3,713 total views
ಗೋಕರ್ಣ: ಪೊಲೀಸ್ ಸಿಬ್ಬಂದಿ ಓರ್ವ, ಅಕ್ರಮ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರ ಕೈಗೆ ಸಿಕ್ಕಿ ಬಿದ್ದ ಅಪರೂಪದ ಘಟನೆ ಗೋಕರ್ಣ ಓಂ ಬೀಚ್ ನಲ್ಲಿ ನಡೆದಿದ್ದು ಬಂಧಿತ ಆರೋಪಿಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಗೋವಾ ಸರಾಯಿ ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ಜಿಲ್ಲೆಯ ಅಂಕೋಲಾ ಮತ್ತಿತರೆಡೆ ಸೇವೆ ಸಲ್ಲಿಸಿ, ಹಾಲಿ ಕಾರವಾರದ ಕದ್ರಾ ಪೊಲೀಸ್ ಠಾಣೆಯಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ ಲಮಾಣಿ ಎಂಬಾತನನ್ನು ಗೋವಾ ಸರಾಯಿ ಸಾಗಾಟದ ಸಂದರ್ಭದಲ್ಲಿ ವಶಕ್ಕೆ ಪಡೆದ ಗೋಕರ್ಣ ಪೊಲೀಸರು,
ಈತನ ಜೊತೆಗಿದ್ದ ನಿಜಾಮ ಎಂಬಾತನನ್ನು ಸಹ ಬಂಧಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ ಏನ್ನಲಾಗಿದೆ.
ಪೊಲೀಸ್ ಕಾನ್ಸಟೇಬಲ್ ಸಂತೋಷ ಲಮಾಣಿ ,ಕಾರಿನಲ್ಲಿಯೇ ಅಕ್ರಮವಾಗಿ ಗೋವಾ ಸರಾಯಿ ಸಾಗಾಟ ನಡೆದಿತ್ತು ಎನ್ನಲಾಗಿದ್ದು ಗೋಕರ್ಣ ಸುತ್ತ ಮುತ್ತಲಿನ ಕೆಲವಡೆ ಇವರು ಗೋವಾ ಸರಾಯಿ ಪೂರೈಕೆ ಮಾಡುತ್ತಿದ್ದರು ಎನ್ನವ ಆರೋಪ ಕೂಡಾ ಕೇಳಿಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಿಬ್ಬಂದಿಯ ಮೇಲೆ ಕಠಿಣ ಶಿಸ್ತಿನ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.