2,800 total views
ಯಡ್ರಾಮಿ ತಾಲೂಕಿನ ಅತಿ ಚಿಕ್ಕ ಹಳ್ಳಿಯ ಕಾಚೂರ ಗ್ರಾಮದ ವಿದ್ಯಾರ್ಥಿಯಾದ ಕುಮಾರ್ :- ವಿರೇಶ್ ತಂದೆ ಮಲ್ಲಪ್ಪ ಪೂಜಾರಿ ಕಾಚೂರ್ ಇವರು.ಕಲ್ಪವೃಕ್ಷ ಪದವಿ ಪೂರ್ವ ಕಾಲೇಜು ಮೋರಟಗಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ತಮ್ಮ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ 88%16 ಪಡೆದು ಗ್ರಾಮದ ಹಾಗೂ ತಂದೆ ತಾಯಿಗಳ ಹಾಗೂ ಗುರುಗಳ ಹಾಗೂ ಕಾಲೇಜಿನ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿ ವೀರೇಶ್ ಅವರನ್ನು ಸಮಸ್ತ ಗ್ರಾಮದ ಹಿರಿಯರು ಹಾಗೂ ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಮಹಿಬೂಬ್ ಪಟೇಲ್ ಪೊಲೀಸ್ ಪಾಟೀಲ್ ಅವರು ವಿದ್ಯಾರ್ಥಿಯ ಕುರಿತು ಮಾತನಾಡಿದರು. ನಾನು ಕಂಡಂತಹ ಅತ್ಯುತ್ತಮ ವಿದ್ಯಾರ್ಥಿ ಶಿಸ್ತು ಹಾಗೂ ಗುರು ಹಿರಿಯರಿಗೆ ಗೌರವ ಕೊಡುವ ಉತ್ತಮ ವಿದ್ಯಾರ್ಥಿಯಾಗಿದ್ದು ಇವರ ಸಾಧನೆಯನ್ನು ಕಂಡು ಬಹಳ ಸಂತೋಷವಾಗಿದೆ ಮುಂದೆ ಬರುವಂತಹ ದಿನಗಳಲ್ಲಿ ಇವರು ಶಿಕ್ಷಣದಲ್ಲಿ ಹೀಗೆ ಒಳ್ಳೆಯ ಸ್ಥಾನಮಾನ ದೊರೆಯಲಿ ಎಂದು ನಾನು ಹಾರೈಸುತ್ತೇನೆ ಎಂದು ಮಾತನಾಡಿದರು.ಹಾಗೂ ಗ್ರಾಮದ TSS ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಶಾಲು ಹೊದಿಸಿ ಸನ್ಮಾನಿಸಿದರು
ವರದಿ ಜಟ್ಟಪ್ಪ ಎಸ್ ಪೂಜಾರಿ