2,651 total views
ಯಡ್ರಾಮಿ ತಾಲ್ಲೂಕಿನ ಸಂಜೆವಾಣಿ ಪತ್ರಿಕೆಯ ವರದಿಗಾರರಾದ ಮಡಿವಾಳಪ್ಪ ಯತ್ನಾಳ್ ಅವರು ಹಲವಾರು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಸುಧೀರ್ಘವಾದ ಸೇವೆಯನ್ನು ಸಲ್ಲಿಸಿದ್ದಾರೆ ಅದೇ ರೀತಿಯಾಗಿ ಯಡ್ರಾಮಿ ತಾಲೂಕಿನ ಪ್ರಗತಿಪರ ಚಿಂತಕರು ಕಡು ಭ್ರಷ್ಟಾಚಾರ ವಿರೋಧಿ ಹಾಗೂ ಸರ್ವ ಸಮುದಾಯವನ್ನು ಗೌರವಿಸುವಂತಹ ವಿಶಿಷ್ಟ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ ಹಲವಾರು ಭ್ರಷ್ಟಾಚಾರದ ವರದಿಗಳನ್ನು ಮಾಡಿ ಸರ್ಕಾರಕ್ಕೆ ಚಾಟಿಯನ್ನು ಬೀಸಿದ್ದಾರೆ ತಾಲೂಕಿನ ಕೆಲವು ಭ್ರಷ್ಟ ಅಧಿಕಾರಿಗಳಿಗೆ ನಿದ್ದೆಯಲ್ಲು ಬೆವರುವಂತೆ ಮಾಡಿದ ತಾಲೂಕಿನ ಏಕೈಕ ನಿರ್ಭೀತೀಯ ಪತ್ರಕರ್ತರು ಮಡಿವಾಳಪ್ಪ ಯತ್ನಾಳ್ ಅವರು ತಾಲೂಕಿನ ಖ್ಯಾತ ಪತ್ರಕರ್ತರು ಸರಳ ಸಜ್ಜನಿಕೆಗೆ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಡಿವಾಳಪ್ಪ ಯತ್ನಾಳ್ ಯಾಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಪತ್ರಕರ್ತರ ಹೆಸರಿನಲ್ಲಿ ಧಮ್ಕಿ ಹಾಕುವ ನಕಲಿ ಪತ್ರ ಕರ್ತರಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರುವಂತಹ ಕೆಲಸ ಮಡಿವಾಳಪ್ಪ ಯತ್ನಾಳ್ ಅವರು ಮಾಡಿದ್ದಾರೆ ಅದೇ ರೀತಿಯಾಗಿ ತಾಲೂಕಿನ ಕೆಲವೊಂದು ಅಧಿಕಾರಿಗಳಿಗೆ ಬರವಣಿಗೆಯ ಮುಖಾಂತರ ಬಿಸಿ ಮುಟ್ಟಿಸಿದ್ದಾರೆ ತಾಲೂಕಿನ ಕೆಲವೊಂದು ವರದಿಗಳನ್ನು ಯಾವುದೇ ಅಲ್ಪ ಆಮೀಷೆಗಳಿಗೆ ಬಲಿಯಾಗದೆ ಯಾವುದೇ ಗೊಡ್ಡ ಬೆದರಿಕೆಗೆ ಸೊಪ್ಪು ಹಾಕದೆ ನೇರವಾಗಿ ಸುದ್ದಿ ಮಾಡಿದ್ದಾರೆ ಇಂತಹ ಪ್ರಾಮಾಣಿಕ ಪತ್ರಕರ್ತರಾದ ಮಡಿವಾಳಪ್ಪ ಯತ್ನಾಳ್ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ನೀಡಬೇಕು ಎಂದು ಯಡ್ರಾಮಿ ತಾಲೂಕಿನ ಜನತೆ ಮೆಚ್ಚುಗೆಯ ಮಾತನಾಡಿಕೊಳ್ಳುತ್ತಿದ್ದಾರೆ ಅದೇ ರೀತಿಯಾಗಿ ಮಡಿವಾಳಪ್ಪ ಯತ್ನಾಳ್ ಅವರು ತಾಲೂಕಿನ ಇನ್ನಷ್ಟು ನಿಖರವಾದ ಸುದ್ದಿಗಳನ್ನು ಸರಕಾರದ ಮುಂದಿಟ್ಟು ಯಡ್ರಾಮಿ ತಾಲೂಕಿನ ಜನತೆಯ ಕಣ್ಣು ತೆರಿಸಲಿ ಎಂದು ಯಡ್ರಾಮಿ ತಾಲೂಕಿನ ಹಿತ ಚಿಂತಕರು ಹಾಗೂ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ