2,734 total views
ಅರಸೀಕೆರೆ ನ್ಯೂಸ್
ಅರಸೀಕೆರೆ ತಾಲ್ಲೋಕ್, ಜಾವಗಲ್ ಹೋಬಳಿ, ಮಾರಗೊಂಡನಹಳ್ಳಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಂಕ್ರೀಟ್ ರಸ್ತೆ ಮದ್ಯೆ ಹಾದು ಹೋಗಿದ್ದು, ಇದು ವರ್ಷದ ಹಿಂದೆ ಒಡೆದು ಹೋಗಿ, ನಂತರ ರಸ್ತೆ ಅಗೆದು ಪೈಪ್ ದುರಸ್ಥಿ ಮಾಡಿ ಅಗೆದ ಗುಂಡಿಯನ್ನು ಮುಚ್ಚದೆ ವರ್ಷ ಕಳೆದರೂ, ಸಾರ್ವಜನಿಕರು ಹಲವಾರು ಬಾರಿ ಗುಂಡಿ ಮುಚ್ಚುವುದಕ್ಕೆ PDO ಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ. ಏಕೆಂದರೆ, ಮತ್ತೆ ಪೈಪ್ ಒಡೆದು ಹೋದರೆ ಈ ಪೈಪ್ ನಿಂದ ಬರುವಂತಹ ಕಲುಷಿತ ನೀರನ್ನು ಕುಡಿದು ಸಾವು ನೋವುಗಳಾದಲ್ಲಿ ಈ PDO ನೇ ನೇರ ಹೊಣೆಗಾರ.ಹಾಗೂ ಇವರ ಊರಿಗೆ ಹತ್ತಿರವಿರುವ ಗ್ರಾಮ ಪಂಚಾಯಿತಿಯಲ್ಲಿ PDO ಆಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸದೇ,ಸಾರ್ವಜನಿಕರಿಗೆ ಕಿರಿಕಿರಿ & ಕಿರುಕುಳಕ್ಕೆ ಕಾರಣರಾಗಿರುವ, ಕರ್ತವ್ಯ ಲೋಪ ಎಸಗಿರುವ, ಸಾರ್ವಜನಿಕರ ಜೀವ & ಜೀವನದಲ್ಲಿ ಆಟವಾಡುತ್ತಿರುವ ಅರಕೆರೆ ಗ್ರಾಮ ಪಂಚಾಯಿತಿಯ ಇಂತಹ PDO ಅಧಿಕಾರಿಯನ್ನು ತಕ್ಷಣ ಸೇವೆಯಿಂದ
ವಜಾಗೊಳಿಸಿ, ದಕ್ಷ ಅಧಿಕಾರಿಯನ್ನು ನಿಯೋಜನೆ ಮಾಡಬೇಕೆಂದು,ಹಾಗೂ ಮಾನ್ಯ, EO ರವರೇ, ಮಾನ್ಯ, CEO ರವರೇ, ಹಾಗೂ ಮಾನ್ಯ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಮೊದಲು ಸೇವೆಯಿಂದ ವಜಾ ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಮಾಡಾಳ್ ರವಿ.