3,392 total views
ಕಲಬುರಗಿ:- ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮಕ್ಕೆ ಯಾದಗಿರಿ ಜಿಲ್ಲೆಯ (ಕೆ.ಎಸ್ ಆರ್.ಟಿ.ಸಿ ) & (ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರ ಜಿಲ್ಲಾ ಘಟಕದಿಂದ ನಿತ್ಯ ಬಸ್ ಸಂಚಾರ ಆರಂಭಗೊಂಡಿದೆ , ಬಹು ದಿನಗಳ ಬೇಡಿಕೆ ಈಗ ಈಡೇರಿದೆ. ಈ ಗ್ರಾಮದಿಂದ ಅನೇಕ ವಿಧ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲಕರ ವಾಗಿದೆ. ಪ್ರತಿನಿತ್ಯ ಯಾದಗಿರ ದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಅಲ್ಲಿಪೂರ, ಯರಗೋಳ, ನಾಲವಾರ , ಮಾರ್ಗವಾಗಿ ಸುಗೂರ ಎನ್ ಗ್ರಾಮಕ್ಕೆ ಸಂಜೆ 8:15 ನಿಮಿಷಕ್ಕೆ ಕ್ಕೆ ಸುಗೂರ ಎನ್ ಗ್ರಾಮಕ್ಕೆ ತಲುಪುತ್ತದೆ.ಮರುದಿನ ಬೆಳಿಗ್ಗೆ 6 ಗಂಟೆಗೆ ಹೋರಡುವ ಬಸ್ ಶಾಂಪೂರಹಳ್ಳಿ, ತರಕಸಪೇಟ್,ಕೊಲ್ಲೂರು ಮಾರ್ಗವಾಗಿ ಸುಗೂರ ಎನ್ ಗ್ರಾಮಕ್ಕೆ ಬೆಳಿಗ್ಗೆ 6 ಗಂಟೆಗೆ ತಲುಪಿ , ಸುಗೂರ ಎನ್ ಗ್ರಾಮದ ಮಾರ್ಗವಾಗಿ ನಾಲವಾರ ಮತ್ತು ಯರಗೋಳ ಅಲ್ಲಿಪೂರ ಮಾರ್ಗವಾಗಿ ಬೆಳಿಗ್ಗೆ 7 ಗಂಟೆಗೆ ಯಾದಗಿರಿ ತಲುಪುತ್ತದೆ, ಈ ಬಸ್ ಸಂಚಾರದ ಸದುಪಯೋಗವನ್ನು , ಊರಿನ ಗ್ರಾಮಸ್ಥರು , ವಿದ್ಯಾರ್ಥಿಗಳು, ಪಡೆದುಕೊಳ್ಳಬೇಕು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಭಿನಂದನೆಗಳು, ಯಾದಗಿರ ಬಸ್ ಘಟಕದಿಂದ ಸುಗೂರ ಎನ್ ಗ್ರಾಮಕ್ಕೆ ವಸತಿ ಬಸ್ ಕಲ್ಪಿಸಲು ಶ್ರಮಿಸಿದ ಯಾದಗಿರಿ ಶಾಸಕರಾದ ಶ್ರೀ ಸನ್ಮಾನ್ಯ ಚನ್ನಾರೆಡ್ಡಿಗೌಡ ಪಾಟೀಲ. ತುನ್ನೂರ ಅವರು ಹಾಗೂ ಪರ್ತರೆಡ್ಡಿಗೌಡ, ಸಂಗಾರೆಡ್ಡಿ ಮಾಲಿ ಪಾಟೀಲ, ಬಸ್ಸುಗೌಡ ಮಾರಡಗಿ , ವಿಶ್ವನಾಥ ರೆಡ್ಡಿ ಪಾಟೀಲ ವಂಡ್ನಳ್ಳಿ, ಬಸವರಾಜ ಹಡಪದ ಸುಗೂರ ಎನ್, ಸುಖುದೇವ್ ಚವ್ಹಾಣ, ಶ್ರೀಮಂತ ಭಾವಿ, ಹಾಗೂ ಸಂಗಣ್ಣ ಸಾಹು ಮಡ್ನಾಳ, ಶರಣಪ್ಪ ಸಾಹು ಕುಂಬಾರ ,ಶಿವುಗೌಡ ಕೊಳ್ಳಿ, ವಿಶ್ವಜೀತ್ ಪಾಟೀಲ್ , ಹಣಮಂತ ನಾಯ್ಕೊಡಿ , ಬಾಷುಮೀಯಾ ಬಂಟ್ನಳ್ಳಿ , ಅಯ್ಯಪ್ಪ ಪೂಜಾರಿ ವಿಜಾಪುರ, ಮರೆಪ್ಪ ಬಡಿಗೇರ , ಚಾಂಧಪಾಷಾ ಬಂಟ್ನಳ್ಳಿ , ಮರೆಪ್ಪಾ ನಾಯ್ಕೊಡಿ, ಹಾಗೂ ನಬಿಲಾಲ್, ಮತ್ತು ಮಲ್ಲಪ್ಪ ಪೂಜಾರಿ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಸ್ವಾಮಿ ಭಾವಿ, ಸಿದ್ದಪ್ಪ ಭಾವಿ, ಹಾಗೂ ರಾಜಕುಮಾರ ಚವ್ಹಾಣ , ಸೇರಿದಂತೆ ಅನೇಕ ಸುಗೂರ ಎನ್ ಗ್ರಾಮಸ್ಥರು ಈ ಸಂಧರ್ಭದಲ್ಲಿ ಹರ್ಷದಿಂದ ಬಸ್ ಸುಗೂರ ಎನ್ ಗ್ರಾಮದಲ್ಲಿ ಯಾದಗಿರಿ ಡಿಪೋ ದ್ (ಕಲ್ಯಾಣ ಕರ್ನಾಟಕ ಸಾರಿಗೆ) ಅಡಿಯಲ್ಲಿ ಯಾದಗಿರಿ ವಯಾ / ಶಾಂಪೂರಹಳ್ಳಿ ಬಸ್ ನ್ನು ಸುಗೂರ ಎನ್ ಗ್ರಾಮದಲ್ಲಿ ಸ್ವಾಗತ (ಬರಮಾಡಿಕೊಂಡು) ಡೈವರ್ ಮತ್ತು ಕಂಡಕ್ಟರ್ ಅವರಿಗೆ ನಮ್ಮೂರಿನ ಗ್ರಾಮದ ವತಿಯಿಂದ ಸನ್ಮಾನ ಸತ್ಕಾರ ಮಾಡಿ ಬಸ್ ಗೇ ಚಾಲನೆ ನೀಡಿದರು.
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್