3,456 total views
ಮಹಿಳಾ ಪೇದೆ ಮನೆಯಲ್ಲಿ ಕಳ್ಳರ ಕೈಚಳಕ…30 ಗ್ರಾಂ ಚಿನ್ನಾಭರಣ,10 ಸಾವಿರ ನಗದು ಕಳುವು…
ಹುಣಸೂರು: ಮಹಿಳಾ ಪೇದೆ ಮನೆ ಬಾಗಿಲು ಮೀಟಿ ಕಳ್ಳರು ನಗದು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ನಡೆದಿದೆ.ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನಲ್ಲೇ ಕೃತ್ಯ ನಡೆದಿದೆ.ಹಾಡುಹಗಲೇ ಮನೆಗೆ ಕನ್ನ ಹಾಕಿದ ಖದೀಮರು 30 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಸುಧಾರಾಣಿ ರವರ ಮನೆಯಲ್ಲಿ ಖದೀಮರು ಕೃತ್ಯವೆಸಗಿದ್ದಾರೆ.ಸುಧಾರಾಣಿ ರವರು ಕರ್ತವ್ಯಕ್ಕೆ ತೆರಳಿದ್ದ ಸಮಯದಲ್ಲಿ ಹಾಡುಹಗಲೇ ಖದೀಮರು ಕೃತ್ಯವೆಸಗಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಬೆರಳು ಮುದ್ರಾ ಘಟಕದ ಸಿಬ್ಬಂದಿಗಳು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.