2,535 total views
ಕುಮಟಾ: ತಾಲೂಕಿನ ಗೋರೆಯ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ತಡರಾತ್ರಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದ್ದು ಬೆಳಕಿಗೆ ಬಂದಿದೆ. ದೇವಾಲಯದ ಹಂಚು ತೆಗೆದು ಒಳ ನುಸುಳಿದ ಕಳ್ಳರ ಗ್ಯಾಂಗ್ವೊoದು ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಧ್ವಂಸಗೊಳಿಸಿ ಕಳುವಿಗೆ ಯತ್ನಿಸಿದೆ. ದೇವಾಲಯದ ಅರ್ಚಕರು ಬೆಳಿಗ್ಗೆ ಪೂಜೆಗೆ ಬಂದ ಸಮಯದಲ್ಲಿ ಕಳ್ಳರು ಅಟ್ಟಹಾಸ ಮೆರೆದಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಮೇಲ್ಭಾಗದಲ್ಲಿ ಹಂಚು ತೆಗದ ಕಳ್ಳರು ಮೊದಲು ಸಿಸಿ ಕ್ಯಾಮರಾವನ್ನು ಧ್ವಂಸಗೊಳಿಸಿದ್ದಾರೆ.ಇದಾದ ಬಳಿಕ ದೇವಾಲಯದ ಗರ್ಭ ಗುಡಿಯ ಬಾಗಿಲ ಬೀಗ ಕತ್ತರಿಸಿ ಗರ್ಭಗುಡಿಯಲ್ಲಿ ಇರಿಸಲಾಗಿದ್ದ ಉತ್ಸವ ಮೂರ್ತಿ, ಆಭರಣ ಇತ್ಯಾದಿಗಳನ್ನು ತೆಗೆಯಲಾಗದೆ ಪರಾರಿಯಾಗಿದ್ದಾರೆ. ದೇವಾಲಯದ ಒಳಬಾಗದಲ್ಲಿ ಹಾಕಲಾದ ಗಂಟೆಯನ್ನು ಮುರಿಯಲು ಯತ್ನಿಸಿ ವಿಫಲರಾಗಿದ್ದು, ಯಾವುದೇ ಕಳ್ಳತನ ಆಗಿರುವ ಬಗ್ಗೆ ವರದಿಯಾಗಿಲ್ಲ. ಸ್ಥಳಕ್ಕೆ ಕುಮಟಾ ಪಿಎಸ್ಐ ಮಂಜುನಾಥ ಗೌಡರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.