರಿಂದ ಅನ್ವಯವಾಗುವಂತೆ ಶೇ. 17% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಹಾಗು ಮಾತಿನಂತೆ ನಡೆದುಕೊಂಡಿತ್ತು.
ನಂತರದಲ್ಲಿ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಹಾಗು ವಿಧಾನ ಪರಿಷತ್ ಚುನಾವಣೆಗಳಲ್ಲಿ ಈಗಿನ ಕಾಂಗ್ರೇಸ್ ಸರ್ಕಾರ ನೌಕರರಿಗೆ 7 ನೇ ವೇತನ ಆಯೋಗ ಜಾರಿ ಹಾಗು ಹಳೇ ಪಿಂಚಣಿ ಹಾಗು ಆರೋಗ್ಯ ವಿಮೆಯ ಕುರಿತು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುತ್ತದೆ ಅಧಿಕಾರಕ್ಕೆ ಬಂದ ನಂತರವೂ ಈಗಿನ ಮುಖ್ಯಮಂತ್ರಿಗಳು ನೌಕರರ ಸಮಾವೇಶಗಳಲ್ಲಿ ನೌಕರರೆದುರಿಗೆ ಆಯೋಗ ಅಂತಿಮ ವರಧಿ ನೀಡಿದ ಕೂಡಲೇ ಅನುಷ್ಠಾನ ಮಾಡುವ ಭರವಸೆ ನೀಡಿದ್ದರು ಆದರೆ. ರಾಜ್ಯ 7ನೇ ವೇತನ ಆಯೋಗವು ಅಂತಿಮವಾಗಿ ದಿನಾಂಕ: 16-03-2024 ರಂದು ಶೇ. 27.5 ಫಿಟ್ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ.
ನಂತರ ಲೋಕಸಭಾ ಚುನಾವಣೆಯ ನೀತಿಸಂಹಿತೆಯ ನೆಪವೊಡ್ಡಿದ ಸರ್ಕಾರ ನೀತಿ ಸಂಹಿತೆ ಮುಗಿದರೂ ಮಾತನಾಡದೆ ಇದೀಗ ಪ್ರತಿ ಸಚಿವ ಸಂಪುಟದಲ್ಲಿ I ವಿಷಯಪ್ರಸ್ತಾಪ ಆಗುತ್ತಿದ್ದರೂ ಯಾವುದೇ ನಿರ್ಧರವಿಲ್ಲದೆ ನೌಕರರಿಗೆ ಆಸೆತೋರಿಸಲಷ್ಟೇ ಸೀಮಿತವಾಗಿದೆ.
ಆಯೋಗ ರಚನೆಯಾಗಿ 19 ತಿಂಗಳಾದರೂ ವೇತನ ಪರಿಷ್ಕರಣೆಯಾಗದೆ ಇತಿಹಾಸದಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡ ಕೆಟ್ಟ ದಾಖಲೆಯನ್ನು ಸರ್ಕಾರ ಮಾಡಿದೆ.
ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು: ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಹಿಂದಿನಿಂದಲೂ ನಾನು ಪಕ್ಷಾತೀತವಾಗಿ ಹೋರಾಟ ನಡೆಸಿದ್ದು ಈ ಹೋರಾಟದ ಮೊದಲ ಗೆಲುವಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ದಿನಾಂಕ: 01-03-2023 ರಂದು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲಿ ್ಲ ಸಮಿತಿಯನ್ನು ರಚಿಸಿತ್ತು. ಆದರೆ ನಂತರದಲ್ಲಿ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾದ್ದರಿಂದ ಈಗಿನ ಸರ್ಕಾರದ ಮೇಲೆ ಸದನದ ಒಲಗೂ ಹೊರಗೂ ಪ್ರತಿಭಟಿಸಲಾಗಿದೆ, ಆದರೆ ಈಗಿನ ಸರ್ಕಾರ ಹಿಂದಿನ ಸರ್ಕಾರದ ಸಮಿತಿಯ ಒಂದೇ ಒಂದು ಸಭೆ ನಡೆಯದಂತೆ ನೋಡಿಕೊಂಡಿದೆ.
ಚುನಾವಣೆಯಲ್ಲಿ ಸರ್ಕಾರಿ ನೌಕರರ ಪರವಾಗಿ ನೀಡಿದ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವ ಭರವಸೆಯೂ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಹೊಸ ಪಿಂಚಣಿ ಯೋಜನೆಯಡಿ ನಿವೃತ್ತರಾಗಿರುವ ನೌಕರರಿಗೆ ಕೇವಲ 1500 ಪಿಂಚಣಿ ಸಿಗುತ್ತಿರುವುದ ಇದು ಸರ್ಕಾರ ಮಹಿಳೆಯರಿಗೆ ನೀಡುತ್ತಿರು ಭಾಗ್ಯಲಕ್ಷ್ಮೀ ಯೋಜನೆಗಿಂತಲೂ ಕಡಿಮೆ.
ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಜಾರಿಗೊಳಿಸದಿರುವುದು. ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನೂ ಸಹ ನಿರ್ವಹಿಸುತ್ತಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅವಶ್ಯವಿರುವ ಚಿಕತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ಗಮನಿಸಿ ಹಿಂದಿನ ನಮ್ಮ ಭಾ.ಜ.ಪ ಸರ್ಕಾರ 2021-22g À ಆಯವ್ಯದಲ್ಲಿ ಘೋಷಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪು-ರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಜವಾಬ್ದಾರಿಯನ್ನು ನೀಡಿ ದಿನಾಂಕ: 5-9-2022 ರಂದು ಸರ್ಕಾರಿ ಆದೇಶ ಹೊರಡಿಸಿರುತ್ತದೆ ಹಾಗೂ ಆಗಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ದಿನಾಂಕ: 20-03- 2023 ರಂದು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿರುತ್ತಾರೆ.
ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲವಾದರೂ ಇದನ್ನು ಇಚ್ಛಾಶಕ್ತಿ ಇಲ್ಲದ ಈಗಿನ ಸರ್ಕಾರ ಇನ್ನೂ ಕುಂಟು ನೆಪವೊಡ್ಡಿ ಜಾರಿಗೆ ತಂದಿರುವುದಿಲ್ಲ.
ಇಡೀ ದೇಶದ ಎಲ್ಲಾ ಬಡ ಜನರನ್ನು ಮಾನ್ಯ ಪ್ರಧಾನ ಮಂತ್ರಿಯವರು “ಆಯುಷ್ಮಾನ ಭಾರತ”ದಡಿ ಉಚಿತ ಆರೋಗ್ಯ ವಿಮೆ ನೀಡಿದ್ದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಹಣ ಮೀಸಲಿಡಿಸಿದರೂ ಇಂತಹ ಯೋಜನೆ ಜಾರಿಗೆ ತರದಿರುವ ಒಂದು ಬೇಜವಾಬ್ದಾರಿ ಸರ್ಕಾರವಾಗಿದೆ.
ಒಟ್ಟಾರೆಯಾಗಿ ರಾಜ್ಯದ ಸರ್ಕಾರಿ ನೌಕರರ ಹಿತಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಈ ನೌಕರರು ತಮ್ಮ ಬೇಡಿಕೆಗೆ ಆಗ್ಹಿಸಿ ನಡೆಯುವ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ನಮೋಶಿ ಅವರು ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್