3,392 total views
ಕಲಬುರಗಿ:- ಗ್ರಾಮೀಣ ವೈದ್ಯರ ಮೇಲೆ ನಡೆಯುತ್ತಿರುವ ಕಿರುಕುಳÀ ದೌರ್ಜನ್ಯ ಮತ್ತು ದಬ್ಬಾಳಿಕೆ ತಡೆಯಲು ನೆರೆಯ ಆಂದ್ರ ರಾಜ್ಯದ ಮಾದರಿಯಲ್ಲಿ ಪಿ.ಎಂ.ಪಿ. ಪ್ರಮಾಣ ಪತ್ರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರಿಗೆ ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ದಿಪರ ಸಂಘದ ನಿಯೋಗ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಮತ್ತು ಭಾರತ ದೇಶಾದ್ಯಂತೆ ಲಕ್ಷಾಂತರ ಜನ ಹಳ್ಳಿ, ಹಳ್ಳಿಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರ ಮತ್ತು ರೈತರ ಹಾಗೂ ಬಡ ಕುಟುಂಬಗಳಿಗೆ ಅವರ ಮನೆ ಭಾಗಿಲಿಗೆ ಹೋಗಿ ಅಲ್ಪಸ್ವಲ್ಪ ವೆಚ್ಚದಲ್ಲಿ ಜನರಿಗೆ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವರು ಅಲ್ಲದೇ ಬಹುತೇಕರು ತಮ್ಮ ಕೌಟುಂಬಿಕ ಪರಂಪತೆಯ ಚಿಕಿತ್ಸಾ ಪದ್ದತಿಯನ್ನು ತಲತಲಂತರವಾಗಿ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಈ ಹಿನ್ನಲೆಯಲ್ಲಿ ಗ್ರಾಮೀಣ ವೈದ್ಯರ ತಮ್ಮ ಇಡಿ ಕುಟುಂಬದ ಜವಾಬ್ದಾರಿ ತಮ್ಮ ವೃತ್ತಿಯ ಮೇಲೆ ನಿಂತಿದೆ. ಅಲ್ಲದೇ ಕಳೆದ ಮಹಾ ಮಾರಿ ಕೋವಿಢ -19 ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಹಳ್ಳಿಗಳ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಹಣವನ್ನು ಉಳಿಸಿದ್ದಾರೆ. ಮೇಲಾಗಿ, ತಮ್ಮ ಜೀವವನ್ನೇ ಬದಿಗೊತ್ತಿ ಜನರ ಪ್ರಾಣವನ್ನು ಉಳಿಸಿದ್ದಾರೆ.
ಆರೋಗ್ಯ ಸಚಿವರೇ ದಯಮಾಡಿ ಆಂದ್ರ ಮಾದರಿಯಲ್ಲಿ ಪಿ.ಎಂ.ಪಿ. ಪ್ರಮಾಣ ಪತ್ರವನ್ನು ನಮ್ಮ ಕರ್ನಾಟಕದ ಗ್ರಾಮೀಣ ವೈದ್ಯರಿಗೆ ನೀಡಲು ತುರ್ತು ಕ್ರಮ ಕೈಗೊಳ್ಳುವಂತೆ ನಿಯೋಗದ ನೆತೃತ್ವವ ವಹಿಸಿದ ಸಂಘದ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು, ಸಚಿವರನ್ನು ಬೆಂಗಳೂರಿನ ವಿಕಾಸ ಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೆ.
ಪ್ರಮುಖ ವಿಷಯ ವೇನೆಂದರೆ ಯಾವ ವೈದ್ಯನು ತನ್ನ ವಿದ್ಯೆಯನ್ನು ಬಿಟ್ಟು ಅತಿ ಬುದ್ದಿವಂತಿಕೆಯಿಂದ ಚಿಕಿತ್ಸೆ ನೀಡಿ ಏನಾದರು ಅನಾಹುತಕ್ಕೆ ಕಾರಣವಾದರೆ ಅಂತ ವೈದ್ಯನ ಮೇಲೆ ತಾವು ಕಾನೂನು ಕ್ರಮ ಜರುಗಿಸಬಹುದು. ಅದು ಬಿಟ್ಟು ಇಡಿ ವೈದ್ಯರನ್ನು ಕಿರುಕುಳ ನೀಡುವುದು ಯಾವ ನ್ಯಾಯ? ಅವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕುವಂತೆ ಅವರು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಅಮೃತ ಸಿ.ಪಾಟೀಲ, ರವಿವಂಟಿ, ಗೋವಿಂದ ಭಟ್ಟ, ಗುರು, ಶರಣಿಕುಮಾರ ಕುಪೇಂದ್ರ ,ಅಣ್ಣರಾವ್, ಪ್ರಕಾರತೆ, ರವೀಂದ್ರ, ಚಾಂದಪಟೇಲ, ರಾಜಕುಮಾರ, ಉಸ್ಮಾನ್ ಸಾಬ, ಸಂಜಯ, ಶಂಕರ ರಾವ್, ಶರಣಪ್ಪ, ಅನೀಲ, ಮಲ್ಲೀನಾಥ, ರಾಜುದೊಡ್ಡಮನಿ ಸೇರಿದಂತೆ ಹಲವರಿದ್ದರು. ವರದಿ-ಡಾ ಎಂ ಬಿ ಹಡಪದ ಸುಗೂರ ಎನ್