2,662 total views
ನನ್ನತನ ಉಳಿಸುತಲಿ ಸಾಗುತಿರೆ ಕೆಲಸದಲಿ
ತನ್ನವರು ಯಾರೆಂದು ತಿಳಿಯುತಿರಲು
ಮನ್ನವನು ನೋವುಗಳ ಮಾಡುತಲಿ ಸಾಗುವೆನು
ಅನ್ನವನು ಹಾಕುತಿರು ಲಕ್ಷ್ಮಿ ದೇವಿ.
ಮೊಹಮ್ಮದ್ ಅಜರುದ್ದೀನ್ ರವರು ತನ್ನದೇ ಆದಂತಹ ಕಾರ್ಯವನ್ನು ಒಳಗೊಂಡಿದ್ದು . ಉದಯೋನ್ಮುಖ ಕವಿಗಳಾಗಿದ್ದಾರೆ. ತನ್ನತನವನ್ನು ಉಳಿಸಿಕೊಳ್ಳುತ ತನ್ನವರು ಯಾರೆಂದು ತಿಳಿಯುತ್ತಾ, ಮಾಡಿರುವ ಕೆಲವರ ನೋವುಗಳನ್ನು ಮನ್ನಿಸುತ ಸಾಗುತ್ತಿದ್ದಾರೆ. ಅನ್ನಪೂರ್ಣೆಗೆ ನಮಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಸಾಗುತ್ತಿದ್ದಾರೆ .
“ನನ್ನ ವಿಳಾಸ” ಬರೆದಿರುವ ಕೃತಿಯ ಕವಿ ಮಹಮ್ಮದ್ ಅಜರುದ್ದೀನ್ ರವರ ಭಾವನಾತ್ಮಕ ಅಲೆಗಳಲ್ಲಿ ಮಿಂದು ಬರೆದಂತಹ ಕವನಗಳಾಗಿದೆ. “ನನ್ನ ವಿಳಾಸ” ಕೃತಿಯು 150 ಪುಟಗಳನ್ನು ಒಳಗೊಂಡಂತಹ ಕೃತಿಯಾಗಿದ್ದು. ಇದರ ಬೆಲೆಯು 165 ಆಗಿದೆ. 2023ರ ಆವೃತ್ತಿಯಾಗಿದೆ. ನಂತರದಲ್ಲಿ ಮುನ್ನುಡಿಯನ್ನು ಕಾಣಬಹುದು. ಮುನ್ನುಡಿಯನ್ನು ಶ್ರೀ ಮನು ಗುರುಸ್ವಾಮಿ. ಬರಹಗಾರರು ತಲಕಾಡುರವರು ಬರೆದಿದ್ದಾರೆ. ನಂತರ ಕವಿಗಳಾದ ಮೊಹಮ್ಮದ್ ಅಜರುದ್ದೀನ್ ರವರು ” ಮನದಾಳದ ಮಾತು” ಎಂಬ ಶೀರ್ಷಿಕೆಯಲ್ಲಿ ಅವರ ಸಾಹಿತ್ಯ ಕ್ಷೇತ್ರದಲ್ಲಿ ಸಹಕಾರ ಮಾಡಿದ ಎಲ್ಲರಿಗೂ ಕೃತಜ್ಞತಾ ಪೂರ್ವಕವಾಗಿ ಅಭಿನಂದನೆಯನ್ನು ಸೂಚಿಸಿದ್ದಾರೆ. ನಂತರ ಪರಿವಿಡಿಯನ್ನು ಗಮನಿಸಬಹುದು. ಒಟ್ಟು 72 ಕವನಗಳನ್ನು ಒಳಗೊಂಡಿರುವ ಈ ನನ್ನ ವಿಳಾಸ ಕವನ ಸಂಕಲನವು
ಮೊದಲನೆಯ ಚೋಚ್ಚಲ ಕೃತಿಯಾಗಿದೆ.
ಈ ಕೃತಿಯ ಮೊದಲ ಕವನ ವಾದ “ಸಾಧನೆಯ ಹಾದಿ” ಯಲ್ಲಿ
” ಸೋಲಿಗೆ ನೀ ಎಂದು ಹೆದರಬೇಡ
ಗೆಲುವಿಗೆ ನೀ ಎಂದು ನಲಿಯ ಬೇಡ
ಹಾಕದು ಎಂದು ನೀನು ಕೂರಬೇಡ
ಸೋಲು ಎಂಬುದು ಶಿಕ್ಷೆಯಲ್ಲ
ಗೆಲುವು ಎಂಬುದು ದಾರಿಯಲ್ಲ
ಈ ಬದುಕಿನಲ್ಲಿ ಯಾವುದು ಶಾಶ್ವತವಲ್ಲ”
ಈ ಸಾಲುಗಳನ್ನು ಗಮನಿಸಿದರೆ ಪ್ರತಿಯೊಬ್ಬ ಮನುಷ್ಯನು ಯಾವುದಕ್ಕೂ ಹೆದರದೆ. ಕಷ್ಟ ಬಂದಾಗ ಕುಗ್ಗಬಾರದು , ಸಂತೋಷ ಬಂದಾಗ ಇಗ್ಗಬಾರದು. ಪ್ರತಿಯೊಂದನ್ನು ಎದುರಿಸಲೇಬೇಕು. ಸೋಲನ್ನು ಶಿಕ್ಷೆ ಎಂದು ತಿಳಿದುಕೊಳ್ಳದೆ ಸಾಗಬೇಕು. ಗೆಲುವು ಎಂದಿಗೂ ಯಾವಾಗಲು ಸಿಗುತ್ತಿರುವುದಿಲ್ಲ ಎಂಬುದನ್ನು ಅರಿತು ಸಾಗಬೇಕು. ಸೋಲು ಗೆಲುವಿನ ಜಂಜಾಟದಲ್ಲಿ ಈ ಎರಡರ ಪರಿವಿರಬೇಕು ಎಂದು ತಿಳಿಸಿದ್ದಾರೆ. ಈ ಬದುಕಿನಲ್ಲಿ ಯಾವುದು ಶಾಶ್ವತವಲ್ಲ ಎಂಬುದನ್ನು ತಿಳಿದು ಬಾಳಬೇಕಾಗಿದೆ ಎಂಬ ಸಾರವನ್ನು ತಿಳಿಸಿದ್ದಾರೆ. ಹೀಗೆ ಕೃತಿಯಲ್ಲಿ ಗಮನಿಸಿದರೆ
ಹಲವಾರು ಕವನಗಳನ್ನು ಒಳಗೊಂಡ ಈ ಕೃತಿಯು
“ಮಹಾಮಾರಿ” ಎಂಬ ಕವನವು ಬಹಳ ಅರ್ಥಪೂರ್ಣವಾದಂತಹ ಕವನವಾಗಿದೆ.
” ತೊಳಿಯೋಣ ಕೈಯನ್ನು ಹಾಕಿ ಸೋಪನ್ನು
ಮುಚ್ಚೋಣ ಮುಖವನ್ನು ಹಾಕಿ ಮಾಸ್ಕನ್ನು
ತಿಳಿಯಿರಿ ಪ್ರತಿಯೊಬ್ಬರೂ ಈ ಗುಟ್ಟನ್ನು
ಹೊಡೆದು ಓಡಿಸೋಣ ಕರೋನವನ್ನು ”
ಈ ಮೇಲಿನ ಸಾಲುಗಳು ಕೋರೋನಾ ಸಮಯದ್ದು. ಇಲ್ಲಿ ನೋಡಿ ಕೋರೊನಾ ಎಂಬುದು ಎಂಥಹವರನ್ನು ಎದುರಿಸಿದಂತಹ ಮಹಾಮಾರಿಯಾಗಿದೆ. ಇಂತಹ ಮಾರಿಯನ್ನು ಹೋಗಲಾಡಿಸಲು ಬಹಳಷ್ಟು ಪ್ರಯತ್ನಗಳನ್ನು, ಉಪಾಯಗಳನ್ನು, ಮಾಡಿದರು ಸಹ.ಅದರ ಅಟ್ಟಹಾಸವನ್ನು ತೋರಿರುವ ಬಗ್ಗೆ ಕವನದ ರೂಪದಲ್ಲಿ ನೀಡಿದ್ದಾರೆ. ಭಯಾನಕವಾದಂತಹ ಪರಿಸ್ಥಿತಿಯನ್ನು ತಂದೊಡ್ಡಿದಂತಹ ಕೋರೋನಾ ನಿಜವಾಗಿಯೂ ಮಹಾಮಾರಿಗೆ. ಈ ಕೋರೋನದಿಂದ ಬಹಳಷ್ಟು ಕುಟುಂಬಗಳು ಪ್ರೀತಿ ಪಾತ್ರರನ್ನು ಕಳೆದುಕೊಂಡದ್ದು ಇಂದಿಗೂ ಬರಿಸಲಾಗದ ನಷ್ಟವಾಗಿದೆ.
ಹೀಗೆ ಮುಂದುವರೆಯುತ್ತಾ ಗಮನಿಸಿದರೆ
” ನನ್ನ ಅಪ್ಪ” ಎಂಬ ಕವನದಲ್ಲಿ ಕೆಲವು ಸಾಲುಗಳು ಭಾವನಾತ್ಮಕವಾಗಿ ಮನಸ್ಸಿಗೆ ಹಿತವನ್ನು ನೀಡುತ್ತವೆ.
” ತನ್ನ ಹೆತ್ತವರಿಗೆ ಮಗನಾಗಿ
ತನ್ನ ಹೆಂಡತಿಗೆ ಗಂಡನಾಗಿ
ತಾನು ಹೆತ್ತ ಮಕ್ಕಳಿಗೆ ಅಪ್ಪನಾಗಿ
ಸಂಸಾರ ಎಂಬ ದೋಣಿ ನಡೆಸುವವನು ನನ್ನ ಅಪ್ಪ”……
ಹೆತ್ತವರಿಗೆ ಮಗನಾಗಿ ಮಾಡುತ್ತಿರಬೇಕು ಜೀವನದಲ್ಲಿ ಹಾಗೆಯೇ ಕಾರ್ಯವನ್ನು. ಹೆಂಡತಿಗೆ ಗಂಡನಾಗಿರಬೇಕು, ತಾನು ಹೆತ್ತ ಮಕ್ಕಳಿಗೆ ಅಪ್ಪನಾಗಿರಬೇಕು. ಸಂಸಾರದ ಕಣ್ಣಾಗಿ ಜೀವನದ ದೋಣಿಯನ್ನು ಅಪ್ಪನೇ ನಡೆಸಬೇಕು. ಎಂಬುದನ್ನು ಭಾವನಾತ್ಮಕವಾಗಿ ತಿಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೆಡೆ ತಿಳಿಯದೆಯೆ ಅಕ್ಷರದೋಷಗಳಾಗಿದ್ದರು ಭಾವನೆಗಳು ಅರ್ಥವಾಗುತ್ತದೆ. ಮನೆಗೆ ಪ್ರಮುಖವಾದ ತೇರು ಅಪ್ಪ ಎಂಬುದನ್ನು ತಿಳಿದ ಮೇಲೆ ಆತನನ್ನು ಎಷ್ಟೇ ಹೊಗಳಿದರು ಕಡಿಮೆ. ಆತನು ಜವಾಬ್ದಾರಿಯ ಮೂಟೆಯನ್ನು ಹೊತ್ತು ನಡೆಯುತ್ತಾನೆ.
ಇದೇ ರೀತಿ ಇನ್ನೊಂದು ಅರ್ಥಪೂರ್ಣವಾದ ಪ್ರಸ್ತುತ ದಿನಮಾನಕ್ಕೆ ಹೋಲುವ ಕವನವೆಂದರೆ
“ಮೊಬೈಲ್ ಗೋಳು ಜೀವನ ಹಾಳು” ಎಂಬ ಕವನದಲ್ಲಿ ಕೆಲವು ಸಾಲುಗಳು ಹೀಗಿವೆ.
” ನೋಡಿದ ಕೂಡಲೇ ಇಷ್ಟವಾಗುವ
ನೂರಾರು ಹೊಸ ಹೊಸ ಆಟ
ಅವುಗಳನ್ನು ಇನ್ಸ್ಟಾಲ್ ಮಾಡಿ ಆಡಿದರೆ
ನಾವು ಸೇರುವ ಮೊಬೈಲ್ ನ ಮಠ”….
ಮೊಬೈಲ್ ಗೋಳು ಜೀವನ ಹಾಳು ಎಂಬ ಸಿಸಿತೆಯಲ್ಲಿ ನಾವು ತಿಳಿಯಬಹುದು. ಇಂದು ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಅನ್ನು ಬಹಳಷ್ಟು ರೀತಿಯ
ಅನುಬಂಧ ಇರುವಂತೆ ವರ್ತಿಸುತ್ತಾ ಅತಿಯಾಗಿ ಅಚ್ಚಿಕೊಂಡಿದ್ದಾರೆ. ಮಕ್ಕಳುಗಳು ನೂರಾರು ಹೊಸ ಹೊಸ ಆಟಗಳನ್ನು ಆಡುತ್ತಾರೆ. ಹೊಸ ಹೊಸ ಆಟಗಳನ್ನು ಇನ್ಸ್ಟಾಲ್ ಮಾಡಿ ಮೊಬೈಲ್ ಹಾಳು ಎಂಬುದನ್ನು ಇಂದಿನ ಪ್ರಸ್ತುತ ದಿನಮಾನದಲ್ಲಿ ನಾವು ಕಾಣುತ್ತಿದ್ದೇವೆ. ಮಕ್ಕಳ ಬ್ರೈನ್ ಸೆಲ್ಗಳೆಲ್ಲ ನಶಿಸುತ್ತಿರುವುದನ್ನು ಪ್ರಸ್ತುತ ದಿನಮಾನದಲ್ಲಿ ಉದಾಹರಣೆ ಸಹಿತ ವೈದ್ಯರು ತಿಳಿಸುತ್ತಿದ್ದಾರೆ .
ಹಾಗೆ ಇನ್ನೊಂದು ವಿಶೇಷವಾದ ಕವನವೆಂದರೆ ನಮ್ಮ ಸುತ್ತಮುತ್ತಲ ಪ್ರಕೃತಿಯನ್ನು ಈ ಪ್ರಕೃತಿಯನ್ನು ಆದರಿಸಿ
“ಪ್ರಕೃತಿಯ ನಾದ”. ಎಂಬ ಕವನವನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಸಾಲುಗಳನ್ನು ಗಮನಿಸುವುದಾದರೆ
” ಹಸಿರು ಬಣ್ಣದ ಪ್ರಕೃತಿಯ ದೃಷ್ಟಿ
ಕಣ್ಣಿಗೆ ನೋಡಲು ಬರಮಣಿಯ ದೃಶ್ಯ
ಈ ಸುಂದರಾ ದೃಶ್ಯದ ತಲ್ಲಣ
ನನ್ನ ಮನೆಕೆ ಶಾಂತಿ ನೀಡಿದೆ “….
ಹಸಿರು ಬಣ್ಣದ ಪ್ರಕೃತಿಯ ದೃಷ್ಟಿ ಪ್ರತಿಯೊಬ್ಬರಿಗೂ ಸುಖವಾಗಿರುತ್ತದೆ . ಪ್ರಕೃತಿಯ ಸೃಷ್ಟಿಯನ್ನ ನೋಡುವುದಕ್ಕೆ ಬಹಳ ಸೊಗಸಾಗಿರುತ್ತದೆ. ಈ ಸುಂದರ ದೃಶ್ಯದಲ್ಲಿ ಭಾವನಾತ್ಮಕವಾಗಿ ಮನಸೋಲುತ್ತಾ ಆ ದೃಶ್ಯವನ್ನು ನೋಡುವುದೇ ಒಂದು ಆನಂದ. ಅಲ್ಲಿ ನಾವು ತಲ್ಲಣವಾಗಿ ಬಿಡುತ್ತೇವೆ ಎಂಬುದನ್ನು ಬಹಳ ಸುಂದರವಾಗಿ ತಿಳಿಸಿದ್ದಾರೆ.
“ತಾಯಿಯೇ ನನ್ನ ದೇವರು” ಈ ಕವನದಲ್ಲಿ ತಾಯಿಯ ರೂಪವೂ ದೇವತೆಯ ರೂಪವಾಗಿದೆ.
“ಮನೆಯ ಕಷ್ಟ ಪರಿಹರಿಸಿ
ಗಂಡನ ಸೇವೆ ಮಾಡಿ
ಮಕ್ಕಳನ್ನು ಸಂತೋಷದಿಂದ ಕಾಣುವ ತಾಯಿ
ನನ್ನ ಜೀವನದ ದೇವರು”….
ಈ ಕವನದಲ್ಲಿ ಕೆಲವು ಸಾಲುಗಳನ್ನು ಗಮನಿಸಿದರೆ ಮನೆಯ ಕಷ್ಟಗಳೆಲ್ಲ ಪರಿಹರಿಸುವಂತಹ ಶಕ್ತಿ ಇರುವಂತಹ ತಾಯಿಗೆ. ಆಕೆ ಸ್ವಾರ್ಥತನದಿಂದ ಜೀವನವನ್ನು ಮಾಡದೆ ಗಂಡನ ಸೇವೆಯಲ್ಲಿ ಕಳೆಯುತ್ತಾಳೆ. ತನ್ನ ಮನೆಗಾಗಿ ಸ್ವಾತಿಯಾಗಿ ಜೀವನವನ್ನು ಮಾಡುತ್ತಾಳೆ. ಮಕ್ಕಳ ಸಂತೋಷದಲ್ಲಿ ತನ್ನ ಖುಷಿಯನ್ನ ಕಾಣುವ ತಾಯಿ. ಜೀವನದ ನಿಜವಾದ ದೇವರು ಎಂಬುದನ್ನ ತಿಳಿಸಿದ್ದಾರೆ.
ಹೀಗೆಯೇ ಹಲವಾರು ಕವನಗಳನ್ನು ಗಮನಿಸಬಹುದು “ಉಳುವನು ರೈತನು”, ರೈತರ ಬಗೆಗಿನ ಹಲವು ಮಾಹಿತಿಗಳನ್ನು ತಿಳಿಸುತ್ತಾ, “ಯುಗಾದಿ” ಎಂಬ ಕವನದಲ್ಲಿ ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ತಾವು ತಿಳಿದ ವಿಚಾರಗಳನ್ನು ತಿಳಿಸುತ್ತಾರೆ. “ಟಿಕ್ ಟಿಕ್ ಗಡಿಯಾರ” ಎಂಬ ಗಡಿಯಾರದ ಬಗ್ಗೆ, ಸಮಯದ ಬಗ್ಗೆ ತಿಳಿಸಿದ್ದಾರೆ , “ಯಾರಿಗೆ ಈ ಸ್ವಾತಂತ್ರ್ಯ” ಎಂಬ ಕವನದಲ್ಲಿ ಸ್ವತಂತ್ರದ ಅರಿವನ್ನು ತಿಳಿಸಿದ್ದಾರೆ , ನಂತರದಲ್ಲಿ ನಾವು ನೋಡುವ ಕವನವೆಂದರೆ “ಹೆಣ್ಣಿಗೆ ಶೋಷಣೆ” ಹೆಣ್ಣಿನ ಬಗ್ಗೆ ಬಹಳ ಕಾಳಜಿಯನ್ನು ವಹಿಸಿಕೊಂಡು ಹೆಣ್ಣಿಗೆ ಶೋಷಣೆ ಆಗುತ್ತಿರುವ ಬಗ್ಗೆ ಬರೆದಿದ್ದಾರೆ , “ಇನ್ನೂ ಸಿಕ್ಕಿಲ್ಲ” ಎಂಬ ಕವನದಲ್ಲಿ ಹಲವಾರು ಅಂಶಗಳನ್ನು ಒಳಗೊಂಡಂತೆ ವಿಚಾರಗಳನ್ನು ತಿಳಿಸಿದ್ದಾರೆ , ” ಮನ ಸೆಳೆಯ ನೋಟ” ಈ ಕವನದಲ್ಲಿ ನೋಡುವ ನೋಟದ ಬಗ್ಗೆ ಬರೆದಿದ್ದಾರೆ. ” ನಮ್ಮೂರು ಚಂದ” ಎಂಬುದರಲ್ಲಿ ತನ್ನ ಊರಿನ ಬಣ್ಣನೆಯನ್ನು ಮಾಡಿದ್ದಾರೆ., “ಮಾತೆ” ಎಂಬ ಕವನದಲ್ಲಿ ಮಾತೆಯ ಬಗ್ಗೆ ಬಹಳ ಸುಂದರವಾಗಿ ಕವನವನ್ನು ರಚನೆ ಮಾಡಿದ್ದಾರೆ . ಹೀಗೆ ಹಲವಾರು ಕವನಗಳಲ್ಲಿ ಭಾವನಾತ್ಮಕವಾದ ವಿಚಾರಗಳನ್ನು ಕಾಣಬಹುದಾದಗಿದೆ.
ಮನುಜನಿಗೆ ಜೀವಿಸಲು ನೀರು ಬೇಕು ಅಂತಹ ಒಂದು ವಿಚಾರವನ್ನು ಒಳಗೊಂಡಂತೆ
” ಮಳೆರಾಯ” ಬರೆದಿದ್ದು ಅವುಗಳಲ್ಲಿ ಕೆಲವು ಸಾಲುಗಳನ್ನು ಗಮನಿಸಬಹುದು
” ಕೆರೆ ತೊರೆಗಳು ತುಂಬಿಲ್ಲ
ಭೂಮಿಗೆ ಬೆಳೆಯು ಬೆಳೆದಿಲ್ಲ
ಕುಡಿಯಲು ನೀರು ಕಾಣುತ್ತಿಲ್ಲ
ನೀ ಬೇಗನೆ ಬಾರೋ ಮಳೆರಾಯ”….
ಕೆರೆ ತೊರೆಗಳು ತುಂಬಿಲ್ಲ ಎಂದು ತಿಳಿಸುತ್ತಾ. ಅಂತಹ ಮಳೆಯನ್ನು ಕಾಯುತ್ತಿದ್ದಂತಹ ರೈತರು ಭೂಮಿಗೆ ಬೆಳೆಯನ್ನು ಸಿಗದೇ ಒದ್ದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕುಡಿಯಲು ಸಹ ನೀರಿಲ್ಲ ಎಂಬುದನ್ನು ತಿಳಿಸುವುದರ ಜೊತೆಗೆ ಮಳೆರಾಯನನ್ನು ಅಪ್ಪಾನ ಮಾಡುತ್ತಿದ್ದಾರೆ. “ಕರಗಿದ ಗಾಂಧಿ ” ಎಂಬ ಕವನದಲ್ಲಿ ಗಾಂಧೀಜಿಯವರ ಬಗ್ಗೆ ಬರೆದಿದ್ದು
” ಹಣಕ್ಕಿಂತ ಗುಣ ಮೇಲು
ಬಟ್ಟೆಗಿಂತ ಮನಸ್ಸು ಮೇಲು
ಎಂದು ಹೇಳಿದವರು ಗಾಂಧಿ “…..
ಹಣಕ್ಕಿಂತಲೂ ಗುಣ ಮೇಲು ಎಂಬ ಕೆಲವು ಸಾಲುಗಳನ್ನ ಬರೆದಿರುವುದು ಮನಮುಟ್ಟುತ್ತದೆ. ನಾವು ಹಾಕುವ ಬಟ್ಟೆಯ ಬೆಲೆ ಕಡಿಮೆ ಇದ್ದರೂ ಪರವಾಗಿಲ್ಲ ಮನಸ್ಸು ಚೀಮಂತಿಕೆ ಆಗಿರಬೇಕು ಎಂಬುದನ್ನು ತಿಳಿದಿದ್ದಾರೆ. ಇದು ಗಾಂಧೀಜಿಯವರ ನುಡಿಯಾಗಿದೆ ಎಂಬುದನ್ನು ಸಹ ಸರಳವಾದ ಪದಗಳನ್ನು ಬಳಸಿ ತಿಳಿಸಿದ್ದಾರೆ.
ನಮ್ಮ ಮುಸ್ಲಿಮರ ಅದ್ದೂರಿಯಾಗಿದ ಹಬ್ಬವೆಂದರೆ ರಂಜಾನ್ ಹಬ್ಬ ಇಂತಹ ರಂಜಾನ್ ಮಾಸವನ್ನು ಒಳಗೊಂಡಂತೆ ಒಂದು ಕವನವನ್ನು ರಚಿಸಿದ್ದು ಬಹಳಷ್ಟು ಅರ್ಥಪೂರ್ಣವಾಗಿದೆ.
“ರಂಜಾನ್ ಮಾಸ” ಎಂಬ ಕವನದಲ್ಲಿ ಬಹಳಷ್ಟು ಅರ್ಥವಲ್ಲ ಈ ರಂಜಾನ್ ಮಾಸದ ವಿಚಾರಗಳನ್ನು ತಿಳಿಸಿದ್ದಾರೆ.
” ಪವಿತ್ರ ಕುರಾನ್ ಅನ್ನು ಪಠಿಸಿ
ಸುನ್ನತ್ ಅನ್ನು ಹಿಡಿಯಲು ಪ್ರಯತ್ನಿಸಿ
ಪ್ರವಾದಿಯ ಮಾರ್ಗ ಅಭ್ಯಾಸ ಮಾಡಿ
ಮೋಹ,ಕಾಮದಿಂದ ದೂರ ಉಳಿದುಕೊಳ್ಳಿ….
ಈ ಮೇಲ್ಕಂಡಂತಹ ಕೆಲವು ಸಾಲುಗಳನ್ನು ಗಮನಿಸಿದರೆ ಮುಸ್ಲಿಂ ಧರ್ಮದ ಹಬ್ಬದಲ್ಲಿ ಬಹಳಷ್ಟು ಕಟ್ಟುನಿಟ್ಟುಗಳಿವೆ ಎಂಬುದನ್ನು ಆರಿಸಿಕೊಳ್ಳಬಹುದು. ಪವಿತ್ರವಾದ ಕುರಾನ್ ಅನ್ನು ಪಟಿಸುವವರು ಈ ರಂಜಾನ್ ಮಾಸದಲ್ಲಿ. ಸುನ್ನತ್ ಅನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಪ್ರವಾದಿಯ ಮಾರ್ಗ ಅಭ್ಯಾಸ ಮಾಡಿ ಒಳ್ಳೆಯ ರೀತಿ ಜೀವನ ಮಾಡಲು ಪ್ರಯತ್ನಿಸುತ್ತಾರೆ. ಮೋಹ, ಕಾಮದಿಂದ ದೂರ ಉಳಿದುಕೊಳ್ಳುತ್ತಾರೆ. ಬಹಳಷ್ಟು ಕಟ್ಟು ನಿಟ್ಟಿನ ಪವಿತ್ರವಾದಂತಹ ಹಬ್ಬವಾಗಿದ್ದು. ಅದನ್ನು ಬಹಳ ನಿಷ್ಠೆಯಿಂದ ಆಚರಿಸುವರು ನಮ್ಮ ಮುಸ್ಲಿಂ ಬಾಂಧವರು. ಬಹಳ ಅಚ್ಚುಕಟ್ಟಾಗಿ ನೀಡಿದ್ದಾರೆ. ನಂತರ ಬಹಳ ವಿಶೇಷವೆಂದರೆ ಕೆಲವು ವಿಚಾರಗಳನ್ನು ಹೇಳುವುದಕ್ಕೂ ಇಂಚರೆಯುವ ಜನರಿರುವಾಗ
“ರೆಡ್ ಲೈಟ್ ಸಂತೆ” ಎಂಬ ಕವನವನ್ನು ರಚಿಸಿದ್ದು. ಅಲ್ಲಿನ ಮಹಿಳೆಯರ ಮನಸ್ಥಿತಿಯನ್ನು ತಿಳಿಸಿದ್ದಾರೆ.
“ಮನದಲ್ಲಿರುವ ನೋವುಗಳು
ಸಾರಿ ಸಾರಿ ಹೇಳಿತು
ಆದರೂ ಮಾತು ಕೇಳದೆ
ಪರಿಸ್ಥಿತಿಯ ಕೈ ಗೊಂಬೆಯಾದೆ “…..
ಮನದಲ್ಲಿರುವ ನೋವುಗಳು ಹಲವಿದೆ ಅಂತಹ ಹೆಣ್ಣು ಮಕ್ಕಳಿಗೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿಯ ಕೈಗೊಂಬೆಗಳಾಗಿ ಅಂತಹ ಪರಿಸ್ಥಿತಿಗೆ ಹೋಗಿ ಅಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಕವನದಲ್ಲಿ ತಿಳಿಸಿದ್ದಾರೆ. ಮತ್ತೊಂದು ಕೊರೋನಾ ಎಂಬ ಕವನವನ್ನಾಗಿಸಬಹುದು.
“ಕೋರೋನಾ” ಎಂಬ ಕವನದಲ್ಲಿ ಆ ಪರಿಸ್ಥಿತಿಯಲ್ಲಿ ಜನರು ಆಡಿದ ನಾಟಕಗಳ ಬಗ್ಗೆ ತಿಳಿಸಿದ್ದಾರೆ.
“ದುಡ್ಡು ಕೊಟ್ಟರೆ ಮಾತ್ರ
ಇಲ್ಲಿ ಪ್ಲಾಸ್ಟಿಕ್ ನಲ್ಲಿ
ಸುತ್ತಿ ಹೆಣ ಸಂಸ್ಕಾರ ಮಾಡುವರಂತೆ
ಇಲ್ಲದಿದ್ದರೆ ಬೀದಿಯಲ್ಲಿ
ಬಿಟ್ಟು ನಡು ನೀರಿನಲ್ಲಿ
ಕೈ ಕೊಟ್ಟು ಹೋಗುವರಂತೆ”…..
ದುಡ್ಡಿದ್ದವನೇ ದೊಡ್ಡಪ್ಪ ಎಂಬ ಗಾದೆಯ ರೀತಿಯಲ್ಲಿ ಕರೋನದ ಸಮಯದಲ್ಲಿ ಜನರು ವರ್ತಿಸಿದ್ದನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಕವನಗಳನ್ನು ತಿಳಿಸುವುದಾದರೆ ಬಹಳ ಅರ್ಥಪೂರ್ಣವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿದೆ.
ಹಗುರಾಗುವೆ, ವಿಳಾಸವಿಲ್ಲದ ಗೆಳತಿ, ಸ್ಪರ್ಶ ಸುಖ, ಏಕಾಂಗಿ, ನನ್ನ ಸಾವು, ಹುಡುಕಾಟ, ಮಂದಿರ, ಯಾರಿಗೆ ಗೊತ್ತಿತ್ತು, ಕುರ್ಬಾನಿಯಾಗಿದೆ, ಕಡಲಿನ ಸ್ನೇಹ, ಮಳೆಯ ಹನಿ, ಕೆಚ್ಚೆದೆಯ ಕಲಿ, ದಾರಿ ತಪ್ಪಿದ ಮನ, ಖಾಲಿ ಜೀವನ, ಎಂಬ ಕವನದ ಶೀರ್ಷಿಕೆಗಳನ್ನು ಒಳಗೊಂಡಂತಹ ಅರ್ಥಪೂರ್ಣ ಕವನಗಳು ಇವೆ.
“ಜಾನಪದ ಸಾರಥಿಗೆ ಶರಣು” ಈ ಕವನ ದಲ್ಲಿ .
” ಜೀವನಸಮುದ್ರ ಈಜಿದ ಆಳಬಲ್ಲವರಾರು
ಅನುಭವಿಸಿದ ನೋವು ನೂರಾರು
ಅಲಂಕರಿಸಿದ ಹುದ್ದೆಗಳ ಭಾರದ ನಡುವೆಯು
ಜಾನಪದ ಬೇರುಗಳಿಗೆ ಜೀವವನೆ ಅರ್ಪಿಸಿದ ಮನವೇ
ಇಮ್ಮಡಿಗಳಿಗೆ ಸಾವಿರದ ಶರಣು ಸದ್ಗುರುವೆ”…
ಜೀವನ ಸಮುದ್ರದಲ್ಲಿ ಹೀಗಿದ ಆಳ ಬಲ್ಲವರಾರು ಅರಿತುಕೊಳ್ಳಬೇಕು. ತಿಳಿದು ಬಾಳಬೇಕು. ಅಂತಹ ಹುದ್ದೆಗಳ ಭಾರವನ್ನು ತಡೆಯಬೇಕು.ಹಾಗೆಯೇ ಜನಪದದ ಬೇರುಗಳನ್ನು ಅವುಗಳಿಗೆ ಬಹಳಷ್ಟು ರೀತಿಯಲ್ಲಿ ಧ್ಯಾನವನ್ನು ನೀಡುತ್ತಾ, ಶರಣು ಶರಣು ಎನ್ನಬೇಕು ಎಂಬುದನ್ನು ತಿಳಿಸಿದ್ದಾರೆ.
ಹಾಗೆಯೇ ಕಟ್ಟ ಕಡಿಯತದಂತಹ ಕವನವಾಗಿರುವ
“ನಕ್ಕು ಬಿಡು” ಎಂಬ ಕವನವನ್ನು ಗಮನಿಸಿದರೆ ಹಲವಾರು ರೀತಿಯ ವಿಚಾರಗಳನ್ನ ತಿಳಿಯಬಹುದು. ಈ ಕವನದ ಕೆಲವು ಸಾಲುಗಳು ಹೀಗಿವೆ.
” ಉಕ್ಕಿ ಬದುಕಿಹ ದುಃಖ,
ಸೊಕ್ಕಿ ಮೆರೆಯುವ ಮುನ್ನ
ನಗುತಾ ಹೇಳಿಬಿಡು ಒಮ್ಮೆ
ಬದುಕಿನ ನೋವುಗಳನ್ನೆಲ್ಲ ನೀನು”…..
ನಮ್ಮ ಜೀವನದಲ್ಲಿ ಉಕ್ಕಿ ಬದುಕಿಹ ದುಃಖವು ಸೊಕ್ಕು ತೋರದಲೇ ಮರೆಯುವ ಮುನ್ನ ನಗುನಗುತ್ತಾ ಹೇಳಿಬಿಡಬೇಕಂತೆ ಒಮ್ಮೆ,ನೋವುಗಳನ್ನೆಲ್ಲ ಹೇಳು ನೀನು ಎಂದು ಕೇಳುತ್ತಿದ್ದಾರೆ. ಇದು ಅವರ ಈ ಕೃತಿಯ ಕೊನೆಯ ಕವನವಾಗಿದ್ದು.
ಬೆನ್ನುಡಿಯನ್ನು ಹಿರಿಯ ಸಾಹಿತಿಗಳಾದ ಶ್ರೀ ಸತೀಶ್ ಜವರೇಗೌಡರವರು ಮೈಸೂರ್. ರವರು ಬರೆದಿದ್ದಾರೆ.
ಕವಿಯು ಬಹಳಷ್ಟು ವಿಚಾರಗಳೆಲ್ಲಾ ಅರಿತು ತನ್ನದೇ ಆದಂತಹ ಕವನದ ರೂಪಶೈಲಿಯನ್ನ ತಿಳಿಸಿದ್ದು. ಸಂತಸದ ವಿಷಯವಾಗಿದೆ. ಸಾಹಿತ್ಯ ಲೋಕಕ್ಕೆ ಉದಯೋನ್ಮುಖ ಕವಿಯಾಗಿರುವ ಇವರು ತನ್ನದೇ ಆದಂತಹ ನಿಲುವನ್ನು ಒಳಗೊಂಡಿದ್ದಾರೆ. ಹೀಗೆಯೇ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆ ಮಾಡಲೆಂದು ಆಶಿಸುತ್ತೇನೆ ಜೈ ಹಿಂದ್ ಜೈ ಭಾರತ್ ಮಾತೆ.
ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.