3,847 total views
ಕಲಬುರಗಿ:- ಕಲ್ಯಾಣ ಕರ್ನಾಟಕ ನೆಲದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕನ್ನುವ ಕ್ರೀಡಾ ಪಟುಗಳಿಗೆ ಯುವ ಪ್ರತಿಭಾವಂತ ಕೀಡಾ ಸಾಧಕಿ ಕುಮಾರಿ ಶ್ರೇಂಯಕಾ ಪಾಟೀಲ್ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಶ್ರೀಮತಿ ಲಕ್ಷೀ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಹೇಳಿದರು. ಕಲಬುರ್ಗಿ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ ಕರ್ನಾಟಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತದ ಮಹಿಳಾ ತಂಡ ಗಯಾನಾ ಅಮೆಜಾನ್ ವಾಥಿಯಾಸ್ರ್ಭಾ ಭಾರತ ತಂಡದ ಗೆಲುವನ್ನು ಪ್ರಮುಖ ಪಾತ್ರ ವಹಿಸಿದ್ದ ಕುಮಾರಿ ಶ್ರೇಯಾಂಕಾ ಪಾಟೀಲ್ ಅವರ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತಾನಾಡಿದ ಅವರು, ಪ್ರಪಂಚದಲ್ಲಿ ಇಂದು ಕ್ರೀಡಾ ವಿಭಾಗದಲ್ಲಿಯೇ ಕ್ರಿಕೆಟ್ ಆಟ ವೇಗವಾಗಿ ಬೆಳೆಯುತ್ತಿದ್ದು ವಿಶೇಷವಾಗಿ ಯುವ ಸಮೂಹದಲ್ಲಿ ಕ್ರಿಕೆಟ್ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ ಎಂದರು. ನಮ್ಮ ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ಕಪ್ ಪಡೆದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು ಯಲಗೋಡ ಮಠದ ಗುರುಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ನೀಲೂರ್ ಮಠದ ಶರಣಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು
ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಅರ್ಚನಾ ಬಸವರಾಜ್ ಪಾಟೀಲ್ ಬಿರಾಳ್. ಮಲ್ಲು ಉದನೂರ್. ಹಿರಿಯರಾದ ಗುರುಬಸಪ್ಪಗೌಡ ಪಾಟೀಲ್ ಬಿರಾಳ್, ಗೆಳೆಯರ ಬಳಗದ ಮ್ರಮುಖರಾದ ನಾಗಲಿಂಗಯ್ಯ ಮಠಪತಿ, ಬಸವರಾಜ್ ಪಾಟೀಲ್, ಶಿವು ಹಿರೇಮಠ್, ಗರುಶಾಂತಪ್ಪ ಸಿಕೇದ್, ಮಲ್ಲಿಕಾರ್ಜುನ್ ಸಾರವಾಡ್, ಗುಂಡು ವಾರದ್, ಅರುಣಕುಮಾರ್ ಮಾಶಟ್ಟಿ ಮುಂತಾದವರು ಉಪಸ್ಥಿತರಿದ್ದರು.
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್