3,785 total views
ಕುಮಟಾ : ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಟಾ ಪೊಲೀಸರು ಜಾನುವಾರುಗಳನ್ನ ರಕ್ಷಣೆ ಮಾಡಿ ಓರ್ವ ಆರೋಪಿ ಹಾಗೂ ವಾಹನವನ್ನ ವಶಕ್ಕೆ ಪಡೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೊಲನಗದ್ದೆ ಟೋಲ್ ಗೇಟ್ ಬಳಿ ನಡೆದಿದೆ.ನಾಲ್ವರು ಆರೋಪಿಗಳ ಪೈಕಿ ಓರ್ವನನ್ನ ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾಗಿದ್ದಾರೆ. ಲಾರಿಯಲ್ಲಿದ್ದ 21ಜಾನುವಾರುಗಳನ್ನ ರಕ್ಷಣೆ ಮಾಡಿದ್ದು, ಆರೋಪಿ ಓರ್ವನನ್ನ ಬಂಧಿಸಲಾಗಿದೆ.ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ