2,749 total views
ಮಹಾಲಿಂಗಪುರ : ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ಗಟ್ಟಿ ನಿಲುವಿನೊಂದಿಗೆ ಆರಂಭವಾದ ತಾಲೂಕು ಹೋರಾಟ ಭಾನುವಾರ ಬರೋಬ್ಬರಿ ೨ ವರ್ಷ (೭೩೨ ದಿನ) ಪೂರೈಸಿ, ೩ ನೇ ವಸಂತಕ್ಕೆ ಕಾಲಿಟ್ಟಿತು.
ಕಳೆದೆರಡು ವರ್ಷಗಳಿಂದ ನಿರಂತರ ಹೋರಾಟದಲ್ಲಿ ಸಾಕಷ್ಟು ಪ್ರಯತ್ನಗಳ ಮಧ್ಯೆಯೂ ಹಲವಾರು ಭರವಸೆಗಳೊಂದಿಗೆ ಮಹಾಲಿಂಗಪುರ ಮತ್ತು ಸುತ್ತಲಿನ ೧೪ ಹಳ್ಳಿಗಳ ನಿಯೋಜಿತ ತಾಲೂಕು ಬೇಡಿಕೆಯ ೧.೫೦ ಲಕ್ಷ ಜನರ ಕನಸು ನನಸಾಗಿಲ್ಲ ಅದು ೩ನೇ ವಸಂತಕ್ಕೆ ಮುಂದೂಡಲ್ಪಟ್ಟಿದೆ. ೨ ವರ್ಷ ಪೂರೈಸಿದ ಭಾನುವಾರ ಬೆಳಿಗ್ಗೆ ಹೋರಾಟ ವೇದಿಕೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ರಫೀಕ್ ಮಾಲದಾರ, ಸಿದ್ದು ಶಿರೋಳ, ಮಹಾಲಿಂಗಪ್ಪ ಅವರಾದಿ, ದುಂಡಪ್ಪ ಇಟ್ನಾಳ, ಸತ್ಯಪ್ಪ ಬ್ಯಾಳಿ, ಸನಿಲ ಸುತಗುಂಡ, ಭೀಮಶೀ ನಾಯಕ, ಎಸ್.ಎಚ್.ನಾವಿ, ಬಸಪ್ಪ ದೇಸಾಯಿ ಇತರರಿದ್ದರು.