2,641 total views
ಹೊನ್ನಾವರ ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ.
ಮುಖ್ಯ ಅಧಿಕಾರಿ ಮತ್ತು ಸದಸ್ಯನನ್ನು ಲೋಕಾಯುಕ್ತರು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣ ಪಂಚಾಯತ್ ನ ಮುಖ್ಯ ಅಧಿಕಾರಿ ಮತ್ತು ಸದಸ್ಯನನ್ನು ವಿಚಾರಿಸಿದ ಲೋಕಾಯುಕ್ತ ತಂಡ ಬುಧವಾರ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ನೇರವಾಗಿ ಹಣವನ್ನು ಸ್ವೀಕರಿಸುತ್ತಿರುವಾಗ ಲೋಕಾಯುಕ್ತರಿಗೆ ತಿಳಿದು ಅವರ ಭ್ರಷ್ಟಾಚಾರವನ್ನು ನಿಲ್ಲಿಸಲು ತಕ್ಷಣವೇ ಬಂದು ಮುಖ್ಯ ಅಧಿಕಾರಿಯಾದ ಪ್ರವೀಣ್ ಕುಮಾರ್ ನಾಯಕ್ ಮತ್ತು ಅವರ ಸಹಾಯಕ ಉದ್ಯೋಗಿಯಾದ ವಿಜಯ ಕಾಮತ್ ಅವರನ್ನು ಬಂಧಿಸಿದ್ದಾರೆ. ದಿನ ನಿತ್ಯ ಬರುವ ಸಾರ್ವಜನಿಕರಿಗೆ ಹಣ ನೀಡುವಂತೆ ನಿತ್ಯವೂ, ಮುಗ್ಧ ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗಡೆ ಹೋಗುವಂತೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಉದ್ಯಮ ನಗರದಲ್ಲಿರುವ ದಾಮೋದರ್ ಮಂಜುನಾಥ ನಾಯಕ್ ಮತ್ತು ಕಲ್ಯಾಣ ಮಂಜುನಾಥ ನಾಯಕ್ ಇವರು ಇ-ಸ್ವತ್ತು ಮಾಡಿಸಲು ಆರಂಭದಲ್ಲಿ 2,50,000 ಮೊತ್ತ ನೀಡುವಂತೆ ಕೇಳಿದ್ದರಂತೆ. ಸದಸ್ಯನಾದ ವಿಜಯ ಕಾಮತ್ ಅವರ ಬಳಿ ಕೇಳಿದಾಗ 60,000ಕ್ಕೆ ವ್ಯವಹಾರವನ್ನು ಕುದುರಿಸಿ ಕೊಟ್ಟಿದ್ದರು ಎಂದು ಲೋಕಾಯುಕ್ತರಿಗೆ ಹೇಳಿಕೆ ನೀಡಿದ್ದಾರೆ. ಪ್ರವೀಣ್ ನಾಯಕ್ ಅವರ ಬಳಿ ಇ-ಸ್ವತ್ತು ಮಾಡಲು ಬಂದಾಗ ಅದರ ಪ್ರತಿ ಕೊಡಲು ಕೇಳಿದಾಗ, ಪದೇ ಪದೇ ನಾಳೆ ಬನ್ನಿ…. ನಾಳೆ ಬನ್ನಿ …. ಎಂದು ಹೇಳಿ ಸತಾಯಿಸುತ್ತಿದ್ದರು, ಪ್ರತಿಯೊಂದು ಕೆಲಸಕ್ಕೆ ಲಂಚದ ಬೇಡಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಆರೋಪಿಗಳಾದ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪ್ರವೀಣ್ ನಾಯಕ ಮತ್ತು ಸದಸ್ಯರಾದ ವಿಜಯ ಕಾಮತ್ ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಲೋಕಾಯುಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಲೋಕಾಯುಕ್ತ ಅಧಿಕಾರಿಯಾಗಿ ಕುಮಾರ ಚಂದ್ರ ಪತ್ರಕರ್ತರೊಂದಿಗೆ ಮಾತನಾಡಿ ಸ್ಥಳೀಯ ಚಂದ್ರಹಾಸ್ ಅವರಿಗೆ ಸೇರಿದ ಆಸ್ತಿಯನ್ನು ಇ-ಸ್ವತ್ತು ಮಾಡಿಕೊಡಲು ಪಟ್ಟಣ ಪಂಚಾಯತ್, ಮುಖ್ಯ ಅಧಿಕಾರಿ 2,50,00 ಲಕ್ಷ ಮೊತ್ತದ ಬೇಡಿಕೆ ಇಟ್ಟಿದ್ದರು. ಈ ಸಮಯದಲ್ಲಿ ಮಧ್ಯಸ್ತಿಕೆಯನ್ನು ವಹಿಸಿಕೊಂಡ ಪಟ್ಟಣ ಪಂಚಾಯತ್ ಸದಸ್ಯ ವಿಜಯ ಕಾಮತ್ ಕೂಡ ಭಾಗಿಯಾಗಿದ್ದಾರೆ ಎಂದರು. ಕಾರ್ಯಾಚರಣೆಯಲ್ಲಿ ಎಸ್ಪಿ ಕುಮಾರ್ ಚಂದ್ರ, ಪಿ. ಐ. ವಿನಾಯಕ ವಿಲೋಮ, ಹೆಡ್ ಕಾನ್ಸ್ಟೇಬಲ್ ನಾರಾಯಣ, ಶ್ರೀ ಕೃಷ್ಣ, ಪ್ರದೀಪ್, ರಫೀಕ್, ಸಿಬ್ಬಂದಿಗಳಾದ ಶಿವಕುಮಾರ್, ಗಜೇಂದ್ರ , ಆನಂದ ದಿವ್ಯಜೋತಿ, ಸಂಜೀವ್, ಮಹಾಭೂದ್, ಸತೀಶ್, ಮಹೇಶ್ ಇದ್ದರು.