2,681 total views
ಗಂಗಾವತಿ: ನಗರದ ಶ್ರೀ ಸೀತಾ ರಾಮಾಂನೇಯ್ಯ ದೇವಸ್ಥಾನದಲ್ಲಿ ಮೇ.೧೮ ಶನಿವಾರ ಬೆಳಗ್ಗೆ ೧೦.೩೦ಕ್ಕೆ ಗಂಗಾವತಿ ತಾಲೂಕಾ ಉಪ್ಪಾರ ಸಮಾಜದ ಪದಾಧಿಕಾರಿಗಳ ಆಯ್ಕೆಯ ಸಭೆ ಕರೆಯಲಾಗಿದೆ ಎಂದು ಗೌರವಧ್ಯಕ್ಷ ಅಮರಜ್ಯೋತಿ ವಿ. ನರಸಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಾ ಅಧ್ಯಕ್ಷ ಮುದ್ದಪ್ಪ ರ್ಹಾಳ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಮತ್ತು ಉಳಿದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಗಂಗಾವತಿ ತಾಲೂಕಾ ವ್ಯಾಪ್ತಿಯ ಉಪ್ಪಾರ ಸಮಾಜ ಬಾಂಧವರ ಸಭೆ ಕರೆಯಲಾಗಿದ್ದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ತಪ್ಪದೆ ಆಗಮಿಸಿ ಸಭೆ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ.