2,709 total views
ಯಡ್ರಾಮಿ ಸುದ್ದಿ
ಯಡ್ರಾಮಿ ತಾಲೂಕಿನ ಪಂಚಾಯತ್ಗಳಲ್ಲಿ ಮಹಾತ್ಮ ಗಾಂಧೀಜಿ ಹೆಸರಿನ ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್ ದಂದೆಯಾಗಿ ಹಳ್ಳ ಹಿಡಿದು ಹೊಂಟಿದೆ ಯಾಕಂದ್ರೆ ಪಂಚಾಯತ್ ರಾಜ್ ಇಲಾಖೆ ಜಾರಿಗೆ ಬಂದಿದ್ದು ಬಡವರ ಕೂಲಿ ಕಾರ್ಮಿಕರ ನಿರ್ಗತಿಕರ ವಲಸೆ ಕಾರ್ಮಿಕರ ಕಲ್ಯಾಣ ಗೋಸ್ಕರ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದೆ ಆದರೆ ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಧ್ಯವರ್ತಿಗಳ ದಲ್ಲಾಳಿಗಳ ನಯ ವಂಚಕರ ದಂದೆಯಾಗಿ ಮಾರ್ಪಟ್ಟಿದೆ ನೂರಾರು ಜನರ ಜಾಬ್ ಕಾರ್ಡುಗಳು ಒಬ್ಬನೇ ವ್ಯಕ್ತಿ ತೆಗೆದುಕೊಂಡು ನಕಲಿ ಕಾಮಗಾರಿಗಳನ್ನು ಮಾಡಿ ಸರಕಾರಿ ದುಡ್ಡನ್ನು ಕೊಳ್ಳೆ ಹೊಡೆಯುವ ಬಿಜಿನೆಸ್ ಆಗಿದೆ ಎಂದು ಹೇಳಬಹುದು ಆಯಾ ಅಧಿಕಾರಿಗಳಿಗೆ ಪರ್ಸೆಂಟೇಜ್ ರೂಪದಲ್ಲಿ ಲಂಚವನ್ನು ಕೊಟ್ಟು ಕೆಲಸ ಮಾಡಿಕೊಳ್ಳುತ್ತಿರುವ ವ್ಯಾಪಾರವಾಗಿರುವುದು ದುರಂತವೇ ಸರಿ ಈ ಕೂಡಲೆ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ಮುಖಾಂತರ ತಕ್ಕ ಬುದ್ಧಿಯನ್ನೆ ಕಲಿಸಬೇಕಾಗುತ್ತದೆ ಎಂದು ಯಡ್ರಾಮಿ ಭೀಮ್ ಆರ್ಮಿ ತಾಲೂಕ ಅಧ್ಯಕ್ಷರಾದ ಮಹದೇವ್ ಎಸ್ ದೊಡ್ಡಮನಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ