3,421 total views
ಕ್ರಿಯೆಟಿವ್ ಪುಸ್ತಕ ಮನೆ ಪ್ರಕಾಶನದ ಪುಸ್ತಕ ಗಳ ಲೋಕಾರ್ಪಣೆ ಯು ಕ್ರಿಯೆಟಿವ್ ಕಾಲೇಜು ಕಾರ್ಕಳದಲ್ಲಿ ನಡೆಯಿತು.
ಕಾರ್ಕಳ : ಶಿಕ್ಷಣ ಸಂಪಾದನೆಯನ್ನು ನೀಡಿದರೆ ಓದು ಸಂತೋಷವನ್ನು ನೀಡುತ್ತದೆ. ಪುಸ್ತಕ ಓದುದರಿಂದ ಭಾವಜಗತ್ತನ್ನು ವಿಸ್ತರಗೊಳ್ಳುತ್ತದೆ. ಅಲ್ಲದೆ ಮನುಷ್ಯನ ಅನ್ನದ ಹಸಿವು, ಸಮಾನತೆಯ ಹಸಿವು ಹಾಗೂ ಜ್ಞಾನದ ಹಸಿವನ್ನು ನೀಗಿಸುತ್ತದೆ ಎಂದು ಖ್ಯಾತ ಬರಹಗಾರ ಗಿರೀಶ್ ರಾವ್ ಹತ್ವಾರ್ (ಜೋಗಿ) ಅಭಿಪ್ರಾಯಪಟ್ಟರು. ಅವರು ಜು.1ರಂದು ಕ್ರಿಯೇಟಿವ್ ಪ. ಪೂ. ಕಾಲೇಜಿನ ಸಪ್ತಗಿರಿ ಕ್ಯಾಂಪಸ್ನಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಡೆದ 15 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂತ್ರಜ್ಞಾನದ ಹಸಿವು
ಭಾವನೆಗಳನ್ನು ಪ್ರಕಟಗೊಳಿಸುವ ಧೈರ್ಯವನ್ನು ಬರಹ ನೀಡುತ್ತದೆ. ಓದು ಬರಹ ಸಾಧ್ಯವೇ ಇಲ್ಲ ಎನ್ನುತ್ತಿದ್ದವರು ಮೊಬೈಲ್ನಂತಹ ಆಧುನಿಕ ತಂತ್ರಜ್ಞಾನದ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದರಿಂದ ಓದಗರ ಸಂಖ್ಯೆ ಹೆಚ್ಚಾಗುವುದರೊಂದಿಗೆ ತಂತ್ರಜ್ಞಾನದ ಹಸಿವು ಕೂಡ ಜನರಲ್ಲಿ ಬೆಳೆದುಕೊಂಡಿದೆ. ಆದರೆ, ತಂತ್ರಜ್ಞಾನ ಏನನ್ನು ಕೊಡಲು ಸಾಧ್ಯವಿಲ್ಲವೋ ಅದನ್ನು ಪುಸ್ತಕ ನೀಡುತ್ತದೆ ಎಂದು ಜೋಗಿ ಹೇಳಿದರು.
ಬಾಲಭಾಷೆ ಅರಿಯದವ ಮನುಷ್ಯನಲ್ಲ
ಬಾಲಭಾಷೆಯ ಮೂಲಕ ಮಗುವನ್ನು ಆಟವಾಡಿಸಲು ಯಾರಿಂದ ಸಾಧ್ಯವಿಲ್ಲವೋ ಅವನು ಮನುಷ್ಯನೇ ಅಲ್ಲ ಎಂದ ಅವರು ಬಾಲಭಾಷೆಯ ಮೂಲಕ ಮಗುವನ್ನು ಆಟವಾಡಿಸುವ ಕೆಲಸವನ್ನು ಲೇಖಕರು ಮಾಡುತ್ತಿದ್ದಾರೆ. ತನ್ಮೂಲಕ ಲೇಖಕರು ಹೊಸತನ್ನು ನೀಡುವುದರೊಂದಿಗೆ ಮನಷ್ಯರೊಳಗಿರುವ ಅಹಂಕಾರವನ್ನು ಕಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಉತ್ತಮ ವ್ಯಕ್ತಿತ್ವ ನಿರ್ಮಾಣ
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಹೊಸತನವಿರದ ವ್ಯಕ್ತಿ ಪರಿಪೂರ್ಣವಾಗಲು ಸಾಧ್ಯವಿಲ್ಲ. ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಪುಸ್ತಕದ ಪಾತ್ರ ಮಹತ್ತರ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕ ಓದುವ ಆಸಕ್ತಿ ಮತ್ತು ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
15 ಪುಸ್ತಕಗಳ ಲೋಕಾರ್ಪಣೆ
ನರೇಂದ್ರ ಪೈ ಅವರ ‘ಸಾವಿರದೊಂದು ಪುಸ್ತಕ’ (ಆಯ್ದ ವಿಮರ್ಶೆಗಳು), ಯಶೋದಾ ಮೋಹನ್ ಅವರ ‘ಇಳಿ ಹಗಲಿನ ತೇವಗಳು’ (ಕಥಾ ಸಂಕಲನ), ಸುಧಾ ನಾಗೇಶ್ ಅವರ ‘ಹೊಂಬೆಳಕು’ (ಚಿಂತನ ಬರಹಗಳು), ವಾಣಿರಾಜ್ ಅವರ ‘ಸವಿನೆನಪುಗಳ ಹಂದರ’ (ಕಥಾ ಸಂಕಲನ), ಡಾ. ಸುಬ್ರಮಣ್ಯ ಸಿ. ಕುಂದೂರು ಅವರ ‘ಜೀವನ ಯಾನ’ (ಮಲೆನಾಡಿನ ಕಥನ), ಅನುಬೆಳ್ಳೆಯವರ ‘ನಗುವ ನಯನ ಮಧುರ ಮೌನ’ (ಕಾದಂಬರಿ), ಕಾಮಕೃಷ್ಣ ಹೆಗಡೆ ಅವರ ‘ಒಲವ ಧಾರೆ’ (ಕವನ ಸಂಕಲನ), ಲಕ್ಷ್ಮಣ್ ಬಜಿಲ ಅವರ ‘ನಿರ್ವಾಣ’ (ಕವನ ಸಂಕಲನ), ಅಶ್ವತ್ ಎಸ್. ಎಲ್. ಅವರ ‘ಸ್ಫೂರ್ತಿದಾಯಕ ಲೇಖನಗಳು’ (ಅರಿವಿನ ದಾರಿ), ರಾಜೇಂದ್ರ ಭಟ್ ಅವರ ‘ರಾಜಪಥ’ (ಲೇಖನಗಳು), ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ‘ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’ (ಲೇಖನಗಳು), ಲಲಿತಾ ಮುದ್ರಾಡಿಯವರ ‘ಅರ್ಥವಾಗದವರು’ (ಕವನ ಸಂಕಲನ), ದಿಗಂತ್ ಬಿಂಬೈಲ್ ಅವರ ‘ಕೊಂದ್ ಪಾಪ ತಿಂದ್ ಪರಿಹಾರ’ (ಕಥಾ ಪ್ರಸಂಗಗಳು), ಡಾ. ರಾಜಶೇಖರ್ ಹಳೆಮನೆಯವರ ‘ಒಡಲುಗೊಂಡವರು’ (ಕಾದಂಬರಿ) ಹಾಗೂ ಮಹೇಶ್ ಪುತ್ತೂರು ಅವರ ‘ವರ್ಣ (ಕಾದಂಬರಿ)
ಲೋಕರ್ಪಣೆಗೊಂಡಿತು.
ಕಾರ್ಯಕ್ರಮದಲ್ಲಿ ಕಸಾಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಗಣಪತಿ ಭಟ್ ಕೆ.ಎಸ್., ಆದರ್ಶ ಎಂ.ಕೆ., ವಿಮಲ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥಾಪಕರಲ್ಲೋರ್ವರಾದ ಅಶ್ವತ್ ಎಸ್.ಎಲ್. ಸ್ವಾಗತಿಸಿದರು. ಉಪನ್ಯಾಸಕ ಲೋಹಿತ್ ಎಸ್.ಕೆ.
ಕಾರ್ಯಕ್ರಮ ನಿರ್ವಹಿಸಿದರು.