2,359 total views
ಯಡ್ರಾಮಿ ಸುದ್ದಿ
ನಮ್ಮ ಕರ್ನಾಟಕ ಸೇನೆ ಯಡ್ರಾಮಿ ತಾಲೂಕ ಘಟಕದ ವತಿಯಿಂದ ಯಡ್ರಾಮಿ ತಾಲೂಕ ಯಲಗೋಡ ಗ್ರಾಮ ಪಂಚಾಯತ್ ಅಕ್ರಮ ಕ್ರಿಯಾ ಯೋಜನೆಯ ವಿರುದ್ಧ ತಾಲೂಕ್ ಪಂಚಾಯತ್ ಕಾರ್ಯನಿರ್ವಹ ಅಧಿಕಾರಿ ಮಾಂತೇಶ್ ಪುರಾಣಿಕ ಅವರಿಗೆ ಮನವಿ ಸಲ್ಲಿಸಲಾಯಿತು. ಯಲಗೋಡ ಗ್ರಾಮ ಪಂಚಾಯತ ಪಿ.ಡಿ.ಓ. ಶಿವಕುಮಾರ್ ಬಿರಾದರ್ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಗ್ರಾಮ ಪಂಚಾಯತ ಸಭೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕ್ರಿಯಾಯೋಜನೆ ಮಾಡುವುದನ್ನು ಬಿಟ್ಟು ತಮ್ಮ ಮನಸ್ಸಿಗೆ ಬಂದಂತೆ ಭಿಕಾ ಬಿಟ್ಟಿಯಾಗಿ ಕ್ರಿಯಾಯೋಜನೆಯ ಕಾಮಗಾರಿಗಳನ್ನು ಯಲಗೋಡ ಗ್ರಾಮ ಪಂಚಾಯತ್ ಪಿ.ಡಿ.ಓ. ಶಿವಕುಮಾರ್ ಬಿರೆದಾರ್ ಮತ್ತು ಪಂಚಾಯತ್ ಅಧ್ಯಕ್ಷರು ಎಲ್ಲೊ ಕುಂತುಕೊಂಡು ತಮ್ಮ ಮನಸ್ಸಿಗೆ ಬಂದಂತೆ ರಾಜಕೀಯವಾಗಿ ಕ್ರಿಯಾಯೋಜನೆ ಮಾಡಿ ರೈತರಿಗೆ ಮತ್ತು ಸಾರ್ವಜನಿಕರಿಗೆ ತಲುಪದಂಥಹ ಅಕ್ರಮ ಕಾನೂನು ಬಾಹಿರ ಕ್ರಿಯಾಯೋಜನೆಯ ಅಕ್ರಮ ಕಾಮಗಾರಿಗಳನ್ನು ತಡೆಯಬೇಕು ಒಂದು ವೇಳೆ ಈ ಕಾಮಗಾರಿಗಳನ್ನು ಚಾಲು ಮಾಡಿದರೆ ಮುಂಬರುವ ದಿನಗಳಲ್ಲಿ ತಾಲೂಕ ಪಂಚಾಯತ ಮುಂದೆ ಮತ್ತು ಗ್ರಾಮ ಪಂಚಾಯತ ಮುಂದೆ ಉಗ್ರವಾದ ಹೋರಾಟ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಮ್ಮ ಕರ್ನಾಟಕ ಸೇನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾಧ ರೇವಣಸಿದ್ದ ಎನ್ ಮಕಾಶಿ ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು ಹಾಗು ಜಿಲ್ಲಾ ಉಪಾಧ್ಯಕ್ಷರಾಧ ಸುನಿಲ್ ಜಮಾದಾರ ಮತ್ತು ಯುವ ಘಟಕ ಸಂಚಾಲಕರಾಧ ಬಸ್ಸಗೌಡ ದ್ಯಾಮ ಹಾಗು ಬಾಗೇಶ್ ಪದ್ಮ ಇಜೇರಿ ವಲಯ ಪ್ರಧಾನ ಸಂಚಾಲಕರು ಯಲ್ಲಪ್ಪ ನಾಯ್ಕೋಡಿ ನಗರ ಘಟಕ ಅಧ್ಯಕ್ಷ ಭಾಗ್ಯವಂತ ಪವಾರ್ ನಮ್ಮ ಕರ್ನಾಟಕ ಸೇನೆ ಯಡ್ರಾಮಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ