2,971 total views
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಭೀಮಶಂಕರ್ ಗೋಗಿ ಅವರು ಪ್ರೌಢಶಾಲೆಯ ವ್ಯಾಸಂಗದ ದಿನಗಳಲ್ಲಿ ಅತಿ ಕೀರೀಯ ವಯಸ್ಸಿನಲ್ಲಿ ಭೀಮ ಶಂಕರ್ ಗೋಗಿ ಅವರು ಜೇವರ್ಗಿ ತಾಲೂಕಿನ ಕರಾಟೆ ಶಿಕ್ಷಕರಾದ ಜಟ್ಟಪ್ಪ ಪೂಜಾರಿ ಬೀಳವಾರ ಅವರಲ್ಲಿ ಕರಾಟೆ ತರಬೇತಿಯನ್ನು ಪಡೆದುಕೊಂಡು ಬ್ಲಾಕ್ ಬೆಲ್ಟ್ ಪದವಿಯನ್ನು ಪಡೆದುಕೊಂಡಿದ್ದಾರೆ.ಅಲ್ಲದೆ ಇನ್ನು ಹೆಚ್ಚಿನ ತರಬೇತಿಯನ್ನು ಅಂತರಾಷ್ಟ್ರೀಯ ಖ್ಯಾತ ಕರಾಟೆ ಕ್ರೀಡಾಪಟು ಹೇವೇನ್ ಫೈಟರ್ ಸ್ಪೋರ್ಟ್ಸ್ ಅಸೋಸಿಯೇಷನ್ ಡೈರೆಕ್ಟರ್ ಆಗಿರುವಂತಹ ಮಾಸ್ಟರ್ ಮನೋಹರ್ ಕುಮಾರ್ ಬೀರನೂರ್ ಅವರಿಂದ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ ಪದವಿಯನ್ನು ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ಕರಾಟೆ ಕ್ರೀಡಾಕೂಟದಲ್ಲಿ ಮತ್ತು ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಲೀಲಾ ಜಾಲವಾಗಿ ಹಲವಾರು ಪ್ರಶಸ್ತಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ಇಂಡೋನೇಷಿಯಾದ ಜಕರ್ತ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಂದಿದ್ದಾರೆ ಅದೇ ರೀತಿಯಾಗಿ ಮುಂದೆ ಬರುವಂತಹ ದಿನಗಳಲ್ಲಿ ಭೀಮ ಶಂಕರ್ ಅವರು ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಾಂಪಿಯನ್ ಆಗಬೇಕೆಂಬ ಕನಸು ಕಟ್ಟಿಕೊಂಡು ಕೂತಿದ್ದಾರೆ. ಇದಕ್ಕೆ ತಾಲೂಕಿನ ಶಾಸಕರ ಮತ್ತು ಕ್ರೀಡಾ ಸಚಿವರ ಬೆಂಬಲ ತುಂಬಾ ಅವಶ್ಯಕತೆ ಇದೆ ಇಂತಹ ಗ್ರಾಮೀಣ ಯುವ ಪ್ರತಿಭೆಗಳಿಗೆ ಕ್ರೀಡಾ ಇಲಾಖೆ ವತಿಯಿಂದ ನೆರವು ನೀಡಬೇಕು ಮತ್ತು ಅಂತರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ತುಂಬಾ ಗ್ರಾಮೀಣ ಯುವ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬೆಳಕಿಗೆ ಬರಲು ಅನುಕೂಲವಾಗುತ್ತದೆ. ಎಂದು ಭೀಮಶಂಕರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹಾಗೂ ಶಹಾಪುರ ತಾಲೂಕಿನಲ್ಲಿ ಹೆವೇನ ಫೈಟರ್ ಯೂತ್ ಸ್ಪೋರ್ಟ್ಸ್ ಅಸೋಸಿಯೇಷನ್ ಕರಾಟೆ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ ಅದೇ ರೀತಿಯಾಗಿ ತಮ್ಮ ಉತ್ತಮ ಬದುಕಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಫೋಟೋ ಶಾಪ ಕೂಡ ಆರಂಭಿಸಿದ್ದಾರೆ ಅದೇ ರೀತಿಯಾಗಿ ವಿಶ್ವಜೋತಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಕೂಡ ಪಡೆಯುತ್ತಿದ್ದಾರೆ ಅಷ್ಟೇ ಅಲ್ಲದೆ ಯೋಗ ತರಬೇತಿಯಲ್ಲಿ ಡಿಪ್ಲೋಮೋ ಪದವಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಶಹಾಪುರ ತಾಲೂಕಿನ ಎಲ್ಲ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಸ್ವಯಂ ರಕ್ಷಣಾ ತರಬೇತಿ ಸರಕಾರಿ ಆದೇಶದ ನಿಯಮದ ಪ್ರಕಾರದಂತೆ ತರಬೇತಿ ನೀಡುತ್ತಿದ್ದಾರೆ ಗ್ರಾಮೀಣ ಭಾಗದ ಯುವಕರಿಗೆ ದುಷ್ಟ ಚಟಗಳಿಗೆ ಮಾರುಹೋಗದಂತೆ ತಮ್ಮ ನಿಜ ಜೀವನದಲ್ಲಿ ಒಳ್ಳೆಯ ಹವ್ಯಾಸ ರೂಡಿಸಿಕೊಳ್ಳುವಂತೆ ಹಲವಾರು ಯುವಕ ಯುವತಿಯರಿಗೆ ಸಲಹೆ ನೀಡುತ್ತಿದ್ದಾರೆ ಹಾಗೂ ಅಂಗವಿಕಲರಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ ಎಂದು ಭೀಮಶಂಕರ್ ಅವರ ಗುರುಗಳಾದ ಬಿಳವಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ಮತ್ತು ಶಹಪುರ್ ನಗರದ ವಿಶ್ವಜ್ಯೋತಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕ ವರ್ಗದವರು ಬೆಂಬಲ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಶುಭ ಹಾರೈಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ