2,733 total views
ಇಂದು ಪತ್ರಿಕಾ ಹೇಳಿಕೆ ನೀಡಿದ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಅವರು ಮಹರ್ಷಿ ವಾಲ್ಮೀಕಿ ಅಬಿವೃದ್ಧಿ ನಿಗಮ ಇರುವುದು ಬಡವರ ಕಲ್ಯಾಣಕ್ಕೆ ವಾಲ್ಮೀಕಿ ನಾಯಕ ಸಮುದಾಯದ ಜನರ ಅಭಿವೃದ್ಧಿಗೆ. ಆದರೆ ಈ ನಿಗಮದಲ್ಲಿ ಬಡವರ ಕಲ್ಯಾಣಕ್ಕೆ ಸಿಗುವ ನೂರಾರು ಕೋಟಿ ಅನುದಾನದ ಹಣವನ್ನು ಬ್ರಷ್ಟ ಅಧಿಕಾರಿಗಳು ಭ್ರಷ್ಟ ಕೆಲವು ರಾಜಕಾರಣಿಗಳ ಜೊತೆ ಸೇರಿ ಹಣವನ್ನು ಲೂಟಿ ಹೊಡೆದು ವಾಲ್ಮೀಕಿ ನಾಯಕ ಸಮುದಾಯದ ಜನರಿಗೆ ಅನ್ಯಾಯ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಇದು ಖಂಡನೀಯ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಚಂದ್ರಶೇಖರ್ ರವರಿಗೆ ಎಲ್ಲ ಮಾಹಿತಿ ಗೊತ್ತಿದ್ದರೂ ಮೌನವಾಗಿ ಉಳಿದು ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನದ ಕೆಲಸ ಮಾಡಿದ್ದಾರೆ. ಒಂದು ರೀತಿಯಲ್ಲಿ ಇವರದ್ದು ಕೂಡ ತಪ್ಪು ಇದೆ. ಹಾಗೆಯೆ ಇವರಿಗೆ ಭ್ರಷ್ಟಾಚಾರದಲ್ಲಿ ಸಿಲುಕಿಸಿ ಇವರ ಸಾವಿಗೆ ಕಾರಣರಾದ ಅಧಿಕಾರಿಗಳು ರಾಜಕಾರಣಿಗಳ ಮೇಲೆಯೂ ಕ್ರಮ ಜರುಗಿಸಬೇಕು.ಈ ಒಂದು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಯಾರೆ ದೊಡ್ಡ ರಾಜಕಾರಣಿ ಬಾಗಿ ಆಗಿರಲಿ ಅವರ ಮೇಲೆ ಕಾನೂನು ಕ ಕೈಗೊಂಡು ತಪ್ಪು ಸಾಬೀತಾದಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಕಾನೂನು ಕಠಿಣ ಶಿಕ್ಷೆ ವಿಧಿಸಲಿ ಹಾಗೂ ಪಕ್ಷದ ಮುಖ್ಯ ಮುಖಂಡರು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ . ಯಾವುದೆ ಸರ್ಕಾರ ಇರಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಮೋಸ ಮಲತಾಯಿ ಧೋರಣೆ ಮಾಡುತ್ತಾ ಬರುತ್ತಿವೆ ಎಂದು ತಿಳಿಸಿದರು.
ವರದಿ ಜಟ್ಟಪ್ಪ ಎಸ್ ಪೂಜಾರಿ