2,725 total views
ಸೇಡಂ:- ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಸಿಬ್ಬಂದಿಗಳ ಕೊರತೆ ಮಧ್ಯದಲ್ಲಿಯೂ ಬಡ ವಿದ್ಯಾರ್ಥಿಗಳು ಐಟಿಐ ಯಲ್ಲಿ ತರಬೇತಿ ಪಡೆದು ವಿವಿಧೆಡೆ ಕೆಲಸ ಪಡೆಯುವಂತೆ ಮಾಡುವುದರ ಜೊತೆಗೆ ಮಾದರಿ ಐಟಿಐ ಶಿಕ್ಷಣಕ್ಕೆ ಕನಸು ಕಂಡವರು ಮಲ್ಲಣ್ಣ ಪ್ರಾಚಾರ್ಯರು ಎಂದು 2025ರ ಸ್ವರ್ಣ ಜಯಂತಿಯ ಕಾರ್ಯ ಸ್ಥಳದ ಪ್ರಮುಖರಾದ ಭಗವಂತರಾವ್ ಪಾಟೀಲ್ ಹೇಳಿದ್ದರು.ತಾಲೂಕಿನ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಸೇಡಂ) ನೀಲಹಳ್ಳಿ ಪ್ರಾಚಾರ್ಯರ ಮಲ್ಲಣ್ಣ ಸರ್ ಅವರ ಸೇವಾ ವಯೋ ನಿವೃತ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ಸೇಡಂ) ನೀಲಹಳ್ಳಿಯಲ್ಲಿ ನೂತನವಾಗಿ ಕಟ್ಟಡ ಪ್ರಾರಂಭಕ್ಕೆ ಹಗಲು ರಾತ್ರಿ ಕಾರ್ಯನಿರ್ವಹಿಸಿರುವ ಅಪರೂಪದ ಪ್ರಾಚಾರ್ಯರು ಎಂದರು. ಈ ವೇಳೆಯಲ್ಲಿ ಹೈ ಸ್ಕೂಲ್ ನ ಎಂ , ಸುರೇಖಾ ಕುಲಕರ್ಣಿ, ಹಳೆ ವಿದ್ಯಾರ್ಥಿ ಶಿವರಾಯ ಇಂದ್ರೇಶ್ ಕುಲಕರ್ಣಿ, ಸೇರಿದಂತೆ ಹಲವರು ಮಾತನಾಡಿದರು.ಈ ವೇಳೆಯಲ್ಲಿ ಟಾಟಾ ತರಬೇತಿ ಅಧಿಕಾರಿ ಸಂತೋಷ್ ಸ್ವಾಮಿ, ತಿಪ್ಪಣ್ಣ, ಶಿವಕುಮಾರ್, ವಿವಿಧ ಐಟಿಐ ಕಾಲೇಜ್ ಪ್ರಾಂಶುಪಾಲರಾದ ಜಗನ್ನಾಥ್ ನಿಪ್ಪಾಣಿ, ಸೂರ್ಯಕಾಂತ್ ಮೌನೇಶ್, ಹಳೆ ವಿದ್ಯಾರ್ಥಿ ಅನಂತ್ ನಾಗ್, ಶ್ರೀಮಂತ ಪೂಜಾರಿ ಸೇರಿದಂತೆ ಹಲವರು ಇದ್ದರು.ವಿಶ್ವನಾಥ್ ಸ್ವಾಗತಿಸಿದರೆ, ತಿಪ್ಪಣ್ಣ ವಾಗಣಗೇರಿ ನಿರೂಪಣೆ ಮಾಡಿದರು.
ವರದಿ-ಡಾ ಎಂ ಬಿ ಹಡಪದ ಸುಗೂರ ಎನ್