2,706 total views
ಕಲಬುರಗಿ:- ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಇದೇ ತಿಂಗಳ ಮೂರನೇ ವಾರದಲ್ಲಿ ಆಯೋಜಿಸಿರುವ, ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರನ್ನು ಶರಣ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯಿಂದ ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ನೀಲಕಂಠರಾವ ಮುಲಗೆ ಮಾತನಾಡಿ , ಸಮ್ಮೇಳನದ ಯಶಸ್ಸಿಗೆ ಪೂರಕವಾಗಿ ಸಕಲ ಸಿದ್ಧತೆಗಳು ಮಾಡಿಕೋಳ್ಳಲಾಗುತ್ತಿದ್ದು, ಪೂಜ್ಯ ಮಾತೋಶ್ರೀ ಯವರ ಮಾರ್ಗದರ್ಶನದಲ್ಲಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಐತಿಹಾಸಿಕವಾಗಿ ಮಾಡಲಾಗುವುದು ಎಂದರು.
ಅಧಿಕೃತ ಆಹ್ವಾನ ಸ್ವೀಕರಿಸಿದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ರವರು ಮಾತನಾಡಿ, ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು ಶ್ರೀ ಶರಣಬಸವೇಶ್ವರ ಸಂಸ್ಥಾನದ ತ್ರಿವಿಧ ದಾಸೋಹ ಕ್ಷೇತ್ರಗಳಲ್ಲಿಯ ಸೇವೆಯನ್ನು ಗುರುತಿಸಿ ತಮ್ಮನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಶರಣ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ – ಬೆಳೆಸಲು ಶರಣ ಸಂಸ್ಥಾನದ ಸಹಕಾರ ಯಾವತ್ತೂ ಇಂತಹ ಸಮ್ಮೇಳನಗಳಿಗೆ ಇರಲಿದೆ ಎಂದು ಅಭಯ ನೀಡಿದರು.
ಕಾರ್ಯಕ್ರಮದಲ್ಲಿ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ ಶರಣಬಸವಪ್ಪ ಅಪ್ಪ ಅವರು ಹಾಗೂ ಒಂಭತ್ತನೆ ಪೀಠಾಧಿಪತಿಗಳಾದ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಆವರು ನೇತೃತ್ವ ವಹಿಸಿದ್ದರು.
ಈ ವೇಳೆ, ಶ್ರೀ ಶರಣಬಸವೇಶ್ವರ ಸಂಸ್ಥಾನದ ನಿರ್ದೇಶಕರಾದ ಡಾ.ನೀಲಾಂಬಿಕ ಪೊಲೀಸ್ ಪಾಟೀಲ್ ಹಾಗೂ ಪ್ರವಚನಕಾರ ಡಾ. ಶಿವಶಂಕರ್ ಬಿರಾದಾರ್ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ ಸ್ವಾಗತಿಸಿದರು,
ಸಮ್ಮೇಳನದ ಸಂಚಾಲಕರಾದ
ಪ್ರೊ ಯಶವಂತರಾಯ ಅಷ್ಠಗಿ ನಿರೂಪಿಸಿದರು,
ಸಾಹಿತಿ ಡಾ.ವಿಜಯಕುಮಾರ ಪರೂತೆ ವಂದಿಸಿದರು.
ಕಾರ್ಯಕ್ರಮದಲ್ಲಿ
ಶರಣ ಸಂಸ್ಥಾನದ ಡಾ ಅಲ್ಲಮಪ್ರಭು ದೇಶಮುಖ, ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ, ಸಮ್ಮೇಳನದ ಸಂಚಾಲಕರಾದ ಪ್ರೊ ಯಶವಂತರಾಯ ಅಷ್ಠಗಿ, ರಾಜಕುಮಾರ್ ಕೋಟೆ, ವಿಶ್ವನಾಥ್ ಪಾಟೀಲ್ ಗೌನಳ್ಳಿ, ಗಿರೀಶ್ ಗೌಡ ಇನಾಮದಾರ್, ಯುವ ಮುಖಂಡರಾದ ಶಿವ ಅಷ್ಠಗಿ, ಪ್ರೀತಮ್ ಪಾಟೀಲ್, ಶರಣು ಅಂಕಲಗಿ, ಡಾ ವಿಜಯಕುಮಾರ ಪರೂತೆ,ಡಾ ಕೆ ಗಿರಿಮಲ್ಲ, ಡಾ ಆನಂದ ಸಿದ್ಧ ಮಣಿ, ಡಾ ಶರಣಬಸಪ್ಪ ವಡ್ಡನಕೇರಿ, ವೀರಶೆಟ್ಪಿ ಪಾರಂಪಳ್ಳಿ, ಬಸವಂತರಾಯ ಕೋಳಕೂರ್, ಅಂಬಾರಾವ ಕೋಣೆ, ಎಚ್ ಎಸ್ ಬರಗಾಲಿ, ಪ್ರಸಾದ್ ಪಟ್ಟಣಕರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಚನಕಾರರು ನುಡಿದಂತೆ ಬದುಕಿದವರು. ಅವರ ಸಂದೇಶಗಳು ಸಮಾಜದ ಪ್ರಗತಿಗೆ ಎಂದಿಗೂ ಪ್ರಸ್ತುತ. ಆದ್ದರಿಂದ ಇಂತಹ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಯಿಸುವ ಸಮ್ಮೇಳನಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ.
ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್ ಅಪ್ಪಾ
ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರು
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್