2,704 total views
ಕಲಬುರಗಿ:– ಭಗವಂತನ ವಿನೋದಕ್ಕಾಗಿ ಸೃಷ್ಟಿಸಿದ ಈ ಭೂಮಂಡಲವನ್ನು ಜೀವಂತ ವಿರುಸಲು ಭಗವಂತನ ಸಹಕಾರ ಅತ್ಯವಶ್ಯಕ ಪ್ರತಿಯೊಬ್ಬ ಮನುಷ್ಯನಿಗೆ ನಿಸರ್ಗವೇ ಸಹಕಾರದ ಮಹತ್ವ ತಿಳಿಸಿಕೊಡುತ್ತದೆ ಆದ್ದರಿಂದ ಮಾನವರು ಪರೋಪಕಾರಿ ಸಹಕಾರಿ ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸುಂದರಮಯಗೊಳಿಸಿಕೊಳ್ಳಬೇಕೆಂದು ಎಂದು ಹೊನ್ನಕಿರಣಗಿಯ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ.ಚಂದ್ರಗುಂಡ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವಚನ ನೀಡಿ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಅವರು ನಡೆಸಿದ ತಿಂಗಳಿಗೊಂದು ಚಿಂತನಾಗೋಷ್ಠಿ ಕಾರ್ಯಕ್ರಮದಲ್ಲಿ ಜನ ಹಿತದ ಮಾರ್ಗದಲ್ಲಿ “ಸಹಕಾರದ” ವಿಷಯ ಕುರಿತು ಚಿಂತನದಲ್ಲಿ ಶ್ರೀಗಳು ಮಾತನಾಡಿದರು.
ಉದ್ಘಾಟನೆಯನ್ನು ಪತ್ರಕರ್ತ ಸುರೇಶ್ ಡಿ ಬಡಿಗೇರವರು ಜ್ಯೋತಿ ಬೆಳಗಿಸಿ ಮಾತನಾಡಿದ ಕನ್ನಡವನ್ನು ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಕನ್ನಡವು ಮುಂದಿನ ದಿನಗಳಲ್ಲಿ ಉರ್ದು. ಇಂಗ್ಲೀಷ್ ಹಿಂದಿಯಲ್ಲಿ ಇದ್ದ ಎಲ್ಲಾ ಅಂಗಡಿಗಳ ನಾಮಫಲಕವು ವಿರೋಧಿಸಿ ಕನ್ನಡ ಬರಿಸುವ ಕೆಲಸ ನಮ್ಮ ನಿಮ್ಮೆಲ್ಲರ ಮೇಲೆ ಜವಾಬ್ದಾರಿಯಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪತ್ರಕರ್ತ ಮತ್ತು ಸಾಹಿತಿ ಜಗನ್ನಾಥ್ ಎಲ್ ತರನಳ್ಳಿ ಅವರು ಮಾತನಾಡಿ. ಸಹಕಾರಕ್ಕೆ ಸಾವಿರ ಮುಖಗಳು
ಎಲ್ಲರೂ ಎಲ್ಲರಿಗಾಗಿ ಎನ್ನುವ ತತ್ವವೊಂದೇ ತತ್ವವು ಇದು ಸಹಕಾರದ ಮೂಲ ತತ್ವವಾಗಿದೆ.
ಸ್ವಯಂ ಪ್ರೇರಣೆಯ ಇಚ್ಚೆಯಿಂದ ನಡೆದುಕೊಳ್ಳುವುದೇ ಸಹಕಾರದ ವ್ಯಾಖ್ಯಾನವಾಗಿದೆ.
ಸಹಕಾರವು ಸರ್ಕಾರದ ನೆಲೆಯಲ್ಲಿಯೂ ಒಂದು ಇಲಾಖೆಯಾಗಿ ಜನಹಿತದ ಅನೇಕ ಕಾರ್ಯಕ್ರಮಗಳು ರೂಪಿಸುತ್ತದೆ. ಸರ್ಕಾರ ಮತ್ತು ಖಾಸಗಿ ನೆಲೆಗಳೆರಡರಲ್ಲೂ ಸಹಕಾರ ಸಂಯೋಗವಾಗಿ ಸಮಾಜದಲ್ಲಿ ಸರ್ವರೂ ಪರಸ್ಪರ ಸಹಬಾಳ್ವೆ ಮಾಡುವುದು ಸಹಕಾರದ ಬಹುದೊಡ್ಡ ಪಾತ್ರವಾಗಿದೆ ಜಗನ್ನಾಥ ಎಲ್ ತರನಳ್ಳಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದ ಮೇಲೆ ಹತ್ತು ಹಲವು ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಈ ಕಾರ್ಯಕ್ರಮವು ಯುವಕರಿಗೆ. ಹಿರಿಯರಿಗೆ. ಮಹಿಳೆಯರಿಗೆ. ಚಿಂತನ ಮಂಥನ ಮಾಡಲು ಈ ಕಾರ್ಯಕ್ರಮದಿಂದ ಅವಕಾಶ ನೀಡಲಾಗಿದೆ ಎಂದು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ರವೀಂದ್ರಕುಮಾರ ಬಂಟನಳ್ಳಿ . ಗೌರವ ಕಾರ್ಯದರ್ಶಿ ವಿಶ್ವನಾಥ್ ಸಿ ಯೆನಗುಂಟಿ. ವೇದಿಕೆ ಮೇಲೆ ಇದ್ದರು. ಚಿಂತನಾಗೋಷ್ಠಿಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತ ಸುಭಾಷ ಬಣಗಾರ. ಹೋರಾಟಗಾರ್ತಿ ಮಾಲ ಎಚ್ ಕಣ್ಣಿ. ಉಪನ್ಯಾಸಕರಾದ ಶ್ರೀಶೈಲ ಮದಾಣಿ. ಶ್ರೀಮತಿ ರಜನಿ ಪಾಟೀಲ. ಡಾ. ಬಸವರಾಜ್ ಅಂಗಡಿ. ಶ್ರೀಮತಿ ಪಾರ್ವತಿ ಬಿರಾದಾರ. ಶ್ರೀಮತಿ ಬಸಮ್ಮ ಸಜ್ಜನ. ಕುಮಾರ ಬಸವರಾಜ್ ಶೆಟ್ಟಿ. ಅವರು ಜನ ಹಿತ್ತದ ಮಾರ್ಗದಲ್ಲಿ ಸಹಕಾರ ಕುರಿತು ವಿಷಯದಲ್ಲಿ ಮಂಡಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ ಪದಾಧಿಕಾರಿಗಳಾದ ಪ್ರಭವ ಪಟ್ಟಣಕರ. ಶರಣು ಹಾಗರಗುಂಡಗಿ. ರೇವಯ್ಯ ಸ್ವಾಮಿ. ಹಾಗೂ ಸಮಾಜ ಚಿಂತಕ ಬನಶಂಕರ್ ಸಜ್ಜನ. ಪತ್ರಕರ್ತ ಸಿದ್ದನಗೌಡ ಮಾಲಿಪಾಟೀಲ. ಇನ್ನು ಇತರರು ಇದ್ದರು. ನಿರೂಪಣೆಯನ್ನು ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವಿಶಾಲಾಕ್ಷಿ ಮಾಯಣ್ಣವರ. ಸ್ವಾಗತವನ್ನು ವಿಜಯಕುಮಾರ ಹಾಬನೂರು. ವಂದನೆಯನ್ನು ಕವಿತಾ ಕವಳೆ ಗೈದರು .
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್