2,675 total views
ಕಾರ್ಕಳ ತಾಲೂಕು ದಂಡಾಧಿಕಾರಿ ನರಸಪ್ಪ, ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರು ಶಾಂತಪ್ಪ, ಹಾಗೂ ಪುರಸಭಾ ಮುಖ್ಯ ಅಧಿಕಾರಿ, ರೂಪಾ ಟಿ ಶೆಟ್ಟಿ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜನಜಾಗ್ರತಿ ಮೂಡಿಸುವ ಉದ್ದೇಶದಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಬೃಹತ್ ಜನಜಾಗ್ರತಿ ಸಭೆ ಜರುಗಿತು. ಸಭೆ ಉದ್ದೇಶಿಸಿ ಮಾತನಾಡಿದ ಕಾರ್ಕಳ ತಾಲೂಕು ದಂಡಾಧಿಕಾರಿ ಭಾರತ ಒಂದು ಪ್ರಪಂಚದಲ್ಲಿ ಅತಿ ಬಲಿಷ್ಠವಾದ ರಾಷ್ಟ್ರವಾಗಿದೆ. ಪ್ರತಿ ಚುನಾವಣೆಯಲ್ಲಿ ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗುವುದನ್ನು ನಾವು ನೋಡು ಬಂದಿದ್ದೇವೆ. ಇದೇ ತಿಂಗಳು 26 ನೇ ದಿನಾಂಕದಂದು ನಾವು ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ ಎಂದು ಈ ದಿನ ನಾವು ಪ್ರತಿಜ್ಞೆಯನ್ನು ಮಾಡಬೇಕೆಂದು ಹೇಳಿದರು . ಕಾರ್ಕಳ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಗುರು ಶಾಂತಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾವು ಶೇಖಡ ನೂರರಷ್ಟು ಮತವನ್ನು ಚಲಾಯಿಸಿ ನಾವು ಒಳ್ಳೆ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ವಿನಂತಿ ಮಾಡಿದರು. ನಂತರ ಮಾತನಾಡಿದ ಕಾರ್ಕಳ ಪುರಸಭೆ ಅಧಿಕಾರಿ ರೂಪ ಟಿ ಶೆಟ್ಟಿ ಯವರು ಈ ಕಾರ್ಯಕ್ರಮವು ಜನರಿಗೆ ಮತದಾನದ ಬಗ್ಗೆ ಮನವರಿಕೆ ಮಾಡುವ ಉತ್ತಮ ಕಾರ್ಯಕ್ರಮವಾಗಿದೆ. ನಮ್ಮ ಒಂದು ಮತದಿಂದ ಇಡೀ ದೇಶ ಬದಲಾಗುವ ಸಾಧ್ಯತೆ ಇದೆ. ಎಂದು ಹೇಳಿದರು. ಈ ಜನ ಜಾಗೃತಿ ಸಭೆಯಲ್ಲಿ ಹಲವು ಸಂಘ ಸಂಸ್ಥೆಗಳು ಕೃಷಿ ಇಲಾಖೆ ಆರೋಗ್ಯ ಇಲಾಖೆ ಮೆಸ್ಕಾ ಇಲಾಖೆ, ಹಾಗೂ ಪುರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಪುರಸಭೆ ಆರೋಗ್ಯಧಿಕಾರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.