2,505 total views
ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸುತ್ತಮುತ್ತಲಿನ ಗ್ರಾಮದಲ್ಲಿ ನಕಲಿ ನೋಟು ತಯಾರಿಸಿ ಚಲಾವಣೆ ಮಾಡುವ ಹಾಗೂ ಡಬ್ಲಿಂಗ್ ಮಾಡಿ ಜನರಿಗೆ ಮೋಸ ಮಾಡುವ ಗ್ಯಾಂಗ್ಅನ್ನು ಪತ್ತೆ ಮಾಡಿ ಆರು ಜನರನ್ನು ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.ಕಳೆದ ಜೂನ್ 29 ರಂದು ಬಿಳಿ ಬಣ್ಣದ ಸ್ವಿಫ್ಟ್ ಕಾರ್ನಲ್ಲಿ ಗೋಕಾಕ್ ತಾಲೂಕಿನ ನಾಕಾದಿಂದ ಕಡಬಗಟ್ಟಿ ರಸ್ತೆಯ ಮುಖಾಂತರ ಬೆಳಗಾವಿ ಕಡೆಗೆ 100 ರೂ. ಮುಖ ಬೆಲೆಯ 305 ಹಾಗೂ 500 ರೂ. 6792 ನಕಲಿ ನೋಟು ತೆಗೆದುಕೊಂಡು ಹೊರಟಾಗ ಗೋಕಾಕ್ ಪೊಲೀಸರು ಅರಬಾವಿಯ ಅನ್ವರ ಮಹ್ಮದಸಲೀಂ ಯಾದವಾಡ (26), ಮಹಾಲಿಂಗಪೂರದ ನಿವಾಸಿ ಸದ್ದಾಂ ಮೂಸಾ ಯಡಹಳ್ಳಿ (27), ದುಂಡಪ್ಪ ಮಹಾದೇವ ಒಣಶೇವಿ (27), ರವಿ ಚನ್ನಪ್ಪ ಹ್ಯಾಗಾಡಿ (27), ವಿಠಲ ಹಣಮಂತ ಹೊಸಕೋಟಿ (29), ಮಲ್ಲಪ್ಪ ಅಲ್ಲಪ್ಪ ಕುಂಬಾಳಿ (29) ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬ್ಬಿಂಗ್ ಮಾಡಿ ಗೋಕಾಕ, ಮಹಾಲಿಂಗಪೂರ,ಮುಧೋಳ, ಯರಗಟ್ಟಿ, ಹಿಡಕಲ್ ಡ್ಯಾಂ, ಬೆಳಗಾವಿ,ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 1 ಲಕ್ಷ ಅಸಲಿ ನೋಟಿಗೆ 4 ಲಕ್ಷ ನಕಲಿ ನೋಟುಗಳನ್ನು ಕೊಟ್ಟು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿರುವುದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.ಎ1 ಆರೋಪಿ ಅನ್ವರ್ ಯಾದವಾಡ ಈತನ ಅರಬಾವಿ ಗ್ರಾಮದ ಮನೆಯಿಂದ ಖೋಟಾ ನೋಟ್ ಪ್ರಿಂಟ್ ತೆಗೆಯಲು ಉಪಯೋಗಿಸಿದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಟೀನಿಂಗ್ ಬೋರ್ಡ್, ಪೇಂಟ್, ಶೈನಿಂಗ್, ಸ್ಟೀಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲಡ್ಗಳು, ಆರು ಮೊಬೈಲ್ ಫೋನ್, ಒಂದು ಬಿಳಿ ಬಣ್ಣದ ಕಾರ್ ಸೇರಿದಂತೆ 52,3900 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.