2,702 total views
ಕರ್ನಾಟಕ ರಾಜ್ಯದ ಎಲ್ಲಾ ರೈತ ಬಾಂಧವರಿಗೆ ವಿನಂತಿಸುವುದೇನೆಂದರೆ ಈ ವರ್ಷ ಪ್ರಾರಂಭದಲ್ಲಿಯೇ ಮಳೆ ಪ್ರಾರಂಭವಾಗಿದ್ದು ಮುಂಗಾರು ಬಿತ್ತನೆ ಮಾಡತಕ್ಕಂಥಹ ರೈತರು ಸರ್ಕಾರದಿಂದ ಮಾನ್ಯತೆ ಪಡೆದಂತಹ ಅಧಿಕೃತ ಕೇಂದ್ರಗಳಲ್ಲಿಯೇ ಹತ್ತಿಬೀಜಗಳನ್ನು ಖರೀದಿ ಮಾಡಬೇಕು ಹಾಗೂ ಹತ್ತಿಬೀಜ ಖರೀದಿ ಮಾಡಿದ ತಕ್ಷಣ ಆಯಾ ಮಳಿಗೆಯ ಮಾಲೀಕರ ಖರೀದಿಯಾ ಅಧಿಕೃತ ಬಿಲ್ಲನ್ನು ಪಡೆಯಬೇಕು ಸರ್ಕಾರದಿಂದ ಮಾನ್ಯತೆ ಪಡೆದಂತಹ ಬೀಜಗಳನ್ನೇ ಖರೀದಿ ಮಾಡಿ ಬಿತ್ತನೆ ಮಾಡಬೇಕು ಹಾಗೂ ಅಂತರರಾಜ್ಯದ ರೈತರು ಬಂದು ನಕಲಿ ಹತ್ತಿ ಬೀಜಗಳ ಮಾರಾಟ ಮಾಡುತ್ತಿದ್ದರೆ ಇಂತಹ ನಯ ವಂಚಕರಿಂದ ರೈತರು ಎಚ್ಚರಿಕೆಯಿಂದ ಇರಬೇಕು . ಇಂತಹ ರೈತರಲ್ಲಿ ಹತ್ತಿಯಬೀಜವನ್ನು ಖರೀದಿಯು ಮಾಡಬಾರದು ಹಾಗೂ ರೈತ ಬಾಂಧವರು ಬೇರೆ ರಾಜ್ಯಗಳಿಗೆ ಹೋಗಿ ಹತ್ತಿಬಿಜಗಳನ್ನು ಖರೀದಿ ಮಾಡಿ ಬಿತ್ತನೆ ಮಾಡಬಾರದು ಒಂದು ವೇಳೆ ರೈತರು ಬೇರೆ ರಾಜ್ಯಗಳಿಂದ ಹತ್ತಿಬೀಜವನ್ನು ತಂದು ಬಿತ್ತನೆ ಮಾಡಿದರೆ ಆಕಸ್ಮಾತ ಆ ಬೆಳೆ ನಷ್ಟವಾಗಿ ವಿಫಲವಾದರೆ ರೈತರಿಗೆ ಯಾವುದೇ ರೀತಿಯ ಬೆಳೆ ನಷ್ಟ ಪರಿಹಾರ ಮತ್ತು ಯಾವುದೇ ರೀತಿಯ ಹಕ್ಕುಗಳು ಇರುವುದಿಲ್ಲ ಅಂತರರಾಜ್ಯದ ರೈತರಿಂದ ವಾಣಿಜ್ಯ ಬೆಳೆಗಳಾದ ಹತ್ತಿ ಬೀಜಗಳನ್ನು ಖರೀದಿ ಮಾಡಿದರು ಕೂಡ ನಾಡಿನ ರೈತರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಸರ್ಕಾರದಿಂದ ಮಾನ್ಯತೆಯನ್ನು ಪಡೆದಂತಹ ಅಧಿಕೃತ ಮಾರಾಟದ ಮಳಿಗಳಲ್ಲಿಯೇ ರೈತರು ವಾಣಿಜ್ಯ ಬೆಳೆಗಳ ಬೀಜವನ್ನು ಖರೀದಿ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಆದರೆ ಕಳೆದ ವರ್ಷ ಸುಮಾರು ಜನ ರೈತರು ಮೈಬೂಬ್ ನಗರ್ ಹಾಗೂ ಆದ್ವಾನಿ ಹಾಗೂ ಸ್ಥಳೀಯರಲ್ಲಿ ಇರತಕ್ಕಂತಹ ಆಂಧ್ರ ಮೂಲದ ರೈತರಲ್ಲಿ ವಾಣಿಜ್ಯ ಬೆಳೆಗಳ ಬೀಜವನ್ನು ಖರೀದಿ ಮಾಡಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಕಳಪೆ ಮಟ್ಟದ ಬೀಜಗಳ ಬಗ್ಗೆ ಸರ್ಕಾರದಿಂದ ವರದಿ ಬಂದರೂ ಕೂಡ ಯಾವುದೇ ರೀತಿಯ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳಲ್ಲು ಆಗಿರುವುದಿಲ್ಲ ಆದ್ದರಿಂದ ಎಲ್ಲಾ ರೈತ ಬಾಂಧವರು ಸ್ಥಳೀಯವಾಗಿ ಹಾಗು ಸರಕಾರದ ಅಧಿಕೃತ ಕೇಂದ್ರಗಳಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿಬೀಜಗಳನ್ನು ಖರೀದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ. ಎ. ಪಾಟೀಲ್ ಮದ್ರಕಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ನಾಡಿನ ರೈತರಿಗೆ ತಿಳಿಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ