2,779 total views
ಗಂಡ ಹೆಂಡತಿ ಸಂಸಾರದ ಜೋಡು ಬಂಡಿ
ತಳ್ಳಬೇಕು ಜೀವನದ ಅವಿಭಾಜ್ಯ ಬಂಡಿ
ತಿಳಿದು ಬಂದಿದೆ ಆಷಾಢ ಮಾಸದ ಬಂಡಿ
ಕನಸು ಕಂಡೇ ನಾ ಸಾಗಲಿ ಈ ಬಂಡಿ
ಬಾಳ ಸಂಗಾತಿ ಇರಬೇಕು ಗುಣವಂತೆ
ಬಂಗಾರದ ಮನುಷ್ಯ ತನ್ನ ಗಂಡನಂತೆ
ನಂಬಿಕೆ ಪ್ರೀತಿ ಪ್ರೇಮದ ನನ್ನ ಹೆಂಡತಿ
ಮುತ್ತು ಕೊಟ್ಟಳು ಮುಗುಳ್ನಗೆಯ ಒಡತಿ
ಜೀವನದಲ್ಲಿ ಮಹತ್ವದ ಘಟಕ ಸತಿಪತಿ
ಕಷ್ಟಪಟ್ಟು ಧೈರ್ಯ ತುಂಬಿದಳು ಒಡತಿ
ಹೆಂಡತಿ ನೋವು ಅರ್ಥೈಸಿಕೊಂಡವನೇ ಪತಿ
ಪ್ರೀತಿಯ ಗೆಳತಿ ಗಂಡನ ಮಮತೆಯ ಮಾತೆ
ಬರುವ ಸಂತೋಷವನ್ನು ಆನಂದಿಸಿ
ಅತ್ತೆ ಮನೆಯ ಪ್ರೀತಿಯ ಓ ಚಿಕ್ಕಸೋಸೇ
ಜೀವನದಲ್ಲಿ ನಿಸ್ವಾರ್ಥಿಯಾಗಿರುವ ಮನಸೆ
ದೇಹ ಎರಡಾದರೆ ಮನಸ್ಸು ಒಂದು ಸತಿಪತಿದು
ಮಹಾಂತೇಶ ಖೈನೂರ
ಸಾ//ಯಾತನೂರ