2,716 total views
ಜೇವರ್ಗಿ: ಇವತ್ತಿನ ದಿನಗಳಲ್ಲಿ ಹಲವಾರು ಸಂಘಟನೆಗಳು ಬೆಳೆದು ನಿಂತೀವಿ ಅದರ ಜೊತೆಯಲ್ಲಿ ಹಲವಾರು ದಲಿತ ಪರ ಸಂಘಟನೆಯು ಸಹ ರಚನೆ ಆಗಿವೆ ಬಹಳ ಸಂತೋಷ ಆದರೆ ಅವುಗಳ ಕಾರ್ಯ ಬಹಳ ಪ್ರಮುಖವಾಗಿರುತ್ತದೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಾರಿದ ಶಿಕ್ಷಣ ಸಂಘಟನೆ ಹೋರಾಟ ಸಿದ್ಧಾಂತ ಪಾಲಿಸಬೇಕು ಮೊದಲು ಎಲ್ಲರೂ ಶಿಕ್ಷಣಕ್ಕೆ ಒತ್ತು ಕೊಡಬೇಕು ನಂತರ ಸಂಘಟನೆ ಮೂಲಕ ಹಲವಾರು ಸಮಾಜದ ವಿರುದ್ಧ ಆಗುವ ದೌರ್ಜನ್ಯ ವಿರುದ್ಧ ಧ್ವನಿ ಎತ್ತಬೇಕು ಅದಕ್ಕೆ ಕಾನೂನಿನ ನೆರವಿನಿಂದ ನ್ಯಾಯ ಒದಗಿಸಿದಾಗ ಅದು ಸಾರ್ಥಕ ನಿಮ್ಮ ಹೋರಾಟಕ್ಕೆ ಬೆಲೆ ಬರುತ್ತೆ ಎಂದು ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಭೀಮ್ ಆರ್ಮಿ ಕರ್ನಾಟಕ ಐಕತ ಮಿಷನ್ ಸಂಘಟನೆಯ ಗ್ರಾಮ ಘಟಕ ರಚನೆ ಕಾರ್ಯಕ್ರಮದಲ್ಲಿ ಎಂದು ಶರಣು ನೆರಡಗಿ ಮಾತನಾಡಿದರು.
ಸಂಘಟನೆಯಲ್ಲಿ ನಾವು ಸಾಗುವ ದಾರಿಯಲ್ಲಿ ಹಲವಾರು ಅಡಚಣೆ ಬರುತ್ತವೆ ನಾವು ಬಹಳ ತಾಳ್ಮೆಯಿಂದ ಇರಬೇಕು ಯಾವುದೇ ಆತುರದ ನಿರ್ಧಾರ ನಮ್ಮ ಪ್ರಗತಿಗೆ ಕಂಠಕವಾಗುವ ಸಾಧ್ಯತೆ ಇರುತ್ತೆ ಎಚ್ಚರಿಕೆಯಿಂದ ಸಾಗಬೇಕು ಎಂದರು
ಸಂಘಟನೆ ಉತ್ತಮ ರೀತಿಯಲ್ಲಿ ನಡಿಸಿಕೊಂಡು ಹೋಗಬೇಕು ಸಂಘಟನೆಯ ತತ್ವ ಸಿದ್ಧಾಂತ ಪಾಲನೆ ಮಾಡಬೇಕು ಭೀಮ್ ಆರ್ಮಿ ಜೇವರ್ಗಿ ತಾಲೂಕ ಅಧ್ಯಕ್ಷರಾದ ಸುನಿಲ್ ರಾಜಾಹುಲಿ ತಿಳಿಸಿದರು.
ಮಂದೇವಾಲ ಗ್ರಾಮ ಘಟಕದ ಪದಾಧಿಕಾರಿಗಳು
ಮಲ್ಕಪ್ಪ ಸುಣ್ಣೂರು ಅಧ್ಯಕ್ಷರು, ರಾಹುಲ್ ಸಿಂಗೆ ಉಪಾಧ್ಯಕ್ಷರು,ಬಾಗೇಶ್ ನೇರಡಗಿ ಕಾರ್ಯದರ್ಶಿ,ಮುನ್ನ ಶೇಕ್ ಸಹಕಾರದರ್ಶಿ,ಖಜಾಂಚಿ ಸುನಿಲ್ ಲಂಗೋಟಿ,ವಿದ್ಯಾರ್ಥಿ ಘಟಕ ಅಧ್ಯಕ್ಷರು ಪ್ರವೀಣ್ ಸುಣ್ಣೂರ್,ಸದಸ್ಯರು. ಶ್ರೀಮಂತ್ ಜಡಗಿ. ಶ್ರೀಶೈಲ್ ಬುಟ್ನಾಳ. ನಾಗಪ್ಪ ಬುಟ್ನಾಳ, ಜೈ ಭೀಮ್ ನೆರಡಗಿ, ಹುಲಿಯಪ್ಪ ಲಂಗೋಟಿ, ಚೇತನ್ ಬುಟ್ನಾಳ್,ಅನಿಲ್ ಸಿಂಗೆ,ಈರಪ್ಪ ಬಡಿಗೇರ್, ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಸದಸ್ಯರ ಸಾಗರ ಮಂದೇವಾಲ, ರಾಹುಲ ಪಂಚಶೀಲ, ಮಿಲ್ಲಿಂದ ಸಾಗರ್, ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು.
ವರದಿ ಜಟ್ಟಪ್ಪ ಎಸ್ ಪೂಜಾರಿ