3,886 total views
ಜೇವರ್ಗಿ ಸುದ್ದಿ
ಕರ್ನಾಟಕ ರಾಜ್ಯದ ಹಲವಾರು ಕಡೆಗಳಲ್ಲಿ ನಕಲಿ ರಸಗೊಬ್ಬರ ವಿತರಕರ ಬಗ್ಗೆ ರಾಜ್ಯದ ಹಲವಾರು ಕಡೆ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ತಮಗೆಲ್ಲ ಗೊತ್ತೇ ಇದೆ ಇಂತಹ ನಯವಂಚಕರ ಬಗ್ಗೆ ರೈತರು ಜಾಗೃತಿ ವಹಿಸಬೇಕು ಅಲ್ಲದೆ ಸರಕಾರದಿಂದ ಪರವಾನಿಗೆ ಪಡೆದ ಅಧಿಕೃತ ವಿತರಕರಿಂದ ರೈತರು ರಸಗೊಬ್ಬರ ಕರದಿ ಮಾಡಬೇಕು ಮತ್ತು ಖರೀದಿ ಮಾಡಿದ ಅಧಿಕೃತ ರಸೀದಿಯನ್ನು ಎಲ್ಲ ರೈತರು ಕಾಯ್ದಿಟ್ಟುಕೊಳ್ಳಬೇಕು ಅಪರಿಚಿತ ವಿತರಕರಿಂದ ಸ್ಥಳೀಯ ವ್ಯಕ್ತಿಗಳಿಂದ ರಸಗೊಬ್ಬರ ತೆಗೆದುಕೊಳ್ಳಬಾರದು ಸರಕಾರದಿಂದ ಮಾನ್ಯತೆ ಪಡೆದ ಮಳಿಗೆಗಳಿಂದ ಮಾತ್ರ ರೈತರು ರಸಗೊಬ್ಬರ ಕರದಿ ಮಾಡಬೇಕು ಅಪರಿಚಿತ ವ್ಯಕ್ತಿಗಳಿಂದ ನಕಲಿರಸಗೊಬ್ಬರ ಖರೀದಿ ಮಾಡಿ ಮೋಸ ಹೋಗದಂತೆ ರೈತರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೇವರ್ಗಿ ತಾಲೂಕಿನ ಅದ್ಯಕ್ಷರಾದ ಸಿದ್ದಣ್ಣ ಶಿಲೆದಾರ್ ಅವ್ರು ಪತ್ರಿಕಾ ಪ್ರಟಣೆಯಲ್ಲಿ ರೈತರಿಗೆ ಮನವಿ ಮಾಡಿದ್ದಾರೆ…