2,795 total views
ಜೇವರ್ಗಿ. ಜೇವರ್ಗಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿರುವ ಹಲವು ವರ್ಷಗಳಿಂದ ಗ್ರಾಮೀಣ ಬಡ ಮಕ್ಕಳ ಅನಾಥ ಮತ್ತು ದೀನ ದಲಿತರ ವಿದ್ಯಾರ್ಥಿಗಳ ಆಶಾಕಿರಣವಾಗಿ ಶೈಕ್ಷಣಿಕ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಪೂಜ್ಯ ಶ್ರೀ ಗಂಗಾಧರೇಶ್ವರ ಗ್ರಾಮೀಣಾಭಿವೃದ್ಧಿ ವಿದ್ಯಾಭ್ಯಾಸ ಸಂಘ ಕರಕಿಹಳ್ಳಿ ಸಂಯುಕ್ತಾಶ್ರಯದ ಅಡಿಯಲ್ಲಿ ಬರುವ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಸಕ್ತ 2023 24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಕಾಲೇಜಿನ 40 ವಿದ್ಯಾರ್ಥಿಗಳ ಪೈಕಿ ರೇಖಾ ತಂದೆ ಸಂತೋಷ್ ಶೇ. 92 ಪ್ರತಿಶತ ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಜೇವರ್ಗಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಪತಾಕೆಯನ್ನು ಮೆಲುಸ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದಂತೆ 13 ಜನ ಪ್ರಥಮ 06 ಜನ ವಿದ್ಯಾರ್ಥಿಗಳು ದ್ವಿತೀಯ ಹಾಗೂ 02 ಜನ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿನ ಕೀರ್ತಿ ಪಟಾಕಿಯನ್ನು ಮೇಲೆತ್ತಿದ್ದಾರೆ ಈ ಫಲಿತಾಂಶದ ಕುರಿತಾಗಿ ಕಾಲೇಜಿನ ಪ್ರಾಚಾರ್ಯರಾದ ಸಿದ್ದಲಿಂಗ ಎಸ್ ವಸ್ತಾರಿ ಶ್ರೀ ಮಹಾಲಕ್ಷ್ಮಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಧರ್ಮಣ್ಣ ಕೆ ಬಡಿಗೇರ್, ಸಂಸ್ಥೆಯ ಅಧ್ಯಕ್ಷರಾದ ಮಂಜುಳಾ ಡಿ ಬಡಿಗೇರ್, ಕಾರ್ಯದರ್ಶಿಗಳಾದ ಶಿವಶರಣಪ್ಪ ಹಳ್ಳಿಮನಿ, ಸದಸ್ಯರಾದ ಈಶ್ವರ್ ಕೆ ಹಿಪ್ಪರಗಿ ಇನ್ನುಳಿದಂತೆ ಕಾಲೇಜಿನ ಉಪನ್ಯಾಸಕರ ಬಳಗ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಕ್ಕಾಗಿ ಹರ್ಷವನ್ನ ವ್ಯಕ್ತಪಡಿಸಿದ್ದಾರೆ.