3,450 total views
ಉತ್ತರಕನ್ನಡ ಲೋಕಸಭಾ ಚುನಾವಣೆ ಯ ಶಿರಸಿ ನಗರ ಹಾಗೂ ಗ್ರಾಮೀಣ ಮಂಡಲದ ಅವಲೋಕನ ಸಭೆ ಇಂದು ಶಿರಸಿಯ ಪಂ ದೀನ ದಯಾಳ ಭವನದಲ್ಲಿ ಲೋಕಸಭಾ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿರವರ ನೇತೃತ್ವದಲ್ಲಿ ನಡೆಯಿತು,
ಈ ವೇಳೆ ಕಾಗೇರಿ ರವರು ಶಿರಸಿ ನಗರ ಹಾಗೂ ಗ್ರಾಮೀಣ ಮಂಡಲದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ನಾವು ಈ ಬಾರಿ ಬಿಜೆಪಿಗೆ ಮತಚಲಾಯಿಸಿ ಮೋದಿಯವರ ಕನಸಿನ 2047ರ ವಿಕಸಿತ ಭಾರತ ಕಟ್ಟಲು ಅಳಿಲು ಸೇವೆ ಮಾಡಿದಂತಾಗಿದೆ ಎಂದುಹೇಳಿ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ ಕಾರ್ಯಕರ್ತರನ್ನು ಅಭಿನಂದಿಸಿದರು ಮತ್ತು ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರ ಬಳಿ ಚುನಾವಣೆಯ ಬಗ್ಗೆ ಅವಲೋಕನೇ ಮಾಡಿ ಮಾಹಿತಿ ಪಡೆದುಕೊಂಡರು
ಈ ವೇಳೆ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷರು ಅಶೋಕ ಛಲವಾದಿ ಪ್ರಧಾನಕಾರ್ಯದರ್ಶಿ ಗುರುಪ್ರಸಾದ ಹೆಗಡೆ,ಶಿರಸಿ -ಸಿದ್ದಾಪುರ ಚುನಾವಣೆ ಸಂಚಾಲಕರಾದ ಆರ್ ಡಿ ಹೆಗಡೆ ಶಿರಸಿ ನಗರ ಮಂಡಲ ಅಧ್ಯಕ್ಷರಾದ ಆನಂದ ಸಾಲೇರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ಉಷಾ ಹೆಗಡೆ, ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ಮಾದನಗೇರಿ, ಜಿಲ್ಲಾ ಕೋಶಾಧ್ಯಕ್ಷರಾದ ರಮಕಾಂತ ಭಟ್, ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರೇಮಕುಮಾರ ನಾಯ್ಕ, ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ರಮೇಶ್ ನಾಯ್ಕ ರವರು ಹಾಗೂ ಶಕ್ತಿ ಕೇಂದ್ರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮಹಾ ಶಕ್ತಿ ಕೇಂದ್ರ ಪ್ರಭಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು