2,555 total views
ಸಭೆಯಲ್ಲಿ ಜಿಲ್ಲಾಧ್ಯಕ್ಷರು ಶ್ರೀ ಎನ್ ಎಸ್ ಹೆಗಡೆ, ಮಂಡಲ ಅಧ್ಯಕ್ಷರು ಶ್ರೀ ನಾಗೇಶ್ ಕುರುಡೇಕರ್ ಹಾಗೂ ಶ್ರೀ ಸುಭಾಷ್ ಗುನಗಿ, ಜಿಲ್ಲಾ ಮಾಧ್ಯಮ ಸಂಚಾಲಕ ಕಿಶನ್ ಕಾಂಬ್ಳೆ, ಜಿಲ್ಲಾ ಉಪಾಧ್ಯಕ್ಷರು ಸಂಜಯ್ ಸಾಲುಂಕೆ, ಮುಖಂಡರು ಶ್ರೀ ನಾಗರಾಜ್ ನಾಯ್ಕ್,ಶ್ರೀ ಗಜಾನನ ಗುನಗಾ, ಮನೋಜ್ ಭಟ್, ಶ್ರೀ ಗಜೇಂದ್ರ ನಾಯ್ಕ್, ಶ್ರೀ ಪ್ರಶಾಂತ್ ನಾಯ್ಕ್, ಶ್ರೀಮತಿ ನಯನಾ ನೀಲಾವರ್, ಶ್ರೀ ಮನೋಜ್ ಬಾಂದೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಭಾರತ್ ಮಾತೆಗೆ ಪೂಜೆ ಹಾಗೂ ಮಾನ್ಯರನ್ನು ಸನ್ಮಾನಿಸುವ ಮೂಲಕ ಸಭೆಯನ್ನು ಪ್ರಾರಂಭಿಸಿದರು, ಮಾನ್ಯ ರಾಜ್ಯ ಉಪಾಧ್ಯಕ್ಷರು ಶ್ರೀಮತಿ ರೂಪಾಲಿ ಸಂತೋಷ ನಾಯ್ಕ್ ರವರ ನೇತೃತ್ವದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚಿನ 3.78 ಲಕ್ಷ ಅಂತರದ ಅಭೂತಪೂರ್ವ ಗೆಲುವಿಗೆ ಹಗಲಿರಳು ಶ್ರಮಿಸಿದ ಕಾರ್ಯಕರ್ತರಿಗೆ ಹಾಗೂ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.ಮಾನ್ಯ ಮೋದಿಜಿ ಯವರ ನೇತೃತ್ವದ ಎನ್ ಡಿ ಎ ಸರ್ಕಾರದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಶ್ರೀಮತಿ ರೂಪಾಲಿ ನಾಯ್ಕ್ ರವರ ಉಪಸ್ಥಿತಿಯಲ್ಲಿ ಅಭಿನಂದನಾ ಸಭೆಯನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಸದಸ್ಯರು, ಎಲ್ಲಾ ಮೋರ್ಚಾದವರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.