3,696 total views
ಚಿಟಗುಪ್ಪ. ತಾಲೂಕಿನ ಮನ್ನಾಎಕ್ಕೇಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಚಿತ್ತಕೋಟೆ ಅವರು ಕರ್ತವಲೋಪ ಎಸಿಗಿದ್ದಾರೆ ಎಂದು ಆರೋಪಿಸಿ . ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ಅಮಾನತು ಮಾಡಿದ್ದಾರೆ. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಕುದ್ದುಸ್ ಅವರು ವೈದ್ಯಾಧಿಕಾರಿ ಜಾದವ್ ಅವರೊಂದಿಗೆ ಅಲ್ಲಿಯ ಅವ್ಯವಸ್ಥೆಯ ಬಗ್ಗೆ ವಾದ ಮಾಡಿದ್ದಕ್ಕೆ ವೈದ್ಯರು ಠಾಣೆಗೆ ದೂರು ಸಲ್ಲಿಸಲು ಎರಡು ಬಾರಿ ಭೇಟಿ ನೀಡಿದರು ಅವರ ಮನವಿಗೆ ಸಬ್ ಇನ್ಸ್ಪೆಕ್ಟರ್ ಬಸವರಾಜ್ ಚಿತ್ತಕೋಟೆ ಸ್ಪಂದಿಸದಿದ್ದಕ್ಕೆ ಕರ್ತವಲೋಪ ಆರೋಪದಡಿ ಅಮಾನತುಗೊಳಿಸಲಾಗಿದೆ