2,816 total views
ಯಾದಗಿರಿ ಶಹಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದ ಆಕ್ರಮವಾಗಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಡಾ ಯಲ್ಲಪ್ಪ ಅವರಿಗೆ ಡಿ ಎಚ್ ಓ ಪ್ರಭುಲಿಂಗ ಮಾನಕರ ಅವರ ಕುಮ್ಮಕ್ಕಿನಿಂದ ಶಹಾಪೂರ ತಾಲೂಕ ಆಸ್ಪತ್ರೆ ಆಡಳಿತ ವೈದಾಧಿಕಾರಿಯಾಗಿ ಕಾನೂನು ಬಾಹಿರವಾಗಿ ನೇಮಕ ಮಾಡಲಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸಿದ್ದು ಪಟ್ಟೆದಾರ್ ಆರೋಪಿಸಿದ್ದಾರೆ. ಪತ್ರಿಕ ಹೇಳಿಕೆೆ ನೀಡಿದ ಅವರು , ಈಗಾಗಲೇ 2023ರ ಆಗಸ್ಟ್ 24ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಕರು ಹಿರಿತನದ ಆಧಾರದ ಮೇಲೆ ಸಾರ್ವಜನಿಕ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಅಥವಾ ತಜ್ಞರನ್ನು ಸೇವೆಯಲ್ಲಿ ಹಿರಿಯರಾದವರಿಗೆ ಮಾತ್ರ ಆಡಳಿತ ಕಾರ್ಯಭಾರ ನಿರ್ವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಮ್ಮ ಹಂತದಲ್ಲಿ ಆದೇಶಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಸೂಚನೆ ವಾಲಿಸದಿದ್ದಲ್ಲಿ ಯಾವುದೇ ದೂರು ಅಥವಾ ಮನವಿ ಬಂದಲ್ಲಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ನೇರ ಜವಾಬ್ದಾರನ್ನಾಗಿ ಮಾಡಲಾಗುವುದು ಎಂದು ಖಡಕ್ ಆದೇಶವನ್ನು ರವಾನಿಸಿದ್ದರು.ಆದರೆ ಡಿಎಚ್ಒ ಡಾ ಪ್ರಭುಲಿಂಗ ಮಾನಕರ ಅವರು ಸೇವೆಯಲ್ಲಿ ಕಿರಿಯರಾದ ಡಾ ಯಲ್ಲಪ್ಪ ಅವರನ್ನು ನೇಮಕ ಮಾಡಿದ್ದು ಆಯುಕ್ತಕರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.ಜೊತೆಗೆ ಡಾ ಯಲ್ಲಪ್ಪ ಅವರು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಧಿಕಾರಿಯಾಗಿ ನೇಮಕವಾಗಿದ್ದು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.ಎರಡು ಸ್ಥಳಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದಾಗ ರೋಗಿಗಳ ಆರೋಗ್ಯದಲ್ಲಿ ಏರುಪೇರು ಆದರೆ ಯಾವ ರೋಗಿಗೆ ಸೂಕ್ತ ಸಮಯದಲ್ಲಿ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ .ಜೊತೆಗೆ ಆಡಳಿತ ವೈದ್ಯಧಿಕಾರಿಯಾಗಿ ಆಸ್ಪತ್ರೆಯಲ್ಲಿ ಸಮಸ್ಯೆಗಳು ಉದ್ದವಿಸಿದರೆ ಶೀಘ್ರದಲ್ಲಿ ಪರಿಹಾರ ಹೇಗೆ ನೀಡುತ್ತಾರೆ ಎನ್ನುವುದು ಕೂಡ ಜನಸಾಮಾನ್ಯರ ವಾದವಾಗಿದೆ.ಎಲ್ಲಾ ಸಮಸ್ಯೆಗಳ ನಡುವೆ ಯಲ್ಲಪ್ಪ ಅವರ ವಿರುದ್ಧದ ದೂರುಗಳು ಬಂದರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ ಪ್ರಭುಲಿಂಗ ಮಾನಕರ್ ಅವರು ಕ್ರಮ ಕೈಗೊಳ್ಳದಿರುವುದ ಹಲವು ಅನುಮಾನಗಳು ಹುಟ್ಟು ಹಾಕಿದೆ.ಅದರಿಂದ ಸಂಬಂಧಪಟ್ಟ ಅಧಿಕಾರಿಗಳು ಡಾ ಯಲ್ಲಪ್ಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎದುರು ನಮ್ಮ ಕರ್ನಾಟಕ ಸೇನೆ ಶಹಾಪುರ ತಾಲೂಕು ಸಮಿತಿಯಿಂದ ಪ್ರತಿಭಟ ನಡೆಸಲಾಗುವುದೆಂದು ಎಚ್ಚರಿಸಿದರು.
ವರದಿ : ಶರಣಪ್ಪ ಯಾದಗಿರಿ