2,752 total views
ಬೀದರ: ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳು ಶ್ರೀ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ದಿನದಂದು ಪಂಚಾಯತ್ ಕಾರ್ಯಾಲಯಕ್ಕೆ ಆಗಮಿಸದೆ ಜಯಂತಿ ಆಚರಣೆಯಲ್ಲಿ ಬೇಜವಾಬ್ದಾರಿತನ ತೋರಿಸಿದ್ದಾರೆ…
ಅದೇ ದಿನದಂದು ರೆಡ್ಡಿ ಸಮಾಜ ಜನರು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ದಿಡೀರ್ ಭೇಟಿ ನೀಡಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ವಿಚಾರಿಸಿದಾಗ ನಂತರ ಯಾವುದೋ ಒಂದು ಮೂಲೆಯಲ್ಲಿರುವ ಫೋಟೋ ತಂದು ಜಯಂತಿ ಆಚರಣೆ ಮಾಡುವ ಮೂಲಕ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವತೆಗೆ ಅಗೌರವ ಮಾಡುವ ಮೂಲಕ ಬೇಜವಾಬ್ದಾರಿತನವನ್ನು ಮೆರೆದಿದ್ದಾರೆ..
ಈಗಾಗಲೇ ಸಂಬಂಧಪಟ್ಟ ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಿಲ್ಲಾ…
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದ ಕಾರಣ ದಿನಾಂಕ್ 21.05.2024 ರಂದು ನಿರ್ಣಾ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ರೆಡ್ಡಿ ಸಮಾಜದ ಬಂಧುಗಳು ಪ್ರತಿಭಟನೆಯನ್ನು ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖಾಂತರ ತಿಳಿಸಿರುತ್ತಾರೆ…
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರಿಗೆ ಗ್ರಾಮ ಪಂಚಾಯತ್ ಕಾರ್ಯಾಲಯ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿರುತ್ತಾರೆ
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರಾದ ಶಂಕರ ರೆಡ್ಡಿ ರೆಡ್ಡಿ ಸಮಾಜ ಯುವ ಘಟಕದ ಜಿಲ್ಲಾಧ್ಯಕ್ಷರಾದ ಸಂತೋಷ್ ರೆಡ್ಡಿ ಅಣದುರ್
ಫೆಂಟಾರೆಡ್ಡಿ, ವಿಜಯರೆಡ್ಡಿ ದೀಪಕರೆಡ್ಡಿ, ಜಗನಾಥ್ ರೆಡ್ಡಿ ,ಯಮಾರೆಡ್ಡಿ, ಕೃಷ್ಣಾರೆಡ್ಡಿ, ಸುಭಾಷ್ ರೆಡ್ಡಿ, ವೆಂಕಟರೆಡ್ಡಿ, ಬಲವಂತ ರೆಡ್ಡಿ ಸಾಯಿನಾಥ್ ರೆಡ್ಡಿ , ಉಪಸ್ಥಿತರಿದ್ದರು