2,714 total views
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹರನೂರು ಗ್ರಾಮದ ಶ್ರೀ ಸಕ್ಕರಸಾಬ ದರ್ಗಾ ಆವರಣದಲ್ಲಿ ಅಂತಾರಾಷ್ಟ್ರೀಯ ಮುಟ್ಟಿನ ನೈರ್ಯಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಹರನೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಲ್ಕಮ್ಮ ರವರು ಸ್ನೇಹ ಕ್ಲಿನಿಕ್ ಪೋಸ್ಟರಗಳನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕಾರ್ಯಕ್ರಮಕ್ಕೆ ಬಂದ ಅಥಿತಿ ಗಣ್ಯರಿಗೆ ಕೆಂಪು ಬಣ್ಣದ ಬ್ಯಾಂಡ ಕಟ್ಟುವ ಸ್ವಾಗತಿಸಿದರು ಈ ಒಂದು ಹೆಣ್ಣು ಮಕ್ಕಳಲ್ಲಿ ಆಗುವ ಮುಟ್ಟಿನ ಬಗ್ಗೆ ಮಕ್ಕಳಿಗೆ RKSK ಆಪ್ತ ಸಮಾಲೋಚಕರಾದ ಶ್ರೀ ರೇವಪ್ಪ ಪೀ ಕೆ.ಸಹ ವಿವರವಾಗಿ ಮನ ಮುಟ್ಟುವ ಹಾಗೆ ತಿಳಿಸಿದರು ಹಾಗೇನೇ ಮಕ್ಕಳಿಗೆ ಪೌಷ್ಟಿಕ ಆಹಾರ ಇತರೆ ಆರೋಗ್ಯ ಬಗ್ಗೆ HIO ರವರಾದ ಶ್ರೀ MD ಮಶಾಖ ಅವರು ತಿಳಿಸಿದರು ಅದೆ ರೀತಿಯಾಗಿ KHPT ಸಂಸ್ಥೆಯ ಸಮುದಾಯ ಸಂಘಟಕರಾದ ಶ್ರೀಮತಿ ಸೋನಾಲಿ ಅವರು ನಿರೂಪಣೆ ಮಾಡುತ್ತಾ ಹದಿ ಹರೆಯದ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು ಪಿಡಿಓ ರವರಾದ ಶ್ರೀ ವಿಜಯ ನವಣಿ ಅವರು ಆರೋಗ್ಯ ಇಲಾಖೆಗೆ ಧನ್ಯವಾದ ತಿಳಿಸಿದರು ಒಟ್ಟಾರೆಯಾಗಿ ಈ ಒಂದು ಕಾರ್ಯಕ್ರಮದಲ್ಲಿ PHCO ರಾದ ಶ್ರೀಮತಿ ಶೀಲವಂತಿ CHO ಶ್ರೀ ಆನಂದ ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು 88ಜನ ಹದಿ ಹರೆಯದ ಮಕ್ಕಳು 25ಜನತಾಯಂದಿರು 8 ಜನ ಪಾಲಕರು ಭಾವಹಿಸಿ ಇ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಜೆಟ್ಟೆಪ್ಪ ಎಸ್ ಪೂಜಾರಿ