3,248 total views
ಕುಮಟಾ ತಾಲೂಕಿನ ಹಿರೇಗುತ್ತಿ ಸರಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಪರೀಕ್ಷೆಯಲ್ಲಿ ಹಾಜರಾದ ಒಟ್ಟು 242 ವಿದ್ಯಾರ್ಥಿಗಳಲ್ಲಿ 242 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.100 ಫಲಿತಾಂಶ ಬಂದಿದೆ.ಕಾಲೇಜಿನ ಮೂರು ಸಂಯೋಜನೆಗಳಲ್ಲಿ ಒಟ್ಟು 55 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಕಲಾ ವಿಭಾಗದಲ್ಲಿ ಕುಮಾರಿ ಚಂದ್ರಕಲಾ ಮಾಣಿ ಗೌಡ ಶೇ, 95.83 ಪ್ರಥಮ, ಕುಮಾರ ದತ್ತಾತ್ರೇಯ ಶಂಕರ ಹಳ್ಳೇರ ಮತ್ತು ಶಿವಾನಿ ಸಂಗಪ್ಪ ಬೇವಿನಮಟ್ಟಿ ತಲಾ 573 ಅಂಕಗಳೊಂದಿಗೆ ಶೇ 95.83 ದ್ವಿತೀಯ ಸ್ಥಾನ ಹಂಚಿಕೊoಡಿದ್ದಾರೆ, ಕುಮಾರಿ ಸುವರ್ಣ ಲೋಕೇಶ್ ಗೌಡ 558 ಅಂಕದೊಂದಿಗೆ (ಶೇ. 93) ತೃತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕುಮಾರಿ ನಿಖಿತಾ ಗೋವಿಂದ ಗೌಡ (ಶೇ. 95.83)ಪ್ರಥಮ, ಪವಿತ್ರ ದೇವು ಗೌಡ ಮತ್ತು ಕುಮಾರಿ ಪ್ರಿಯಾಂಕ ಅಣ್ಣಪ್ಪ ಗೌಡ ತಲಾ 570 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕುಮಾರಿ ಸುಪ್ರಿತಾ ಲೋಕು ಗೌಡ 560 ಅಂಕಗಳೊಂದಿಗೆ (ಶೇ. 93.33)ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಲಿಖಿತಾ ವಿನಾಯಕ ಗೌಡ 551 ಅಂಕಗಳೊಂದಿಗೆ (ಶೇ. 91.83)ಪ್ರಥಮ ಕುಮಾರಿ ಅನನ್ಯ ವಿಷ್ಣು ಮೂಲೇಕೇರಿ 546 ಅಂಕಗಳೊಂದಿಗೆ (ಶೇ. 91) ದ್ವಿತೀಯ, ಕುಮಾರಿ ಸಹನಾ ಹನುಮಂತ ಗುನಗಾ 543 ಮತ್ತು ಕುಮಾರಿ ತನುಜಾ ದಾಮೋದರ ಪಟಗಾರ 543 ಅಂಕಗಳೊಂದಿಗೆ ತೃತೀಯ ಸ್ಥಾನಗಳಿಸಿದ್ದಾರೆ.