2,755 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ತಡೆಯಲು ಗ್ರಾಮಪಂಚಾಯತಿಯ ಆಡಳಿತ ಅಧಿಕಾರಿಗಳು ಮತ್ತು ಅಧ್ಯಕ್ಷರು ಎಲ್ಲ ಅಗತ್ಯಕ್ರಮಗಳನ್ನು ಕೈಗೊಂಡಿದ್ದಾರೆ .1,2,3,4 ವಾರ್ಡಗಳಿಗೆ ಸರ್ಕಾರಿ ಅಸ್ಪತ್ರೆಯ ಮುಂದಿನ 2 ಲಕ್ಷ ಲಿಟರ್ ಎಯರ್ ಟ್ಯಾಂಕ್ ಟಾಕಿಯನ್ನು ತುಂಬುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಿರ್ಜಿ ಹೋಳೆಯಿಂದ ನೀರನ್ನು ತರುವ ಕೆಲಸ ಪೂರ್ಣ ಆಗಿದ್ದು ಜನರಿಗೆ ನೀರಿನ ಸಮಸ್ಯೆ ಆಗದಂತೆ ನೊಡಿಕೊಳ್ಳಲಾಗುವುದು, ಹರಿಜನಕೇರಿಗೂ ಇದೇ ಟಾಕಿಯಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ 5,6,7,8 ನೇ ವಾರ್ಡಿನ ಜನರಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಬಸವರಾಜ ಭೂತಾಳಿ ಹೇಳಿದರು . ಅಗತ್ಯ ಬಿದ್ದರೆ ಟ್ಯಾಕ್ಟರ ಮುಖಾಂತರ ನೀರನ್ನು ಪ್ರತಿವಾರ್ಡಗೆ ಪೂರೈಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ ಎಂದರು . ಅಧ್ಯಕ್ಷರು ಗ್ರಾಮದ ಜನರಲ್ಲಿ ಈ ನೀರನ್ನು ನೇರವಾಗಿ ಕುಡಿಯಬಾರದು .ಈ ನೀರನ್ನು ನಾವು ಪಿಲ್ಟರ ಮಾಡಿ ಪೂರೈಸುತ್ತಿದದ್ದೇವೆ ಆದರೂ ಜನರ ಆರೋಗ್ಯದ ದೃಷ್ಠಿಯಿಂದ ನೀರನ್ನು ಕಾಯಿಸಿ ಸೋಸಿ ಆರಿಸಿ ಕುಡಿಯಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು. ಇದೇ ತಿಂಗಳು ಗ್ರಾಮದ ಶ್ರೀ ಘಟ್ಟಗಿಬಸವೇಶ್ವರ ಜಾತ್ರೆ ಇರುವುದರಿಂದ ಜಾತ್ರೆಯಲ್ಲಿ ಜನರಿಗೆ ಧನಕರುಗಳಿಗೆ ಮತ್ತು ವ್ಯಾಪಾರಸ್ಥರಿಗೆ ನೀರಿನ ಸಮಸ್ಯೆಯಾಗದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಾಲೂಕಾಡಳಿತದಿಂದ ನಮಗೆ ಎಲ್ಲ ರೀತಿಯ ಸಹಕಾರ ಹಾಗೂ ನೆರವು ದೊರೆಯುತ್ತಿದೆ ಎಂದರು. ಹಾಗೂ ಜನರಲ್ಲಿ ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಿಸಬೇಕು ಯಾರೂ ನೀರನ್ನು ಪೋಲು ಮಾಡಬಾರದು. ಇನ್ನು ಮುಂದೆ ಪ್ರತಿವಾರ್ಡಗೆ ಟೈಮ ಟೇಬಲ ಹಾಕಿಕೊಂಡು ನೀರನ್ನು ಪೂರೈಸಲಾಗುವುದು. ನೀರನ್ನು ವೆಸ್ಟ ಮಾಡುವವರಿಗೆ ದಂಡ ಹಾಕುತ್ತೇವೆ ಅಗತ್ಯ ಬಿದ್ದರೆ ಅವರ ನೀರಿನ ಕನೆಕ಼್ನನಗಳನ್ನು ಬಂದ ಮಾಡುತ್ತೇವೆ ಎಂದರು.