2,680 total views
ಶಿರಸಿ: ಇಲ್ಲಿನ ಪ್ರತಿಷ್ಠಿತ ಕಾಮಧೇನು ಜ್ಯುವೆಲರ್ಸ್ ಮಾಲೀಕನ ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರೀತಮ್ ಪ್ರಕಾಶ ಪಾಲನಕರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪ್ರೀತಮ್ ಗೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದು ಒಂದುವರೆ ವರ್ಷದ ಮಗುವಿದೆ.ಪ್ರೀತಮ್ ಆತ್ಮಹತ್ಯೆ ಹಿಂದೆ ಕಾಣದ ವ್ಯಕ್ತಿಯ ಕೈವಾಡ ಇರಬಹುದೆನ್ನುವ ಬಲವಾದ ಶಂಖೆ ವ್ಯಕ್ತವಾಗಿದೆ. ಬಹುಶಃ ಯಾರಿಂದಾದರೂ ಬ್ಲ್ಯಾಕ್ ಮೆಲ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಕುಟುಂಬ ಮೂಲದವರದ್ದು. ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.